ಚಿತ್ರದುರ್ಗ ಸೆ. 15
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರದ ಆನೆ ಬಾಗಿಲ ಬಳಿ ಇರುವ ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯವತಿಯಿಂದ 69ನೇ ವರ್ಷದ ಗಣಪತಿ ಪೂಜಾ ಮಹೋತ್ಸವವನ್ನು ಸೆ. 14 ರ ಸೋಮವಾರ ಬೆಳಿಗ್ಗೆ ನಡೆದ ಪೂಜಾ ಕಾರ್ಯಕಮದ ಮೂಲಕ ಚಾಲನೆಯನ್ನು ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ಪದಾಧಿಕಾರಿಗಳು ನಡೆಸಿಕೊಟ್ಟರು, ಇದೇ ರೀತಿ ಸೆ, 24ರವರೆಗೆ ಪ್ರತಿ ದಿನ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗದ ಶಿಲ್ಪಿಗಳಾದ ರಾಮಕೃಷ್ಣ ಪಾಂಡುರಂಗರವರು ಶ್ರೀ ಪ್ರಸನ್ನ ಗಣಪತಿಯನ್ನು ಹಾಗೂ ಚಿತ್ತಾಕರ್ಷಕ ವಾದ ಪೆಂಡಾಲ್ನ್ನು ರಾಜು ಜಿ.ಎಂ. ನಿರ್ಮಾಣ ಮಾಡಿದ್ದಾರೆ. ಪ್ರತಿ ದಿನ ಗಣಪತಿಗೆ ನವಗ್ರಹ ಹೋಮ, ಸಹಸ್ರನಾಮ ಕುಂಕುಮಾರ್ಚನೆ, ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿದೆ.
ಸೆ.23ರವರೆಗೆ ಪ್ರತಿ ದಿನ ಸಂಜೆ 6 ಗಂಟೆಯಿಂದ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸೆ, 23ರಂದು ನವಗ್ರಹ ಹೋಮ, ಸಹಸ್ರ ಮೋದಕ ಗಣಹೋಮ. ಮಧ್ಯಾಹ್ನ 12ಕ್ಕೆ ಪೂರ್ಣಹುತಿ ನಡೆಯಲಿದ್ದು
ಸೆ, 24ರ ಸಂಜೆ 6 ಗಂಟೆಯಿಂದ ಸರ್ವ ಅಲಂಕಾರ ವಿದ್ಯುತ್ ದೀಪದ ರಥದಲ್ಲಿ ಸಕಲ ದೇವ ಮರ್ಯಾದೆಗಳೊಂದಿಗೆ ಶ್ರೀ ಶಾರದ ಬ್ರಾಸ್ ಬ್ಯಾಂಡ್ ವಾದ್ಯಗೋಷ್ಟಿಯೊಂದಿಗೆ ಶ್ರೀ ಪ್ರಸನ್ನ ಗಣಪತಿ ಉತ್ಸವ ನಡೆಯಲಿದ್ದು, ರಾತ್ರಿ 10.30ಕ್ಕೆ ಚಂದ್ರವಳ್ಳಿ ಕರೆಯಲ್ಲಿ ಗಣಪತಿಯನ್ನು ಉದ್ಘಾಸನೆ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಜೆ.ಗೋಪಾಲರಾವ್ ಜಾಧª ಅಧ್ಯಕ್ಷರಾದ ಎಲ್.ಎನ್.ರಾಜಕುಮಾರ್, ಉಪಾಧ್ಯಕ್ಷರಾದ ಎ.ಎಸ್.ನಾರಾಯಣರಾವ್, ಕೆ.ವಿ.ಆನಂದ್, ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ. ನಾಗರಾಜ್ ಬೇದ್ರೇ, ಖಂಜಾಚಿ ಸಿ.ಶ್ಯಾಂ ಪ್ರಸಾದ್ ಸ್ಥಪತಿ, ಸಹ ಕಾರ್ಯದರ್ಶಿ ಡಿ.ಆರ್.ಮಂಜುನಾಥ್, ಸಹ ಕಾರ್ಯದರ್ಶಿ ಎನ್.ವಿ.ರಮೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಜೆ.ಎನ್.ಶಂಭು, ನಿರ್ದೇಶಕ ರುಗಳಾದ ಜಿ.ಟಿ.ಗೋಪಾಲಕೃಷ್ಣ ಜಾಧವ್, ಗಜೇಂದ್ರ, ಸಿದ್ದಲಿಂಗೇಶ್ ಜಿ.ಕೆ. ಟಿ. ಯಶವಂತಕುಮಾರ್, ಕಾರ್ತಿಕ್ ಕಠಾರೆ, ವಿದ್ಯಾನಂದ ಲಾಡ್, ಕೃಷ್ಣಜಿರಾವ್ ಮೋರೆ, ಉತ್ಸವ ಸಮಿತಿ ಸದಸ್ಯರಾದ ಎ.ಟಿ.ರಮೇಶ್ ಹಾಗೂ ನಾಗವೀವೇಕ್ ಭಾಗವಹಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j