ಚನ್ನಮ್ಮ ದೇವೇಗೌಡ ನಿಧನಕ್ಕೆ ಚಿತ್ರದುರ್ಗ ಜೆಡಿಎಸ್ ಘಟಕ ಸಂತಾಪ.

ಚಿತ್ರದುರ್ಗ ಜು. 18

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಮಾಜಿ ಪ್ರಧಾನಮಂತ್ರಿ ಶ್ರೀ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚನ್ನಮ್ಮ ಅವರ ನಿಧನದ ಸುದ್ದಿ ತೀವ್ರ ದುಃಖವನ್ನುಂಟು ಮಾಡಿದೆ.ಅವರ ನಿಧನಕ್ಕೆ ಚಿತ್ರದುರ್ಗ ಜಲ್ಲಾ (ಜಾತ್ಯತೀತ) ಜನತಾದಳ ಘಟಕ ಸಂತಾಪವನ್ನು ಸೂಚಿಸಿದೆ.

ಅವರ ಆತ್ಮಕ್ಕೆ ಶಾಂತಿಯನ್ನು ಕೋರಿ ಸರಳತೆ, ಸಾತ್ವಿಕತೆ, ತ್ಯಾಗ ಮತ್ತು ಕುಟುಂಬ ಮೌಲ್ಯಗಳ ಪ್ರತಿರೂಪವಾಗಿದ್ದ ಅವರ ಬದುಕು ಸದಾ ಸ್ಮರಣೀಯ. ಅವರ ಅಗಲಿಕೆಯಿಂದ ಶ್ರೀ ದೇವೇಗೌಡರವರ ಕುಟುಂಬಕ್ಕೆ ಉಂಟಾದ ನೋವಿನಲ್ಲಿ ನಾವೂ ಭಾಗಿಯಾಗಿದ್ದೇವೆ. ಪರಮಾತ್ಮನು ದಿವಂಗತ ಶ್ರೀಮತಿ ಚನ್ನಮ್ಮ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ಮಾಜಿ ಪ್ರಧಾನಮಂತ್ರಿ ಶ್ರೀ ಎಚ್.ಡಿ. ದೇವೇಗೌಡ ಅವರ ಕುಟುಂಬದವರಿಗೆ, ಬಂಧು-ಬಳಗದವರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ನೀಡಲಿ ಎಂದು (ಜಾತ್ಯತೀತ) ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜು, ಮಾಜಿ ಜಿಲ್ಲಾಧ್ಯಕ್ಷರುಗಳಾದ ಯಶೋಧರ, ಜಯ್ಯಣ್ಣ, ಜಿಲ್ಲಾಧ್ಯಕ್ಷ ರಾದ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್ ಕೋರಿ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *