ಸಮಗ್ರ ಸುದ್ದಿವಿಶೇಷ GK: ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು (Current Affairs Q&A)

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (KPSC, KSP, FDA, SDA, PSI, Banking ಇತ್ಯಾದಿ) ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉಪಯುಕ್ತವಾಗುವಂತಹ 2026ನೇ ಸಾಲಿನ ಪ್ರಮುಖ ಪ್ರಚಲಿತ ವಿದ್ಯಮಾನಗಳ (Current Affairs) ಸಮಗ್ರ ಮಾಹಿತಿ ಇಲ್ಲಿದೆ:

೧. ಇತ್ತೀಚೆಗೆ ನಡೆದ NEET-UG ಪರೀಕ್ಷೆಯ ವಿವಾದದ ಹಿನ್ನೆಲೆಯಲ್ಲಿ NTA ವ್ಯವಸ್ಥೆಯನ್ನು ಮರುರೂಪಿಸಲು ರಚಿಸಲಾದ ಉನ್ನತ ಮಟ್ಟದ ಸಮಿತಿಯ ನೇತೃತ್ವ ವಹಿಸಿದವರು ಯಾರು?

ಉತ್ತರ: ನಂದನ್ ನಿಲೇಕಣಿ

೨. ಆರೋಗ್ಯ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ (AI) ಆವಿಷ್ಕಾರಗಳನ್ನು ಬೆಂಬಲಿಸಲು ಮೈಕ್ರೋಸಾಫ್ಟ್ ಇಂಡಿಯಾ ಮತ್ತು ಐಐಟಿ ದೆಹಲಿ ಜಂಟಿಯಾಗಿ ಪ್ರಾರಂಭಿಸಿದ ಯೋಜನೆಯ ಹೆಸರೇನು? ಉತ್ತರ: ಉನ್ನತಿ ಎಐ 2.0 (UNNATI AI 2.0)

೩. ಕೇರಳದ ನಂತರ ಭಾರತದಲ್ಲಿ ಸಮಗ್ರ ‘ಪಕ್ಷಿ ಅಟ್ಲಾಸ್’ (Bird Atlas) ಅನ್ನು ಪ್ರಕಟಿಸಿದ ಎರಡನೇ ರಾಜ್ಯ ಯಾವುದು?

ಉತ್ತರ: ಗೋವಾ

೪. ಸಮಗ್ರ ಕರಾವಳಿ ನಿರ್ವಹಣೆಗಾಗಿ ‘ಸಾಗರ ಪ್ರಾದೇಶಿಕ ಯೋಜನೆ’ಯನ್ನು (ಮರೈನ್ ಸ್ಪೇಷಿಯಲ್ ಪ್ಲಾನ್ – MSP) ಪ್ರಾರಂಭಿಸಿದ ಭಾರತದ ಮೊದಲ ರಾಜ್ಯ ಯಾವುದು?

ಉತ್ತರ: ಒಡಿಶಾ

೫. ಗುಜರಾತ್ ಸರ್ಕಾರದ ವತಿಯಿಂದ ‘ಇಂಡೋ-ತೈವಾನ್ ಇಂಡಸ್ಟ್ರಿಯಲ್ ಪಾರ್ಕ್’ ಅನ್ನು ಎಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ?

ಉತ್ತರ: ಸಾನಂದ್-ಧೋಲೇರಾ ಪ್ರದೇಶದಲ್ಲಿ

೬. ನವದೆಹಲಿಯಲ್ಲಿ ಇತ್ತೀಚೆಗೆ ರಾಷ್ಟ್ರೀಯ ಸೈಬರ್ ಭದ್ರತಾ ಸಮ್ಮೇಳನವನ್ನು ಜಂಟಿಯಾಗಿ ಆಯೋಜಿಸಿದ ಸಂಸ್ಥೆಗಳು ಯಾವುವು? ಉತ್ತರ: ಸಿಬಿಐ (CBI) ಮತ್ತು ಭಾರತೀಯ ಸೈಬರ್ ಕ್ರೈಂ ಸಂಯೋಜನಾ ಕೇಂದ್ರ (I4C)

೭. ‘ಡಸ್ಟ್ಲಿಕ್ 2026’ (DUSTLIK 2026) ಜಂಟಿ ಮಿಲಿಟರಿ ಸಮರಾಭ್ಯಾಸವು ಯಾವ ಎರಡು ದೇಶಗಳ ಸೇನೆಗಳ ನಡುವೆ ನಡೆಯಿತು?

ಉತ್ತರ: ಭಾರತ ಮತ್ತು ಉಜ್ಬೇಕಿಸ್ತಾನ್

೮. ಭಾರತ ಮತ್ತು ಫ್ರಾನ್ಸ್ ದೇಶಗಳ ನಡುವೆ ನಡೆಯುವ ಪ್ರಮುಖ ನೌಕಾ ಸಮರಾಭ್ಯಾಸದ ಹೆಸರೇನು? ಉತ್ತರ: ವರುಣ 2026 (Exercise Varuna)

೯. ಏಷ್ಯನ್ ರೈಫಲ್ ಮತ್ತು ಪಿಸ್ತೂಲ್ ಚಾಂಪಿಯನ್‌ಶಿಪ್ 2026ರ 10 ಮೀಟರ್ ಏರ್ ರೈಫಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಭಾರತೀಯರು ಯಾರು?

ಉತ್ತರ: ಅರ್ಜುನ್ ಬಬುಟಾ ಮತ್ತು ಎಲವನೇಲ್ ವಲರಿವನ್

೧೦. 7ನೇ ಪ್ಯಾರಾ ಆರ್ಚರ್ಸ್ ರಾಷ್ಟ್ರೀಯ ಚಾಂಪಿಯನ್‌ಶಿಪ್ 2026 ಅನ್ನು ಎಲ್ಲಿ ಆಯೋಜಿಸಲಾಗಿತ್ತು? ಉತ್ತರ: ಪಂಜಾಬ್‌ನ ಪಟಿಯಾಲಾದಲ್ಲಿ

Leave a Reply

Your email address will not be published. Required fields are marked *