72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು (2024): ಪ್ರಮುಖ ಮುಖ್ಯಾಂಶಗಳು ಮತ್ತು ವಿಜೇತರ ಪಟ್ಟಿ
ಕಾರ್ಯಕ್ರಮದ ವಿಶೇಷತೆಗಳು
- ಐತಿಹಾಸಿಕ ಬದಲಾವಣೆ: ೭೨ ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೆಹಲಿಯಿಂದ ಹೊರಗೆ, ಗುಜರಾತ್ನ ಏಕ್ತಾ ನಗರದಲ್ಲಿ (ಹಿಂದಿನ ಕೆವಾಡಿಯಾ) ಸಮಾರಂಭವನ್ನು ಆಯೋಜಿಸಲಾಯಿತು.
- ಪ್ರಶಸ್ತಿ ಪ್ರದಾನ: ರಾಷ್ಟ್ರಪತಿ ದ್ರೌಪದಿ ಮುರ್ಮು.
- ಅರ್ಹತಾ ಅವಧಿ: ಜನವರಿ 1, 2024 ರಿಂದ ಡಿಸೆಂಬರ್ 31, 2024 ರವರೆಗೆ ಪ್ರಮಾಣೀಕರಿಸಲ್ಪಟ್ಟ ಚಿತ್ರಗಳನ್ನು ಪರಿಗಣಿಸಲಾಗಿದೆ.
- ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: 6 ಭಾಷೆಗಳಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ಈ ಸಾಲಿನ ಅತ್ಯುನ್ನತ ಚಲನಚಿತ್ರ ಗೌರವ ಒಲಿದಿದೆ.
ಕನ್ನಡ ಮತ್ತು ತುಳು ಚಿತ್ರರಂಗದ ಸಾಧನೆ
- ಅತ್ಯುತ್ತಮ ಕನ್ನಡ ಚಿತ್ರ: ಮಿಥ್ಯ (ನಿರ್ದೇಶನ: ಸುಮಂತ್ ಭಟ್, ನಿರ್ಮಾಣ: ಪರಂವಃ ಪಿಕ್ಚರ್ಸ್ ಮತ್ತು ಕೆಆರ್ಜಿ ಸ್ಟುಡಿಯೋಸ್)
- ಅತ್ಯುತ್ತಮ ತುಳು ಚಿತ್ರ: ಇಂಬು (ನಿರ್ದೇಶನ: ಶಿವಧ್ವಜ್ ಶೆಟ್ಟಿ)
- ಅತ್ಯುತ್ತಮ ಬಾಲ ಕಲಾವಿದ: ಅತೀಶ್ ಎಸ್ ಶೆಟ್ಟಿ (ಮಿಥ್ಯ)
- ಅತ್ಯುತ್ತಮ ಪೋಷಕ ನಟಿ: ರೂಪಶ್ರೀ ವರ್ಕಾಡಿ (ಮಿಥ್ಯ)
- ಸಿನಿಮಾ ಬಗ್ಗೆ ಅತ್ಯುತ್ತಮ ಪುಸ್ತಕ: ‘ನಾನಿರುವುದೇ ನಿಮಗಾಗಿ ನಾಡಿರುವುದೇ ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ’ (ಲೇಖಕ: ಕೆಂಚನೂರು ಪ್ರದೀಪ್ ಕುಮಾರ್ ಶೆಟ್ಟಿ, ಪ್ರಕಾಶಕರು: ಮಿರರ್ ಬುಕ್ಸ್).

ಪ್ರಮುಖ ಫೀಚರ್ ಚಲನಚಿತ್ರ ಪ್ರಶಸ್ತಿಗಳು
| ಪ್ರಶಸ್ತಿ ವಿಭಾಗ | ವಿಜೇತರು | ಚಲನಚಿತ್ರ |
|---|---|---|
| ಅತ್ಯುತ್ತಮ ಚಲನಚಿತ್ರ | – | ಆರ್ಟಿಕಲ್ 370 |
| ಅತ್ಯುತ್ತಮ ನಟ | ಕಾರ್ತಿಕ್ ಆರ್ಯನ್, ಮಮ್ಮುಟ್ಟಿ | ಚಂದು ಚಾಂಪಿಯನ್, ಬ್ರಮಯುಗಂ |
| ಅತ್ಯುತ್ತಮ ನಟಿ | ಯಾಮಿ ಗೌತಮ್ | ಆರ್ಟಿಕಲ್ 370 |
| ಅತ್ಯುತ್ತಮ ನಿರ್ದೇಶಕ | ರಾಜ್ಕುಮಾರ್ ಪೆರಿಯಸಾಮಿ | ಅಮರನ್ |
| ಉತ್ತಮ ಮನರಂಜನೆ ನೀಡಿದ ಚಿತ್ರ | – | ಕಲ್ಕಿ 2898 ಎಡಿ |
| ರಾಷ್ಟ್ರೀಯ/ಸಾಮಾಜಿಕ ಮೌಲ್ಯಗಳ ಚಿತ್ರ | – | ಕ್ಯಾಪ್ಟನ್ ಮಿಲ್ಲರ್ |
| ಅತ್ಯುತ್ತಮ ಪೋಷಕ ನಟ | ಸಂಜಯ್ ಮಿಶ್ರಾ | ಭಕ್ಷಕ್ |
| ಅತ್ಯುತ್ತಮ ಪೋಷಕ ನಟಿ (ಹಂಚಿಕೆ) | ಸಚನಾ ನಮಿದಾಸ್, ರೂಪಶ್ರೀ ವರ್ಕಾಡಿ | ಮಹಾರಾಜ, ಮಿತ್ಯ |
| ಅತ್ಯುತ್ತಮ ಚಿತ್ರಕಥೆ | ಸುಕುಮಾರ್ | ಪುಷ್ಪ 2 |

ತಾಂತ್ರಿಕ ಹಾಗೂ ಸಂಗೀತ ವಿಭಾಗ (ಪ್ರಮುಖರ ಪಟ್ಟಿ)
- ಅತ್ಯುತ್ತಮ ಛಾಯಾಗ್ರಹಣ: ಶೆಹನಾದ್ ಜಲಾಲ್ (ಬ್ರಹ್ಮಯುಗಂ)
- ಅತ್ಯುತ್ತಮ ಸಂಗೀತ ನಿರ್ದೇಶನ: ಶಾಶ್ವತ್ ಸಚ್ದೇವ್ (ಆರ್ಟಿಕಲ್ 370)
- ಹಿನ್ನೆಲೆ ಸಂಗೀತಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶನ: ಅಮರನ್
- ಅತ್ಯುತ್ತಮ ಹಿನ್ನೆಲೆ ಗಾಯಕ/ಗಾಯಕಿ: ಅಭಯ್ ಜೋಧ್ಪುರ್ಕರ್ (ಘರತ್ ಗಣಪತಿ) ಮತ್ತು ವೈಕಂ ವಿಜಯಲಕ್ಷ್ಮಿ (ಎಆರ್ಎಂ)
- ಅತ್ಯುತ್ತಮ ಸಾಹಸ ನಿರ್ದೇಶನ: ಅನ್ಲ್ ಅರಸು (ಮಹಾರಾಜ)
ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರಗಳು
- ಹಿಂದಿ: ಶ್ರೀಕಾಂತ್
- ಮಲಯಾಳಂ: ಫೆಮಿನಿಚಿ ಫಾತಿಮಾ
- ತಮಿಳು: ರಾಯನ್
- ತೆಲುಗು: ಕಮಿಟಿ ಕುರ್ರೊಲು
- ಮರಾಠಿ: ಮುಖಂ ಪೋಸ್ಟ್ ಬಾಂಬಿಲವಾಡಿ
- ಬಂಗಾಳಿ: ಚಲಚಿತ್ರ ಎಖೋನ್
ನಾನ್-ಫೀಚರ್ ವಿಭಾಗ (ಪ್ರಮುಖ ಪ್ರಶಸ್ತಿಗಳು)
- ಅತ್ಯುತ್ತಮ ಸಾಕ್ಷ್ಯಚಿತ್ರ: ರಾಮ್-ನಾಮಿ (ನಿರ್ದೇಶನ: ಭಾರತಿಬಾಲ ಗಣಪತಿ)
- ಸಾಮಾಜಿಕ ಮತ್ತು ಪರಿಸರ ಮೌಲ್ಯಗಳ ಚಿತ್ರ: ಪಿಪ್ಲಾಂಟ್ರಿ: ಎ ಟೇಲ್ ಆಫ್ ಇಕೋ ಫೆಮಿನಿಸಂ
- ಅತ್ಯುತ್ತಮ ಅನಿಮೇಷನ್ ಚಿತ್ರ: ಟಚ್ಡ್ ಆ್ಯಸ್ ವಾಟರ್ (ಸೈಲೆಂಟ್)
- ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ: ಅಂಜೆನ್ (ನಿರ್ದೇಶನ: ರವಿ ರಾಜ್ ಮುರ್ಮು)
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j