ಚಿತ್ರದುರ್ಗ ಮೇ. 29
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕರ್ನಾಟಕ ರಾಜ್ಯ ಕಾಂಗ್ರೆಸ್ನ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಅಧ್ಯಕ್ಷರಾದ ಆರ್.ಧರ್ಮಸೇನರವರನ್ನು ಎಂಎಲ್.ಸಿ. ಮಾಡಿ ಸಚಿವರನ್ನಾಗಿ ಮಾಡುವಂತ ಪಕ್ಷದ ವರಿಷ್ಠರನ್ನು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷರಾದ ಎಸ್.ಜಯ್ಯಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ದುರುಗೇಶ್, ಎಂ ವೆಂಕಟೇಶ್ ರಾಜ್ಯ ಸಂಚಾಲಕರಾದ ಸಣ್ಣ ಕುಮಾರ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, ಆರ್.ಧರ್ಮಸೇನರವರು ಎರಡು ಬಾರಿ ಎಂ.ಎಲ್.ಸಿ. ಯಾಗಿದ್ದು, ರಾಜ್ಯದಲ್ಲಿ ಎಸ್.ಸಿ.ಘಟಕದ ಮುಂಚೂಣಿಯಲ್ಲಿ ಪಕ್ಷವನ್ನು ಸಂಘಟಿಸಿದ್ದಾರೆ. ಈ ಹಿನ್ನಲೆಯಲ್ಲಿ ಇವರನ್ನು ಎಂ.ಎಲ್.ಸಿ. ಮಾಡುವುದರ ಮೂಲಕ ಸಚಿವರನ್ನಾಗಿ ಮಾಡಬೇಕೆಂದು ಜಿಲ್ಲೆಯ ಪರಿಶಿಷ್ಟ ಜಾತಿಯ ರಾಜ್ಯ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರು ಪಕ್ಷದ ವರಿಷ್ಟರಲ್ಲಿ ಒತ್ತಾಯಿಸಿದ್ದಾರೆ.