ಚಿತ್ರದುರ್ಗ ಸೆ. 02
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ರಾಜ್ಯದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ, ದಲಿತ, ಯುವಕ, ರೈತರ, ಮಹಿಳಾ ವಿರೋಧ ಸರ್ಕಾರವಾಗಿದೆ. ರಾಜ್ಯದಲ್ಲಿ ದೊಡ್ಡ ಭ್ರಷ್ಟಾಚಾರದ ಕೂಟ ಅಧಿಕಾರರದಲ್ಲಿದೆ. ಈ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ ಎಂದು ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಬುಧವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಭ್ರಷ್ಠಚಾರ, ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ 10 ದಿನಗಳ ಕಾಲ ರಾಜ್ಯದ ಪ್ರಭಾವಿ ಬಿಜೆಪಿ ನಾಯಕರ ನೇತೃತ್ವದಲ್ಲಿ ಪಾದಯಾತ್ರೆಯನ್ನು ರಾಯಚೂರು ಜಿಲ್ಲೆಯ ಲಿಂಗಸೂರಿನಿಂದ ಪ್ರಾರಂಭಿಸಲಾಗಿದೆ, ಭ್ರಷ್ಟಾಚಾರದಲ್ಲಿ ಸಿಲುಕಿದವರ ವಿಚಾರಕ್ಕೆ ಹೋರಾಟ ನೆಡೆಸುವಾಗ ಸದನ ಮುಂದೂಡಿಕೆ ಮಾಡಿ ನಂತರ ಸರ್ಕಾರ ಮೂರು ದಿನ ಮುಂಚೆಯೇ ಸದನವನ್ನು ಮುಕ್ತಾಯ ಮಾಡಿ ಬಾಂಗ್ಲಾ ನುಸುಳುಕೊರರಂತೆ ಓಡಿ ಹೋಗಿದೆ. ಪಾದಯಾತ್ರೆ ಮಾಡುತ್ತೆವೆ ಎಂಬ ಭಯದಿಂದ ನಾಗೇಂದ್ರರವರು ರಾಜೀನಾಮೆ ನೀಡಿದ್ದಾರೆ. ಸದನದ ವೇಳೆ ರಾಜೀನಾಮೆ ಕೊಟ್ಟರೆ ಅಪಮಾನವೆಂಬ ಭಯದಿಂದ ಬಳಿಕ ರಾಜಿನಾಮೆ ನೀಡಿದ್ದಾರೆ.ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ದಲಿತ ವಿರೋಧಿ ನೀತಿ, ಯುವಕರ ವಿರೋದಿ, ರೈತರ ಮತ್ತು ಮಹಿಳಾ ವಿರೋಧ ನೀತಿಯನ್ನು ಹೊಂದಿದೆ ಎಂದು ದೂರಿದರು.
ರಾಜ್ಯದಲ್ಲಿ ದೊಡ್ಡ ಭ್ರಷ್ಟಾಚಾರದ ಕೂಟ ಅಧಿಕಾರದಲ್ಲಿದೆ.ಮಹಿಳಾ ವಿರೋಧಿ ಸರ್ಕಾರ ಇದಾಗಿದೆ.ಕಳೆದ ಎರಡು ತಿಂಗಳಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ. ಬೆಳಗಾವಿ ಲಕ್ಷ್ಮಿ ಗೃಹಲಕ್ಷ್ಮಿ ಹಣ ಹೊಡೆದು ಕೊಂಡು ಹೋಗಿದ್ದಾಳೆಂದು ಜನ ಹೇಳುತ್ತಿದ್ದಾರೆ. 2000 ಕೊಟ್ಟಿದಿವಿ.. ಮುಚ್ಕೊಂಡು ಓಟು ಹಾಕಲೆಂದು ಕಾಂಗ್ರೆಸ್ ಮಾತು… ಗೃಹಲಕ್ಷ್ಮಿ ಹಣ ಪಡೆದವರನ್ನು ಸರ್ಕಾರದ ಗುಲಾಮರಂತೆ ನಡೆಸಿಕೊಳ್ಳುತ್ತಿದೆ. ಮಹಿಳೆಯರ ಗೌರವವನ್ನು ಸರ್ಕಾರ ನಾಶಪಡಿಸುತ್ತಿದೆ. ಎಲ್ಲೇ ಹೋದರು ಉಚಿತ ಅಂತ ಸರ್ಕಾರ ಹೇಳಿತು. ಪ್ರಯಾಣಕ್ಕೆ ಯೋಗ್ಯವಲ್ಲದ ಗುಜರಿ ಬಸ್‍ಗಳಲ್ಲಿ ಓಡಾಡುವಂತೆ ಮಾಡಿದ್ದಾರೆ. ಮೋದಿಯವರು ಕೊಡುತ್ತಿರುವ ಅಕ್ಕಿ ಬಿಟ್ಟರೆ.. ಯಾವ ಅಕ್ಕಿನು ಬರುತ್ತಿಲ್ಲ.. ಇಂದ್ರಮ್ಮನ ಕಿಟ್ ಕೊಡುವ ಭರವಸೆ ಕೊಟ್ಟರು… ಈವರೆಗೆ ಯಾವ ಇಂದ್ರಮ್ಮನ ಕಿಟ್ ಬಂದಿಲ್ಲ. ದಲಿತರ ಎಸ್.ಪಿ.ಟಿ.ಎಸ್. ಪಿ ಯ 44 ಸಾವಿರ ಕೋಟಿ ಕಲ್ಯಾಣದ ಹಣದಲ್ಲಿ 22 ಸಾವಿರ ಕೋಟಿ ವಿವಿಧ ಯೋಜನೆಗೆ ಬಳಕೆ ಮಾಡಿದ್ದಾರೆ.
ಮಕ್ಕಳ ಶುಲ್ಕ,ವಿದೇಶದಲ್ಲಿ ಓದುವ ಮಕ್ಕಳಿಗೆ ನೆರವು ಕೊಡುತ್ತಿಲ್ಲ.ದಲಿತರ ಜಮೀನು ಖರೀದಿ, ನಿವೇಶನ, ಟ್ಯಾಕ್ಸಿ ಖರೀದಿ ನಿಲ್ಲಿಸಲಾಗಿದೆ. ಎಸ್.ಪಿ.ಟಿ.ಎಸ್. ಪಿ ಯ 22 ಸಾವಿರ ಕೋಟಿಯಲ್ಲಿ 15000 ಕೋಟಿ ಗ್ಯಾರಂಟಿಗೆ ಚುನಾವಣೆಗಳಿಗೆ ಬಳಕೆ ಮಾಡಿದ್ದಾರೆ.ಉಳಿದ 7000 ದಲ್ಲಿ ಏನು ದಲಿತರ ಕಲ್ಯಾಣ ಮಾಡುತ್ತಾರೆ… ದಲಿತರ ಹಣದಲ್ಲಿ ಸಂವಿಧಾನ ದಿನಾಚರಣೆ, ಪ್ರಜಾಪ್ರಭುತ್ವ ದಿನಾಚರಣೆ, ಅಂಬೇಡ್ಕರ್, ಜಗಜೀವನ್ ರಾಂ ದಿನಾಚರಣೆಯ ನೆಪದಲ್ಲಿ ಚುನಾವಣೆಗೂ ಇದೇ ಹಣ ಖರ್ಚು ಮಾಡಿದ್ದಾರೆ ಎಂದು ನಾರಾಯಣಸ್ವಾಮಿ ದೂರಿದರು.
ಯುವಕರು ಕೆಲಸ ಪಡೆಯಲು ಕೆಪಿಎಸ್‍ಸಿಯಲ್ಲಿ ಸುಲಿಗೆ ಮಾಡಿದ್ದಾರೆ.ಕೋಟಿಗಟ್ಟಲೇ ಕೊಟ್ಟು ಕೆಪಿಎಸ್‍ಸಿ ಸದಸ್ಯರಾದವರು ಅಭ್ಯರ್ಥಿಗಳಿಂದ 2-3 ಕೋಟಿ ಲಂಚ ಪಡೆಯುತ್ತಿದ್ದಾರೆ.ಹಣ ಕೊಟ್ಟು ಕೆಲಸಕ್ಕೆ ಸೇರುವ ಅಭ್ಯರ್ಥಿ ಸಹ ಲಂಚ ಪಡೆಯಬೇಕಾಗಿದೆ. ಅಲ್ಲಿಯೇ ಲಂಚ ಪಡೆಯುವ ಬಗ್ಗೆ ಹೇಳಿ ಕಳಿಸಿದ್ದಾರೆ. ರಾಜ್ಯದಲ್ಲಿ ಬರಗಾಲ ರೈತರನ್ನು ಕಿತ್ತು ತಿನ್ನುತ್ತಿದೆ. ರಾಜ್ಯದಲ್ಲಿನ 192 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಸರ್ಕಾರ ಪರಿಹಾರ ಈವರೆಗೆ ಕೊಟ್ಟಿಲ್ಲ.ರಾಜ್ಯ ಸರ್ಕಾರ ಕೇವಲ 101 ತಾಲ್ಲೂಕುಗಳನ್ನು ಬರ ಪಟ್ಟಿಗೆ ಸೇರಿಸಿದೆ.ಇನ್ನು 91 ತಾಲ್ಲೂಕುಗಳನ್ನು ಏಕೆ ಘೋಷಿಸಿಲ್ಲ. ಏಕೆಂದರೆ ಸರ್ಕಾರದ ಖಾಜಾನೆ ಖಾಲಿಯಾಗಿದೆ.. ನೀವು ಬಳ್ಕೊಂಡು ತಿನ್ನಲು ಕಾಸಿಲ್ಲ. ರೈತರಿಗೆ ಈ ಸರ್ಕಾರ ಅನ್ಯಾಯ ಮಾಡುತ್ತಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು ಮರುಭೂಮಿ ಇದ್ದಂಗೆ. ಬರಪೀಡಿತ ಪ್ರದೇಶ ಅಂತ ಮೊಳಕಾಲ್ಮೂರು ಘೋಷಣೆಯಾಗಿಲ್ಲ ಎಂದು ಸರ್ಕಾರದ ಕ್ರಮವನ್ನು ಖಂಡಿಸಿದರು. ಕೇಂದ್ರದ ಜಲಜೀವನ್ ನಲ್ಲ ಭ್ರಷ್ಟಾಚಾರವಿದೆ. ರಾಜ್ಯದಲ್ಲಿ ವ್ಯಾಪಾರದ ಅಂಗಡಿ ಮಾದರಿಯ ಸರ್ಕಾರವಿದೆ.ಶೇ 60% ರಿಂದ 65% ಕಮೀಷನ್ ವಸೂಲಿ ಮಾಡಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ.ಬಿಲ್ ಮಾಡಿಕೊಳ್ಳುತ್ತಾರೆ… ಕೆಲಸ ಮಾಡುತ್ತಿಲ್ಲ.ಸಾರ್ವಜನಿಕವಾಗಿ ಪ್ರಶ್ನಿಸಿದರೆ ಅವರಿಗೂ ಪಾಲು.ಕಾಂಗ್ರೆಸ್ ಸರ್ಕಾರ ಲೂಟಸರ್ಕಾರವಾಗಿದೆ. ಚಿಂತಾಮಣಿಯಲ್ಲಿ ಗೃಹಸಚಿವ ಪರಮೇಶ್ವರ ಯೋಧನಿಗೆ ಅಪಮಾನ ವಿಚಾರಕ್ಕೆ ಪ್ರತಿಕ್ರಿಯಿಸಿ ಜನರ ರಕ್ತ ಹೀರುವ ಸರ್ಕಾರ ಇದಾಗಿದೆ. ನಿವೃತ್ತ ಯೋಧರಿಗೆ ಜಮೀನು ನೀಡೋದು ಸರ್ಕಾರದ ನಿಯಮ.ಎಲ್ಲೆಡೆ ಜಮೀನಿನ ಬೆಲೆ ದುಬಾರಿಯಾದರೆ ಯೋಧರಿಗೆ ಜಮೀನು ಕೊಡಲು ಸರ್ಕಾರ ಮೀನಾಮೇಷ ಮಾಡುತ್ತಿದೆ.. ಆದರೆ ಸರ್ಕಾರ ಲೂಟಿ ಹೊಡೆಯಲು ಮಾತ್ರ ಯಾವುದೇ ಮಾನದಂಡವಿಲ್ಲ ಎಂದು ನಾರಾಯಣಸ್ವಾಮಿ ವ್ಯಂಗವಾಡಿದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಸರ್ಕಾರ ಏಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದರ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ರಾಯಚೂರು ಜಿಲ್ಲೆಯಲ್ಲಿ ಇಬ್ಬರು ಬಾಲಕಿಯರ ಹತ್ಯೆ ಮತ್ತು ಕೊಲೆಯಾಗಿದೆ ಅಲ್ಲಿಗೆ ಆಡಳಿತ ಪಕ್ಷದವರು ಯಾರು ಸಹ ಅಲ್ಲಿಗೆ ಹೋಗಿರಲಿಲ್ಲ.ರಾಜ್ಯದಲ್ಲಿ ರಾಯಚೂರು ಜಿಲ್ಲೆಯಲ್ಲಿ ಚೊಂಬು ಹಿಡಿದುಕೊಂಡು ಹೋಗುವ ಸ್ಥಿತಿ ದೊಡ್ಡ ಅಪಮಾನ. ಯಾವುದೇ ಸರ್ಕಾರ ಅಧಿಕಾರ ನಡೆಸಿದರೂ ಅದು ಅಪಮಾನ.ಬಯಲು ಬಹಿರ್ದೆಸೆ ಮುಕ್ತ ಅಂತ ಸರ್ಕಾರ ಪ್ರಮಾಣಪತ್ರ ನೀಡಿದೆ.ಅಲ್ಲಿ ಮುಖ್ಯಮಂತ್ರಿ ಸೇರಿದಂತೆ ಪ್ರಿಯಾಂಕ ಖರ್ಗೆ ಪ್ರಮಾಣಪತ್ರ ಪಡೆದಿದ್ದಾರೆ..ಶೌಚಾಲಯ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದೆ.ಕಾಮಗಾರಿ ಆಗಿಲ್ಲ. ಇವರ ಹೆಸರಲ್ಲಿ ಹಣ ಪಡೆದು ಕಂಟ್ರಾಕ್ಟರ್ ಎಸ್ಕೇಪ್ ಆಗಿದ್ದಾನೆ.ಈ ಪ್ರಕರಣ ಸಿಬಿಐಗೆ ವಹಿಸುವಂತೆ ಪತ್ರ ಬರೆದಿದ್ದೇನೆ.ಈ ಪ್ರಕರಣ ಸಿಬಿಐಗೆ ಕೊಟ್ಟರೇ ಪ್ರಿಯಾಂಕ ಖರ್ಗೆ ವಿಕೇಟ್ ಬೀಳಲಿದೆ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ ಮಾಜಿ ಅಧ್ಯಕ್ಷರಾದ ಎ.ಮುರಳಿ, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಎಸ್.ಸಿ.ಮೋರ್ಚಾದ ಆಧ್ಯಕ್ಷರಾದ ಪರಶುರಾಮ್, ರಾಜ್ಯ ಕಾರ್ಯಕಾರಿ ಸದಸ್ಯರಾದ ರುದ್ರಯ್ಯ, ಗ್ರಾಮಾಂತರ ಅಧ್ಯಕ್ಷರಾದ ನಾಗರಾಜ್, ಛಲವಾದಿ ತಿಪ್ಪೇಸ್ವಾಮಿ, ಯುವ ಮೋರ್ಚಾದ ಅಧ್ಯಕ್ಷ ವಸಂತಚಾರ್, ಪ್ರದೀಪ್, ಧನಂಜಯ ತಿಪ್ಪೇಸ್ವಾಮಿ ಸೇರಿದಂತೆ ಪಕ್ಷದ ಮುಖಂಡರುಮ ಕಾರ್ಯಕರ್ತರು ಸಮಾಜದ ಹಿರಿಯರು ಉಪಸ್ಥಿತರಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j