ಚಿತ್ರದುರ್ಗ| 69ನೇ ವರ್ಷದ ಪ್ರಸನ್ನ ಗಣಪತಿ ಮಹೋತ್ಸವ ಸಂಪನ್ನ: ಚಂದ್ರವಳ್ಳಿಯಲ್ಲಿ ಅದ್ದೂರಿ ವಿಸರ್ಜನೆ.

ಚಿತ್ರದುರ್ಗ ಸೆ. 25

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನಗರದ ಆನೆ ಬಾಗಿಲ ಬಳಿ ಇರುವ ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿವತಿಯಿಂದ 69ನೇ ವರ್ಷದ ಶ್ರೀ ಪ್ರಸನ್ನ ಗಣಪತಿಯ ಪೂಜಾ ಮಹೋತ್ಸ ವದ ಸೆ. 14 ರಿಂದ ಸೆ. 24ರವರೆಗೆ ಸಾಂಗವಾಗಿ ನೆರವೇರಿದ್ದು ಶೆ. 24ರ ಸಂಜೆ ಗಣಪತಿಯ ಮೆರವಣಿಗೆ ಅದ್ದೂರಿಯಾಗಿ ನಡೆದಿದ್ದು ರಾತ್ರಿ ಚಂದ್ರವಳ್ಳಿಯಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಲಾಯಿತು.

ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ 69ನೇ ವರ್ಷದ ಶ್ರೀ ಪ್ರಸನ್ನ ಗಣಪತಿಯ ಪೂಜಾ ಮಹೋತ್ಸವದ ಅಂಗವಾಗಿ ಪ್ರತಿ ದಿನ ಗಣಪತಿಗೆ ನವಗ್ರಹ ಹೋಮ, ಸಹಸ್ರನಾಮ ಕುಂಕುಮಾರ್ಚನೆ, ಮಹಾ ಮಂಗಳಾರತಿ ಪ್ರಸಾದ್ ವಿನಿಯೋಗ ಕಾರ್ಯಕ್ರಮ ನಡೆದಿದ್ದು, ಸೆ, 23ರಂದು ನವಗ್ರಹ ಹೋಮ, ಸಹಸ್ರ ಮೋದಕ ಗಣಹೋಮ. ಪೂರ್ಣಹುತಿ ನಡೆದಿದ್ದು, ಸೆ.15 ರಿಂದ 23ರವರೆಗೆ ಪ್ರತಿ ದಿನ ಸಂಜೆ 6 ಗಂಟೆಯಿಂದ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು ಸೆ, 24ರ ಸಂಜೆ 6 ಗಂಟೆಯಿಂದ ಸಕಲ ದೇವ ಮರ್ಯಾದೆಗಳೊಂದಿಗೆ ಶ್ರೀ ಪ್ರಸನ್ನ ಗಣಪತಿ ಉತ್ಸವ ನಡೆದಿದು, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಶ್ರೀ ಕನ್ನಿಕಾಪರಮೇಶ್ವರಿ ಸೌಹಾರ್ದ ಸಹಕಾರಿ ಬ್ಯಾಂಕ್‍ನ ಉಪಾಧ್ಯಕ್ಷರು, ಬಿಜೆಪಿ ಮುಖಂಡರಾದ ಬದರಿನಾಥ್ ರವರು ಗಣಪತಿ ಮಹೋತ್ಸವಕ್ಕೆ ಚಾಲನೆಯನ್ನು ನೀಡಿದರು.

ಈ ಸಮಯದಲ್ಲಿ ವರುಣ ಸಹಾ ಗಣಪತಿಯ ವಿಸರ್ಜನೆಯನ್ನು ಕಂಡು ಕಣ್ಣೀರು ಸುರಿಸುವ ರೀತಿಯಲ್ಲಿ ಮಳೆಯನ್ನು ಸುರಿಸಿತು. ಈ ಹಿನ್ನಲೆಯಲ್ಲಿ ಅರ್ಧಗಂಟೆಯ ವರೆಗೂ ಮೆರವಣಿಗೆಯನ್ನು ನಿಲ್ಲಿಸಲಾಯಿತು, ತದ ನಂತರ ಮೆರವಣಿಗೆಯು ಸಂತೇಪೇಟೆ ವೃತ್ತ, ಬಿ.ಡಿ.ರಸ್ತೆ, ಎಸ್.ಬಿ.ಎಂ.ವೃತ್ತ, ಧರ್ಮಶಾಲಾ ರಸ್ತೆ, ವಾಸವಿ ಶಾಲೆಯ ಮುಂಭಾಗ ದೊಡ್ಡಪೇಟೆ, ಉಚ್ಚಂಗಿ ಯಲ್ಲಮ್ಮ ದೇವಾಲಯ, ಚಿಕ್ಕಪೇಟೆ ಆನೆಬಾಗಿಲು ಕೋಟೆ ಅಂಜನೇಯ ಸ್ವಾಮಿ ದೇವಾಲಯ ಬುರುಜನಹಟ್ಟಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಹೊಳಲ್ಕೆರೆ ರಸ್ತೆಯ ಮೂಲಕ ಚಂದ್ರವಳ್ಳಿ ನಿರ್ಮಾಣ ಮಾಡಲಾದ ನೀರಿನ ಹೊಂಡದಲ್ಲಿ ಗಣಪತಿಯನ್ನು ಉದ್ಘಾಸನೆ ಕಾರ್ಯಕ್ರಮ ರಾತ್ರಿ 10.30ಕ್ಕೆ ನಡೆಯಿತು. ಈ ಸಮಯದಲ್ಲಿ ಶ್ರೀ ಶಾರದ ಬ್ರಾಸ್ ಬ್ಯಾಂಡ್‍ನ ವಾದ್ಯದೊಂದಿಗೆ ಗಣಪತಿಯ ಮೆರವಣಿಗೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಜೆ.ಗೋಪಾಲರಾವ್ ಜಾಧª ಅಧ್ಯಕ್ಷರಾದ ಎಲ್.ಎನ್.ರಾಜಕುಮಾರ್, ಉಪಾಧ್ಯಕ್ಷರಾದ ಎ.ಎಸ್.ನಾರಾಯಣರಾವ್, ಕೆ.ವಿ.ಆನಂದ್, ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ. ನಾಗರಾಜ್ ಬೇದ್ರೇ, ಖಂಜಾಚಿ ಸಿ.ಶ್ಯಾಂ ಪ್ರಸಾದ್ ಸ್ಥಪತಿ, ಸಹ ಕಾರ್ಯದರ್ಶಿ ಡಿ.ಆರ್.ಮಂಜುನಾಥ್, ಸಹ ಕಾರ್ಯದರ್ಶಿ ಎನ್.ವಿ.ರಮೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಜೆ.ಎನ್.ಶಂಭು, ನಿರ್ದೇಶಕರುಗಳಾದ ಜಿ.ಟಿ.ಗೋಪಾಲಕೃಷ್ಣ ಜಾಧವ್, ಗಜೇಂದ್ರ, ಸಿದ್ದಲಿಂಗೇಶ್ ಜಿ.ಕೆ. ಟಿ. ಯಶವಂತಕುಮಾರ್, ಕಾರ್ತಿಕ್ ಕಠಾರೆ, ವಿದ್ಯಾನಂದ ಲಾಡ್, ಕೃಷ್ಣಜಿರಾವ್ ಮೋರೆ, ಉತ್ಸವ ಸಮಿತಿ ಸದಸ್ಯರಾದ ಎ.ಟಿ.ರಮೇಶ್ ಹಾಗೂ ನಾಗವೀವೇಕ್ ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *