ಚಿತ್ರದುರ್ಗ ಮೇ. 13
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜ (ರಿ.)ದವತಿಯಿಂದ 2024-25 ಮತ್ತು 2025-26 ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯನ್ನು ಮೇ. 17 ನೇ ಭಾನುವಾರ ಬೆಳಗ್ಗೆ 11 ಕ್ಕೆ ಚಿತ್ರದುರ್ಗ ನಗರದ ದೊಡ್ಡಪೇಟೆಯಲ್ಲಿನ ಶ್ರೀ ಸಂಪಿಗೆ ಸಿದ್ದೇಶ್ವರ ವಿದ್ಯಾಸಂಸ್ಥೆ (ರಿ.), ಯಲ್ಲಿ ಸಮಾಜದ ಅಧ್ಯಕ್ಷರಾದ ಪಿ.ಎಸ್. ಶಂಭುಲಿಂಗಪ್ಪ ಇವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಎಂದು ಕಾರ್ಯದರ್ಶಿ ಇ.ಕೆ.ಮಲ್ಲಿಕಾರ್ಜನ್ ತಿಳಿಸಿದ್ದಾರೆ.
ಈ ಸರ್ವ ಸದಸ್ಯರ ಸಭೆಯಲ್ಲಿ 2024-25, 2025-26, ಜಮಾ ಖರ್ಚು ಪರೀಶೀಲನೆ, 2026-27 ಸಾಲಿನ ಮುಂಗಡ ಜಮಾ-ಖರ್ಚು ಮಂಡನೆ. 2019-20, 2020-21, 2021-22, 2022-23, 2023-24 & 2024-25, 2025-26ನೇ ಸಾಲಿನ ನೊಂದಣಿ ನವೀಕರಣ, 2001ರಲ್ಲಿ ಜಿಲ್ಲಾ ಘಟಕ ಸ್ಥಾಪಿತಗೊಂಡು 25 ವರ್ಷಗಳ ಪೂರೈಸಿರುವುದರಿಂದ ರಜತ ಮಹೋತ್ಸವ ಆಚರಣೆ, 2024-25, 2025- 26ನೇ ಶೈಕ್ಷಣಿಕ ವರ್ಷದ ಪ್ರತಿಭಾ ಪುರಸ್ಕಾರ, ಕುಟುಂಬ ಸದಸ್ಯರ ವಿವರಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ನೀಡುವುದು ಹಾಗೂ ಸಮಾಜಕ್ಕೆ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಖರೀದಿ ಬಗ್ಗೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸರ್ವ ಸದಸ್ಯರ ಮಹಾಸಭೆಗೆ ಶಿವಶಿಂಪಿ ಸಮಾಜದ ಭಾಂಧವರು ಆಗಮಿಸುವುದರ ಮೂಲಕ ಸಭೆಯನ್ನು ಯಶಸ್ವಿಗೂಳಿಸುವಂತೆ ಕಾರ್ಯದರ್ಶಿ ಇ.ಕೆ.ಮಲ್ಲಿಕಾರ್ಜನ್ ಸಮಾಜದ ಭಾಂಧವರಲ್ಲಿ ಮನವಿ ಮಾಡಿದ್ದಾರೆ.

