ಚಿತ್ರದುರ್ಗ|ತುರ್ತು ಸೇವೆಗೆ ಬಲ ತುಂಬಿದ ಹೊಸ ಪೊಲೀಸ್ ಜೀಪ್:ಎಂಎಲ್‌ಸಿ ಕೆ.ಎಸ್. ನವೀನ್ ಕೊಡುಗೆ.

ಚಿತ್ರದುರ್ಗ ಆ. 03

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಪೊಲೀಸರಿಗೆ ಅನೇಕ ಕರೆಗಳು ಬರುತ್ತಿರುತ್ತವೆ. ಕಾನೂನು ಸಹಾಯ ಬೇಡುವವರು, ಕಷ್ಟದಲ್ಲಿರುವವರಿಗೆ ಹೊಸ ಮಾಡಲ್ ಜೀಪ್ ನೆರವಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು.

ಚಿತ್ರದುರ್ಗ ನಗರದ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಪೊಲೀಸ್ ವರಿಷ್ಟಾಧಿಕಾರಿಗೆ ಹದಿನಾಲ್ಕು ಲಕ್ಷ ರೂ.ಬೆಲೆಯ ಮಹೇಂದ್ರ ಹೊಸ ಮಾಡೆಲ್ ಜೀಪನ್ನು ವಿತರಿಸಿ ಮಾತನಾಡಿದ ಅವರು, ತುರ್ತು ಸಂದರ್ಭಗಳಲ್ಲಿ ಹಾಗೂ ತೊಂದರೆಯಲ್ಲಿರುವವರಿಗೆ ನೆರವಾಗಲಿ ಎನ್ನುವ ಉದ್ದೇಶದಿಂದ ಪೊಲೀಸ್ ಇಲಾಖೆಗೆ ನನ್ನ ಅನುದಾನದಲ್ಲಿ ಇದನ್ನು ನೀಡಲಾಗುತ್ತಿದೆ. ರಕ್ಷಣಾಧಿಕಾರಿ ರಂಜಿತ್ ಕುಮಾರ್ ಭಂಡಾರು ಕೋರಿಕೆಯ ಮೇರೆಗೆ ಜೀಪ್ ನೀಡಿದ್ದೇನೆ. ಪೊಲೀಸರಿಗೆ ಅನೇಕ ಕರೆಗಳು ಬರುತ್ತಿರುತ್ತವೆ. ಕಾನೂನು ಸಹಾಯ ಬೇಡುವವರು, ಕಷ್ಟದಲ್ಲಿರುವವರಿಗೆ ಹೊಸ ಮಾಡಲ್ ಜೀಪ್ ನೆರವಾಗಲಿ. ಕೆಲವು ಸಂದರ್ಭಗಳಲ್ಲಿ ಗಣ್ಯರಿಗೆ ಎಸ್ಕಾರ್ಟ್ ನೀಡುವುದಕ್ಕಾಗಿಯೆ ವಾಹನಗಳ ಬಳಕೆಯಾಗುತ್ತಿರುತ್ತದೆ. ಇವೆಲ್ಲವನ್ನು ಮನಗಂಡು ಇಲಾಖೆಗೆ ಹೊಸ ವಾಹನ ಕೊಟ್ಟಿದ್ದೇನೆಂದು ಹೇಳಿದರು.

ಬಿಜೆಪಿ.ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ಎಸ್ಸಿ. ಮೋರ್ಚಾ ಅಧ್ಯಕ್ಷ ಪರಶುರಾಮ್, ಪ್ರಧಾನ ಕಾರ್ಯದರ್ಶಿ ಚೇತನ ಕುಮಾರ್, ಉಪಾಧ್ಯಕ್ಷ ಧನಂಜಯ್, ಯಶವಂತ್, ಕಿರಣ್ ಓಬಳೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *