ಸ್ವಚ್ಛ ಪರಿಸರ ಮತ್ತು ನೀರಿನ ಸದ್ಬಳಕೆ ಕುರಿತು ಜಾಗೃತಿ: ಗೋಪಾಲಪುರದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ.

ಚಿತ್ರದುರ್ಗ ಮೇ. 29

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ತಾಲೂಕು ನಗರ ಬಿ ವಲಯದಲ್ಲಿ ಗೋಪಾಲಪುರ ಕಾರ್ಯಕ್ಷೇತ್ರದಲ್ಲಿ ಈ ದಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಒಕ್ಕೂಟದ ಪದಾಧಿಕಾರಿಗಳು, ದೇವಸ್ಥಾನದ ಕಮಿಟಿಯ ಸದಸ್ಯರು,ವಲಯದ ಮೇಲ್ವಿಚಾರಕರು, ಜ್ಞಾನವಿಕಾಸ ಸಮನ್ವಯಧಿಕಾರಿ, ಕಲಾ ತಂಡದವರು, ಸೇವಾಪ್ರತಿನಿಧಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶೃತಿ ಸಂಸ್ಕೃತಿಕ ಕಲಾತಂಡದ ಸದಸ್ಯರು ಭೂಮಿ ತಾಯಿಯನ್ನು ರಕ್ಷಣೇ, ಸ್ವಚ್ಛ ಪರಿಸರ ನಿರ್ಮಾಣ, ನೀರಿನ ಸದ್ಬಳಕೆ, ಮತ್ತು ಯೋಜನೆಯ ಕಾರ್ಯಕ್ರಮಗಳ ಕುರಿತು ಬೀದಿ ನಾಟಕ ಪ್ರದರ್ಶಿಸಿದರು.

ಈ ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಎಲ್ಲಾ ಸದಸ್ಯರು, ಸಾರ್ವಜನಿಕರು ಹಾಜರಿದ್ದರು.

Leave a Reply

Your email address will not be published. Required fields are marked *