ಚಿತ್ರದುರ್ಗವನ್ನು ಲಾಜಿಸ್ಟಿಕ್ ಹಬ್ ಆಗಿ ರೂಪಿಸಲು ರಾಜ್ಯ-ಕೇಂದ್ರ ಸರ್ಕಾರಕ್ಕೆ ಮನವಿ: ಎಂಎಲ್ಸಿ ಕೆ.ಎಸ್. ನವೀನ್.
ಚಿತ್ರದುರ್ಗ ಜೂ. 13
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮಧ್ಯ ಕರ್ನಾಟಕದಲ್ಲಿ ಇಲ್ಲಿ ರಸ್ತೆ ಸಂಪರ್ಕ ಹಾಗೂ ರೈಲ್ವೆ ಸಂಪರ್ಕವೂ ಚನ್ನಾಗಿ ಇದೆ, ಕೈಗಾರಿಕೆಯನ್ನು ಸ್ಥಾಪನೆ ಮಾಡಲು ಬೇಕಾದ ಎಲ್ಲಾ ರೀತಿಯ ಅನುಕೂಲಗಳು ಸಹಾ ಇವೆ, ಈ ಹಿನ್ನಲೆಯಲ್ಲಿ ಚಿತ್ರದುರ್ಗವನ್ನು ಲಾಜಸ್ಟಿಕ್ ಹಬ್ ಆಗಿ ಮಾಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಕೇಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಮಹರ್ಷಿ ವಾಲ್ಮಿಕಿ ಭವನದಲ್ಲಿ ಶನಿವಾರ ಹಿಂದೂ ಎಕಾನಮಿಕ್ ಫೋರಂ, ಚಿತ್ರದುರ್ಗ ಚಾಪ್ಟರ್, ವಿ.ಡಿ.ಸಾವರ್ಕರ್ ಸೌಹಾರ್ಧ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ಬನಶಂಕರಿ ವಾಣಿಜ್ಯ ಸಹಕಾರ ಸಂಘದ ಸಮಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬ್ರಾಂಡ್ ಚಿತ್ರದುರ್ಗ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೂಗಳು ಒಗ್ಗಟ್ಟಾಗಿ ವ್ಯಾಪಾರ ಉದ್ಯಮಗಳಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎನ್ನುವ ಉದ್ದೇಶದಿಂದ ಸಮಾವೇಶ ನಡೆಯಲಿದ್ದು, ಜಿಲ್ಲೆಯಲ್ಲಿ ಸಿಗುವ ಉತ್ಪನ್ನಗಳನ್ನು ಹೊರಗೆ ಕಳಿಸುವ ಪ್ರಯತ್ನ ಸಮಾವೇಶದ ಉದ್ದೇಶವಾಗಿದೆ. ಚಿತ್ರದುರ್ಗವನ್ನು ಲಾಜಿಸ್ಟಿಕ್ ಹಬ್ನ್ನಾಗಿ ಮಾಡುವುದು. ಮುಖ್ಯ ಉದ್ದೇಶವಾಗಿದೆ. ಸ್ಥಳೀಯ ಯುವಕರಿಗೆ ವ್ಯಾಪಾರಸ್ಥರಿಗೆ ಉದ್ಯಮಿಗಳಿಗೆ ಅನುಕೂಲವಾಗಲಿ ಎನ್ನುವುದು ಸಮಾವೇಶದ ಉದ್ದೇಶ ಎಂದರು.

ಚಿತ್ರದುರ್ಗ ಕರ್ನಾಟಕದ ಮಧ್ಯ ಭಾಗವಾಗಿದೆ ಇಲ್ಲಿ ರಸ್ತೆ, ರೈಲಿನ ಸಂಪರ್ಕವೂ ಸಹಾ ಇದೆ ಮೂರು ರಾಷ್ಟ್ರಿಯ ಹೆದ್ಧಾರಿಗಳು ಹಾದು ಹೋಗುವುದರ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳನ್ನು ಅಲ್ಲದೆ ನೆರೆ ರಾಜ್ಯವನ್ನು ಸಹಾ ಸಂಪರ್ಕ ಮಾಡುತ್ತಿವೆ, ಹಿಂದೂ ಉದ್ಯಮಿಗಳು ಮತ್ತು ಆರ್ಥಿಕ ನಾಯಕತ್ವವನ್ನು ಒಗ್ಗೂಡಿಸಲು ಕಾರ್ಯನಿರ್ವಹಿಸುತ್ತಿರುವ ಹಿಂದೂ ಎಕನಾಮಿಕ್ ಫೋರಂ, ಪ್ರತಿ ಜಿಲ್ಲೆಯಲ್ಲೂ ಹಿಂದೂಗಳಿಗೆ ಅನುಕೂಲಕರ ಆರ್ಥಿಕ ವಾತಾವರಣ ನಿರ್ಮಿಸುವ ಉದ್ದೇಶದಿಂದ `ಬ್ರಾಂಡ್ ಸಮಾವೇಶಗಳ ಸರಣಿಯನ್ನು ಆಯೋಜಿಸುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈಗಾಗಲೇ ಹಲವಾದರು ಜನತೆ ತಮ್ಮ ಉದ್ಯಮವನ್ನು ನಡೆಸುವುದರ ಮೂಲಕ ಬ್ರಾಂಡ್ ಆಗಿದ್ದಾರೆ. ಒಂದು ಕಾಲದಲ್ಲಿ ಚಳ್ಳಕೆರೆ ನಗರ ಮಿನಿ ಬಾಂಬೆ ಎಂದು ಹೆಸರಾಗಿತ್ತು ಆದರೆ ಈಗ ಅದು ಆಳಸಿ ಹೋಗಿದೆ, ಚಿತ್ರದುರ್ಗವನ್ನು ಲಾಜಸ್ಟಿಕ್ ಹಬ್ ಆಗಿ ಮಾಡಲು ಬೇಕಾದ ಎಲ್ಲಾ ರೀತಿಯಾದ ವಾತಾವರಣ ಇಲ್ಲಿ ಇದೆ ಇಲ್ಲಿ ಉತ್ತಮವಾದ ಹವಮಾನ ಇದೆ. ರಸ್ತೆ ಸಂಪರ್ಕ ಚನ್ನಾಗಿ ಇದೆ ಸದ್ಯದಲ್ಲಿಯೇ ಚಿತ್ರದುರ್ಗದಿಂದ ಬೆಂಗಳೂರಿಗೆ ರೈಲ್ವೆ ಸಂಪರ್ಕ ಬರುತ್ತದೆ, ಇಲ್ಲಿನ ಉತ್ಪನ್ನಗಳನ್ನು ಬೇರೆ ಕಡೆಗೆ ಪರಿಚಯಿಸುವ ಕಾರ್ಯವನ್ನು ಹಿಂದೂ ಎಕಾನಮಿಕ್ ಫೋರಂ, ಮಾಡುತ್ತಿದೆ, ಹೂಸದಾಗಿ ಉದ್ಯಮವನ್ನು ಸ್ಥಾಪನೆ ಮಾಡುವವರಿಗೆ ಸಹಕಾರವನ್ನು ನೀಡುತ್ತಿದೆ ಎಂದು ತಿಳಿಸಿದರು.
ಹಿಂದೂ ಎಕಾನಮಿಕ್ ಫೋರಂ, ಚಿತ್ರದುರ್ಗ ಚಾಪ್ಟರ್, ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ಮಾತನಾಡಿ, ಬೀದರ್ನಿಂದ ಹಿಡಿದು ಮೈಸೂರುವರೆಗೂ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಬ್ರಾಂಡ್ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಚಿತ್ರದುರ್ಗವನ್ನು ಲಾಜಿಸ್ಟಿಕ್ ಹಬ್ನ್ನಾಗಿ ಮಾಡುವುದು. ಪ್ರವಾಸೋದ್ಯಮ ಅಭಿವೃದ್ದಿ, ಮೊಳಕಾಲ್ಮುರು ಸೀರೆಗಳು ಮತ್ತು ಕೈಮಗ್ಗ ಉದ್ಯಮದ ಬೆಳವಣಿಗೆ ಕೃಷಿ ಮತ್ತು ಕೃಷಿ ಆಧಾರಿತ ಉದ್ಯಮಗಳ ಅಭಿವೃದ್ದಿ, ಚಿತ್ರದುರ್ಗದ ರಫ್ತು ಸಾಮಥ್ರ್ಯ ಹೊಂದಿರುವ ಉತ್ಪನ್ನಗಳು, ಡಿಆರ್ಡಿಓ/ಐಐಎಸ್ಸಿ/ಇಸ್ರೊ ಸಂಬಂಧಿತ ಅವಕಾಶಗಳು, ಚಿತ್ರದುರ್ಗವನ್ನು ಕೈಗಾರಿಕಾ ಹಬ್ ಆಗಿ ರೂಪಿಸುವುದು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ದಿ, ಮಹಿಳಾ ಉದ್ಯಮಿಗಳ ಬೆಳವಣಿಗೆ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ. ಹಿಂದೂ ಎಕನಾಮಿಕ್ ಫೋರಂ ಒಂದು ಜಾಗತಿಕ ಆರ್ಥಿಕ ವೇದಿಕೆಯಾಗಿದ್ದು, ಹಿಂದೂ ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ವ್ಯಾಪಾರಿಗಳು, ಬ್ಯಾಂಕರ್ಗಳು, ಹೂಡಿಕೆದಾರರು, ವೃತ್ತಿಪರರು, ಅಕಾಡೆಮಿಷಿಯನ್ಗಳು ಮತ್ತು ಚಿಂತಕರನ್ನು ಒಂದೇ ವೇದಿಕೆಗೆ ತರುತ್ತಿದೆ. ಊಇಈ ತನ್ನ ಚಾಪ್ಟರ್ಗಳ ಮೂಲಕ ಹಿಂದೂ ಉದ್ಯಮಿಗಳ ನಡುವೆ ಸಹಕಾರ, ಮಾರ್ಗದರ್ಶನ, ಜ್ಞಾನ ಹಂಚಿಕೆ, ಮಾರುಕಟ್ಟೆ ಸಂಪರ್ಕ, ಬ್ಯಾಂಕಿಂಗ್ ಸಹಾಯ ಮತ್ತು ಸಮೂಹ ಸಮೃದ್ಧಿಯನ್ನು ಉತ್ತೇಜಿಸುತ್ತದೆ. ಹಿಂದೂ ಸಮಾಜವನ್ನು ಆರ್ಥಿಕವಾಗಿ ಒಗ್ಗೂಡಿಸಿ, ಬಂಡವಾಳ, ಮಾರುಕಟ್ಟೆ ಪ್ರವೇಶ, ಮಾರ್ಗದರ್ಶನ ಮತ್ತು ಸಂಯುಕ್ತ ಹೂಡಿಕೆಗಳ ಮೂಲಕ ಹಿಂದೂ ಉದ್ಯಮಿಗಳ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲೆಯ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಿರುವ 10 ಹಿರಿಯ ಉದ್ಯಮಿಗಳಿಗೆ ಹಾಗೂ ಯುವ ಜನತೆಗೆ ಉದ್ಯೋಗ ಸೃಷ್ಟಿಯಲ್ಲಿ ಸ್ಫೂರ್ತಿಯಾಗಿರುವ 10 ಯುವ ಉದ್ಯಮಿಗಳಿಗೂ ಗೌರವ ಸಮರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿ.ಎಂ.ಗ್ರೂಪ್ನ ನಿರ್ದೇಶಕರಾದ ಅನಿತ್ವ ಕುಮಾರ್, ಜಿಎಚ್.ಆರ್ ಗ್ರೂಪ್ನ ಸಿಇಓ ಡಾ.ಸಿದ್ದಾರ್ಥ್, ರಾಘವೇಂದ್ರ, ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ.ಮಂಜುನಾಥ್ ಉಪಾಧ್ಯಕ್ಷರಾದ ವಾಸುದೇವ, ನಾಗೇಂದ್ರ, ಕಾರ್ಯದರ್ಶಿ ದೊಣಸ್ವಾಮಿ, ಜಂಟಿ ಕಾರ್ಯದರ್ಶಿ ಶ್ರೀಮತಿ ಟಿ.ಸಿ.ಪಿ. ಗೀತಾ, ನಂದಿ ನಾಗರಾಜ್, ಆಶೋಕ್ ಭಾಗವಹಿಸಿದ್ದರು.