Daily Horoscope, 11June 2026: ಈ ರಾಶಿಯವರಿಗೆ ಇಂದು ಒಲಿಯಲಿದೆ ಅದೃಷ್ಟ!

ಜೂನ್ 1ರ ದಿನಭವಿಷ್ಯ: ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಏಕಾದಶಿಯ ಈ ದಿನ, ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಂದಿನ ಪಂಚಾಂಗ (ಜೂನ್ 11)

  • ಸಂವತ್ಸರ ಹಾಗೂ ಶಕೆ: ಪರಾಭವ ನಾಮ ಸಂವತ್ಸರ, ಶಾಲಿವಾಹನ ಶಕೆ 1949
  • ಆಯನ ಹಾಗೂ ಋತು: ಉತ್ತರಾಯಣ, ಗ್ರೀಷ್ಮ ಋತು
  • ಮಾಸ: ಅಧಿಕ ಜ್ಯೇಷ್ಠ ಮಾಸ (ಸೌರ ಮಾಸ: ವೃಷಭ)
  • ಪಕ್ಷ ಹಾಗೂ ತಿಥಿ: ಕೃಷ್ಣ ಪಕ್ಷ, ಏಕಾದಶಿ
  • ನಕ್ಷತ್ರ: ಅಶ್ವಿನಿ (ಮಹಾನಕ್ಷತ್ರ: ಮೃಗಶಿರಾ)
  • ಯೋಗ ಹಾಗೂ ಕರಣ: ಆಯುಷ್ಮಾನ್ ಯೋಗ, ಬಾಲವ ಕರಣ
  • ಸೂರ್ಯೋದಯ / ಸೂರ್ಯಾಸ್ತ: ಬೆಳಿಗ್ಗೆ 05:56 / ಸಂಜೆ 06:51

ಶುಭ-ಅಶುಭ ಕಾಲಗಳು:

  • ರಾಹು ಕಾಲ: ಮಧ್ಯಾಹ್ನ 02:01 ರಿಂದ 03:38ರವರೆಗೆ
  • ಯಮಗಂಡ ಕಾಲ: ಬೆಳಿಗ್ಗೆ 05:57 ರಿಂದ 07:34ರವರೆಗೆ
  • ಗುಳಿಕ ಕಾಲ: ಬೆಳಿಗ್ಗೆ 09:10 ರಿಂದ 10:47ರವರೆಗೆ

ದ್ವಾದಶ ರಾಶಿಗಳ ಇಂದಿನ ಭವಿಷ್ಯ

ಮೇಷ ರಾಶಿ: ಇಂದು ನಿಮ್ಮ ತಾಳ್ಮೆ ಪರೀಕ್ಷೆಗೊಳಗಾಗಬಹುದು, ಯಾವುದೇ ನಿರ್ಧಾರದಲ್ಲಿ ಆತುರ ಬೇಡ. ಕಷ್ಟದ ಸಮಯದಲ್ಲಿ ನೀವು ಕೂಡಿಟ್ಟ ಹಣವೇ ನಿಮ್ಮ ಕೈಹಿಡಿಯಲಿದೆ. ನಿಮ್ಮ ಪ್ರೀತಿಪಾತ್ರರಿಗೆ ಸಮಯ ಮೀಸಲಿಡಿ ಹಾಗೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದಿರಿ. ಬಹುಕಾಲದ ನಂತರ ಆತ್ಮೀಯರೊಬ್ಬರ ಭೇಟಿ ಮನಸ್ಸಿಗೆ ಸಂತಸ ತರಲಿದೆ. ಸಂಗಾತಿಯಿಂದ ಕೆಲವು ಗುಟ್ಟುಗಳು ರಟ್ಟಾಗುವ ಸಾಧ್ಯತೆಯಿದೆ. ಕೆಲಸಗಾರರ ಮೇಲಿನ ನಿಮ್ಮ ಅಸಮಾಧಾನ ಇಂದು ಹೊರಬೀಳಬಹುದು.

ವೃಷಭ ರಾಶಿ: ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಆದರೆ, ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡಿದರೆ ಮಾತ್ರ ನಿರಾಸೆ ತಪ್ಪಿಸಬಹುದು. ಮನಸ್ಸಿನಿಂದ ನಕಾರಾತ್ಮಕ ಯೋಚನೆಗಳನ್ನು ದೂರವಿಡಿ. ಬರಬೇಕಾದ ಹಣ ವಿಳಂಬವಾಗಬಹುದು, ಆದರೂ ಸಕಾರಾತ್ಮಕವಾಗಿ ಮುನ್ನಡೆದರೆ ಯಶಸ್ಸು ಖಂಡಿತ. ಮಕ್ಕಳಿಗೆ ಹೊಸ ಜವಾಬ್ದಾರಿ ನೀಡಲು ಹಿಂದೇಟು ಹಾಕುವಿರಿ. ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಕೊಂಚ ಆತಂಕ ಕಾಡಬಹುದು. ವಿವಾಹದ ಮಾತುಕತೆಗಳು ಶುಭ ಫಲ ನೀಡಲಿವೆ.

ಮಿಥುನ ರಾಶಿ: ಆರೋಗ್ಯ ಹಾಗೂ ಸೌಂದರ್ಯದ ಕಡೆಗೆ ಹೆಚ್ಚಿನ ಒಲವು ತೋರುವಿರಿ. ಹಳೆಯ ಘಟನೆಗಳನ್ನು ನೆನೆದು ಸಮಾಧಾನಪಟ್ಟುಕೊಳ್ಳುವಿರಿ. ನಿಮ್ಮ ನುಡಿಗಳು ಕೆಲವರಿಗೆ ಸ್ಫೂರ್ತಿಯಾದರೆ, ಇನ್ನು ಕೆಲವರು ಟೀಕಿಸುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಓದಿನಲ್ಲಿ ಸಂಪೂರ್ಣವಾಗಿ ಮಗ್ನರಾಗಲಿದ್ದಾರೆ. ಎಲ್ಲಾದರೂ ಪ್ರವಾಸ ಹೋಗುವ ಆಸೆ ಮೂಡಬಹುದು. ಜವಾಬ್ದಾರಿಗಳ ಹೆಚ್ಚಳದಿಂದಾಗಿ ಮಾನಸಿಕ ಒತ್ತಡ ಉಂಟಾಗುವ ಸಂಭವವಿದೆ.

ಕರ್ಕಾಟಕ ರಾಶಿ: ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬರಲಿದೆ. ಮಕ್ಕಳ ಮುಂದಿನ ಶಿಕ್ಷಣದ ಕುರಿತು ಯೋಚನೆಗಳು ಹೆಚ್ಚಾಗಲಿವೆ. ಇತರರ ಮೇಲೆ ನಿಮ್ಮ ಇಷ್ಟಗಳನ್ನು ಬಲವಂತವಾಗಿ ಹೇರುವುದು ಸರಿಯಲ್ಲ, ಅವರಿಗೆ ಆಯ್ಕೆಯ ಸ್ವಾತಂತ್ರ್ಯ ನೀಡಿ. ಆಸ್ತಿ ಅಥವಾ ಹಣ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಮೂಡಬಹುದು, ಹಾಗೆಯೇ ಜಮೀನಿನ ವಿಚಾರದಲ್ಲಿ ನೆರೆಹೊರೆಯವರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ದಿನನಿತ್ಯದ ಕೆಲಸಗಳಲ್ಲಿ ಇತರರಿಂದ ಕಿರಿಕಿರಿ ಅನುಭವಿಸುವಿರಿ.

ಸಿಂಹ ರಾಶಿ: ಅನಿರೀಕ್ಷಿತವಾಗಿ ವಿದೇಶ ಪ್ರಯಾಣದ ಅವಕಾಶಗಳು ಒದಗಿಬರಬಹುದು. ಬಹುದಿನಗಳ ಆರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ. ಸಹೋದರರು ಹಾಗೂ ತಂದೆಯ ಬೆಂಬಲ ಸಿಗಲಿದೆ. ಆಪ್ತರೊಬ್ಬರ ವೈದ್ಯಕೀಯ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಬೇಕಾದ ಪರಿಸ್ಥಿತಿ ಬರಬಹುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಗೆಲುವಿನ ಹಾದಿ ಸುಗಮವಾಗಲಿದೆ. ದೈಹಿಕ ಶ್ರಮ ಹೆಚ್ಚಾದರೂ, ಶಿಷ್ಯರಿಂದ ಅನಿರೀಕ್ಷಿತ ಉಡುಗೊರೆಗಳು ಸಿಗುವ ಸಾಧ್ಯತೆಯಿದೆ. ಆಸ್ತಿ ಮಾರಾಟದ ಯೋಚನೆ ಮಾಡಲಿದ್ದೀರಿ.

ಕನ್ಯಾ ರಾಶಿ: ನಿಮ್ಮ ಆಪ್ತರೊಂದಿಗೆ ಮುಕ್ತವಾಗಿ ಮಾತನಾಡುವುದರಿಂದ ನೆಮ್ಮದಿ ಸಿಗಲಿದೆ. ಸರ್ಕಾರಿ ಕೆಲಸಗಳಲ್ಲಿ ಕೊಂಚ ವಿಳಂಬವಾಗಬಹುದು. ಎದುರಾಗುವ ಸವಾಲುಗಳನ್ನು ಜಯಿಸಲು ದೇವರ ಮೊರೆ ಹೋಗುವಿರಿ. ಅತಿಯಾದ ಸಾಹಸಕ್ಕೆ ಕೈಹಾಕದಿರುವುದು ಒಳಿತು. ಕೌಟುಂಬಿಕ ವಾತಾವರಣದಲ್ಲಿ ಸ್ವಲ್ಪ ಅಸಮಾಧಾನವಿದ್ದರೂ, ಇತರ ಕಡೆಗಳಲ್ಲಿ ಬೆಂಬಲ ಸಿಗಲಿದೆ. ಪ್ರಯಾಣದಿಂದಾಗಿ ಸುಸ್ತು ಕಾಡಲಿದ್ದು, ಸಾಕಷ್ಟು ವಿಶ್ರಾಂತಿ ಪಡೆಯಿರಿ. ನಿಮ್ಮ ನೆಚ್ಚಿನ ವ್ಯಕ್ತಿಯ ಭೇಟಿಯಾಗಲಿದೆ.

ತುಲಾ ರಾಶಿ: ಕುಟುಂಬದ ಸದಸ್ಯರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಪ್ರಸ್ತುತ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವುದು ಜಾಣತನ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಅಗತ್ಯ. ಕೃಷಿ ಕ್ಷೇತ್ರದಲ್ಲಿ ತೊಡಗಿರುವವರಿಗೆ ಬೆಳೆ ವಿಚಾರದಲ್ಲಿ ಸ್ವಲ್ಪ ನಷ್ಟ ಉಂಟಾಗುವ ಸಾಧ್ಯತೆಯಿದೆ. ನಿಮ್ಮ ಬೆಳವಣಿಗೆಯನ್ನು ಕಂಡು ಹೊಟ್ಟೆಕಿಚ್ಚು ಪಡುವವರು ಹೆಚ್ಚಾಗಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟಲು ಕಠಿಣ ಶ್ರಮಪಡುವರು. ಆರ್ಥಿಕ ವಿಚಾರಗಳನ್ನು ಗೌಪ್ಯವಾಗಿಡಿ.

ವೃಶ್ಚಿಕ ರಾಶಿ: ಇಂದು ನಿಮ್ಮ ಮಾತು ಮತ್ತು ನಡವಳಿಕೆಯಲ್ಲಿ ಹಿಡಿತವಿರಲಿ. ಆರ್ಥಿಕ ಸ್ಥಿತಿ ನಿರೀಕ್ಷೆಯಷ್ಟು ಉತ್ತಮವಾಗಿರುವುದಿಲ್ಲ, ಹಣ ಕೈಗೆಟುಕದಂತಾಗಬಹುದು. ನಕಾರಾತ್ಮಕ ಯೋಚನೆಗಳು ನಿಮ್ಮ ನೆಮ್ಮದಿ ಕೆಡಿಸುವ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ನಿಮಗೆ ಬರಬೇಕಾದ ಹಣದ ಲೆಕ್ಕಾಚಾರ ಸರಿಯಾಗಿರಲಿ. ಕೆಲಸದಲ್ಲಿ ಸೋಮಾರಿತನ ತೋರಿದರೆ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವಿರಿ. ವೃತ್ತಿ ಕ್ಷೇತ್ರದಲ್ಲಿ ಕೊಂಚ ಆತಂಕ ಎದುರಾಗಬಹುದು.

ಧನು ರಾಶಿ: ದಿಢೀರ್ ಖರ್ಚುಗಳಿಂದಾಗಿ ಸ್ನೇಹಿತರ ಬಳಿ ಆರ್ಥಿಕ ಸಹಾಯ ಕೇಳುವ ಪರಿಸ್ಥಿತಿ ಬರಬಹುದು. ನಿಮ್ಮ ಮೇಲೆ ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ಕೌಟುಂಬಿಕ ಭಿನ್ನಾಭಿಪ್ರಾಯಗಳು ವಿಕೋಪಕ್ಕೆ ಹೋಗದಂತೆ ಎಚ್ಚರಿಕೆ ವಹಿಸಿ. ಅತಿಯಾದ ಸುಖಾಸೆಗಳಿಂದಾಗಿ ತೊಂದರೆಗೆ ಸಿಲುಕಿಕೊಳ್ಳಬಹುದು. ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳುವುದು ಉತ್ತಮ. ನಿಮ್ಮ ಒಂದು ಸಣ್ಣ ಸಹಾಯ ಕುಟುಂಬದಲ್ಲಿ ಮಂದಹಾಸ ಮೂಡಿಸಲಿದೆ. ಸಣ್ಣ ಸಮಸ್ಯೆಗಳನ್ನು ದೊಡ್ಡದು ಮಾಡಿಕೊಳ್ಳದಿರಿ.

ಮಕರ ರಾಶಿ: ನಿಮ್ಮ ಆತುರದಿಂದಾಗಿ ಸುಲಭದ ಕೆಲಸಗಳೂ ಕಷ್ಟವೆನಿಸಬಹುದು. ಹಣಕಾಸಿನ ವಿಚಾರವಾಗಿ ದಂಪತಿಗಳ ನಡುವೆ ಸಣ್ಣಪುಟ್ಟ ವಾಗ್ವಾದಗಳು ನಡೆಯಬಹುದು. ತಾತ್ಕಾಲಿಕ ಜವಾಬ್ದಾರಿಗಳು ಕಾಯಂ ಆಗುವ ಸಾಧ್ಯತೆಯಿದೆ. ಇತರರ ಮಾತು ಕೇಳಿ ನಿಮ್ಮವರನ್ನೇ ದ್ವೇಷಿಸುವ ಪ್ರಮೇಯ ಬರಬಹುದು. ಉದ್ಯೋಗ ಸ್ಥಳದಲ್ಲಿನ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಲು ಕಲಿಯಿರಿ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಆತ್ಮೀಯರೊಂದಿಗೆ ಒಂದಿಷ್ಟು ಸಮಯ ಕಳೆಯುವುದು ಉತ್ತಮ.

ಕುಂಭ ರಾಶಿ: ದೂರದ ಊರಿನಲ್ಲಿರುವ ಸಂಗಾತಿಯ ಭೇಟಿಯಾಗುವ ಸಂಭವವಿದೆ. ನಟನಾ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ಹೊಸ ಅವಕಾಶಗಳು ಒದಗಿ ಬರಲಿವೆ. ಉದ್ಯೋಗದಲ್ಲಿ ಬಡ್ತಿ ಪಡೆಯುವ ನಿಮ್ಮ ಪ್ರಯತ್ನಗಳು ಫಲ ನೀಡಲಿವೆ. ನ್ಯಾಯಾಲಯದಲ್ಲಿರುವ ಪ್ರಕರಣಗಳ ತೀರ್ಪು ಹೊರಬೀಳಲಿದ್ದು, ಫಲಿತಾಂಶವನ್ನು ಸಮಚಿತ್ತದಿಂದ ಸ್ವೀಕರಿಸಿ. ಹಿರಿಯರ ಆಶೀರ್ವಾದ ಸದಾ ನಿಮ್ಮ ಮೇಲಿರಲಿದೆ. ರಿಯಲ್ ಎಸ್ಟೇಟ್ ಹಾಗೂ ಜಮೀನಿನ ವ್ಯವಹಾರಗಳಲ್ಲಿ ಉತ್ತಮ ಲಾಭ ನಿರೀಕ್ಷಿಸಬಹುದು.

ಮೀನ ರಾಶಿ: ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ನಿಮ್ಮ ಸ್ವಂತ ವಿವೇಚನೆ ಬಳಸಿ. ಪ್ರೇಮ ವಿಚಾರದಲ್ಲಿ ಎಚ್ಚರಿಕೆ ಇರಲಿ. ಒಂಟಿತನ ದೂರ ಮಾಡಲು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ. ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಆಸೆ ಇದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಅದನ್ನು ಮುಂದೂಡುವುದು ಒಳಿತು. ಪ್ರಮುಖ ವಿಚಾರಗಳಲ್ಲಿ ಅನುಭವಿಗಳ ಮಾರ್ಗದರ್ಶನ ಪಡೆದು ಮುನ್ನಡೆಯಿರಿ. ಮಾತು ಮಿತವಾಗಿ ಹಾಗೂ ಹಿತವಾಗಿರಲಿ.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *