ಏಪ್ರಿಲ್ 15, 2026ರ ಬುಧವಾರದ ದಿನ ಭವಿಷ್ಯವು ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರಲಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಇಂದಿನ ದಿನವು ಆಪ್ತರ ಒಡನಾಟ, ಕೌಟುಂಬಿಕ ಸಾಮರಸ್ಯ ಹಾಗೂ ಆಧ್ಯಾತ್ಮಿಕ ಚಿಂತನೆಗಳಿಗೆ ಒತ್ತು ನೀಡುವ ದಿನವಾಗಿದೆ. ದ್ವಾದಶ ರಾಶಿಗಳ ಫಲಾಫಲಗಳು ಹಾಗೂ ಇಂದಿನ ನಿಖರ ಪಂಚಾಂಗದ ವಿವರ ಇಲ್ಲಿದೆ.
ಇಂದಿನ ಪಂಚಾಂಗ (15-04-2026):
- ಸಂವತ್ಸರ: ಶಾಲಿವಾಹನ ಶಕೆ 1949, ಪರಾಭವ ಸಂವತ್ಸರ
- ಆಯನ / ಋತು: ಉತ್ತರಾಯಣ, ವಸಂತ ಋತು
- ಮಾಸ: ಚಾಂದ್ರಮಾನ – ಚೈತ್ರ ಮಾಸ, ಸೌರಮಾನ – ಮೇಷ ಮಾಸ
- ಪಕ್ಷ / ತಿಥಿ: ಕೃಷ್ಣ ಪಕ್ಷ, ತ್ರಯೋದಶೀ ತಿಥಿ
- ವಾರ / ಮಹಾನಕ್ಷತ್ರ: ಬುಧವಾರ, ಅಶ್ವಿನೀ
- ನಿತ್ಯ ನಕ್ಷತ್ರ / ಯೋಗ: ಉತ್ತರಾಭಾದ್ರ, ಶುಕ್ಲ ಯೋಗ
- ಕರಣ: ಬಾಲವ
- ಸೂರ್ಯೋದಯ: ಬೆಳಿಗ್ಗೆ 06:12 ಕ್ಕೆ
- ಸೂರ್ಯಾಸ್ತ: ಸಂಜೆ 06:36 ಕ್ಕೆ
ಶುಭಾಶುಭ ಕಾಲಗಳ ವಿವರ:
- ರಾಹು ಕಾಲ: ಮಧ್ಯಾಹ್ನ 12:25 ರಿಂದ 01:58 ರವರೆಗೆ
- ಯಮಗಂಡ ಕಾಲ: ಬೆಳಿಗ್ಗೆ 07:45 ರಿಂದ 09:18 ರವರೆಗೆ
- ಗುಳಿಕ ಕಾಲ: ಬೆಳಿಗ್ಗೆ 10:51 ರಿಂದ 12:25 ರವರೆಗೆ
ಮೇಷ ರಾಶಿ ಉದ್ಯೋಗ ಸ್ಥಳದಲ್ಲಿ ಶಿಸ್ತು ಕಾಯ್ದುಕೊಳ್ಳಲು ಸಹೋದ್ಯೋಗಿಗಳ ಬೆಂಬಲ ಪಡೆಯುವುದು ಉತ್ತಮ. ಕುಟುಂಬದ ಹಿರಿಯರೊಂದಿಗೆ ವಾದ-ವಿವಾದಗಳಿಂದ ದೂರವಿರಿ. ಕೆಲಸದಲ್ಲಿ ಲೋಪಗಳಾಗಿದ್ದರೆ, ತಾಳ್ಮೆಯಿಂದಲೇ ಸರಿಪಡಿಸಿಕೊಳ್ಳಿ. ಪ್ರಗತಿಯ ಹಾದಿಯಲ್ಲಿ ಕೆಲವು ಅಡೆತಡೆಗಳು ಎದುರಾಗಬಹುದು. ನಿಮ್ಮ ನೇರ ಮಾತುಗಳು ಕೆಲವರಿಗೆ ಬೇಸರ ತರಿಸುವ ಸಾಧ್ಯತೆ ಇದೆ, ಆದ್ದರಿಂದ ಮೃದುವಾಗಿ ಮಾತನಾಡಿ. ಅಚಾತುರ್ಯದಿಂದ ತಪ್ಪಾದರೆ ಮುಕ್ತವಾಗಿ ಕ್ಷಮೆ ಕೇಳಲು ಹಿಂಜರಿಯದಿರಿ.
ವೃಷಭ ರಾಶಿ ರಾಜಕೀಯ ಕ್ಷೇತ್ರದ ಆಸಕ್ತರಿಗೆ ಇದು ಉತ್ತಮ ಅವಕಾಶಗಳ ಕಾಲ, ಪ್ರಯತ್ನ ಮುಂದುವರಿಸಿ. ಇತರರು ಮಾಡುವ ತಪ್ಪುಗಳಿಂದ ನಿಮಗೆ ಕಿರಿಕಿರಿಯಾಗಬಹುದು ಮತ್ತು ಅದನ್ನು ನೀವೇ ಸರಿಪಡಿಸಬೇಕಾದ ಪರಿಸ್ಥಿತಿ ಬರಬಹುದು. ಕಡಿಮೆ ಶ್ರಮದಿಂದಲೇ ಹೆಚ್ಚಿನ ಯಶಸ್ಸು ಒಲಿಯುವ ಯೋಗವಿದೆ. ಯಾರನ್ನೂ ಕಡೆಗಣಿಸುವ ಮನೋಭಾವ ಬೇಡ. ಕೆಟ್ಟ ಕನಸುಗಳು ನಿಮ್ಮ ನಿದ್ದೆಗೆಡಿಸಬಹುದು. ಒರಟು ಮಾತಿನಿಂದ ಹಳೆಯ ಸ್ನೇಹ ಮುರಿಯದಂತೆ ಎಚ್ಚರ ವಹಿಸಿ. ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು.
ಮಿಥುನ ರಾಶಿ ನಿಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಆದ್ಯತೆ ನೀಡಿ. ಯಾವುದೇ ಹೆಜ್ಜೆ ಇಡುವ ಮುನ್ನ ಅದರ ಆಗುಹೋಗುಗಳ ಬಗ್ಗೆ ಯೋಚಿಸಿ ಮುನ್ನಡೆಯಿರಿ. ಅನಗತ್ಯ ವಿಷಯಗಳ ಬಗ್ಗೆ ಕುತೂಹಲ ಹೆಚ್ಚಾಗುವುದು. ಜೀವನಸಂಗಾತಿಯೊಂದಿಗೆ ದೂರದ ಪ್ರವಾಸ ಕೈಗೊಳ್ಳುವ ಮನಸ್ಸಾಗಲಿದೆ. ಹಣಕಾಸಿನ ವ್ಯವಹಾರಗಳಲ್ಲಿ ಅತೀವ ಎಚ್ಚರಿಕೆ ಇರಲಿ. ಸಂಗಾತಿಯ ಕೆಲವು ನಡವಳಿಕೆಗಳು ನಿಮಗೆ ಇಷ್ಟವಾಗದಿರಬಹುದು. ವಿದೇಶದಲ್ಲಿ ನೆಲೆಸಿರುವವರಿಗೆ ಕೊಂಚ ಅಸಮಾಧಾನ ಕಾಡಲಿದೆ.
ಕರ್ಕಾಟಕ ರಾಶಿ ಕಚೇರಿಯ ಕೆಲಸಗಳನ್ನು ನಿಗದಿತ ಸಮಯಕ್ಕೆ ಮುಗಿಸುವಲ್ಲಿ ಯಶಸ್ವಿಯಾಗುವಿರಿ. ಕೌಟುಂಬಿಕ ವಿಚಾರಗಳಲ್ಲಿ ಆಪ್ತರ ಸಲಹೆ ಪಡೆದುಕೊಳ್ಳುವುದು ಸೂಕ್ತ. ನಿಮಗೆ ಬೇಕಾದವರಿಂದ ಉತ್ತಮ ಬೆಂಬಲ ಹಾಗೂ ಪ್ರೋತ್ಸಾಹ ದೊರೆಯಲಿದೆ. ಹದಗೆಟ್ಟಿದ್ದ ಸಂಬಂಧಗಳನ್ನು ಮತ್ತೆ ಸರಿಪಡಿಸಿಕೊಳ್ಳಲು ಇದು ಸಕಾಲ. ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಬೇಕೆನಿಸುತ್ತದೆ. ಕೆಲವು ಅನಿವಾರ್ಯ ಸವಾಲುಗಳನ್ನು ಎದುರಿಸಬೇಕಾಗಿ ಬರಬಹುದು. ಮಕ್ಕಳ ಅಗತ್ಯಗಳಿಗಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ.
ಸಿಂಹ ರಾಶಿ ಸತ್ಕಾರ್ಯಗಳಿಗೆ ಗುರು-ಹಿರಿಯರ ಆಶೀರ್ವಾದ ಮತ್ತು ಪ್ರೋತ್ಸಾಹ ಸಿಗಲಿದೆ. ಮೇಲಧಿಕಾರಿಗಳೊಂದಿಗೆ ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸುವಿರಿ, ನಿಮ್ಮ ಸಲಹೆಗಳಿಗೆ ಮನ್ನಣೆ ಸಿಗಲಿದೆ. ನಿಮ್ಮದೇ ತಪ್ಪುಗಳಿಂದ ನಿಮ್ಮ ಘನತೆಗೆ ಕುಂದುಬಾರದಂತೆ ನೋಡಿಕೊಳ್ಳಿ. ಆಡಳಿತಾತ್ಮಕವಾಗಿ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ತರುವಿರಿ. ಅನಗತ್ಯವಾಗಿ ಎಲ್ಲರೊಂದಿಗೂ ವಾದಕ್ಕಿಳಿಯುವ ಪ್ರವೃತ್ತಿ ಮೂಡಬಹುದು. ಇಂದಿನ ಕೆಲಸಗಳನ್ನು ಶಿಸ್ತಿನಿಂದ ಪೂರ್ಣಗೊಳಿಸುವಿರಿ. ನಿಮ್ಮ ಬಗ್ಗೆ ಇಲ್ಲಸಲ್ಲದ ವದಂತಿಗಳು ಹರಡುವ ಸಾಧ್ಯತೆ ಇದೆ.
ಕನ್ಯಾ ರಾಶಿ ವ್ಯಾಪಾರ-ವ್ಯವಹಾರಗಳಲ್ಲಿ ಹಣಕಾಸಿನ ಬಗ್ಗೆ ಅತೀವ ಎಚ್ಚರವಿರಲಿ. ಇಂದು ಹೆಚ್ಚು ಅನಿವಾರ್ಯ ಓಡಾಟವಿರಲಿದ್ದು, ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಇರಲಿ. ನೀಡಬೇಕಾದ ಗೌರವವನ್ನು ಇತರರಿಗೆ ನೀಡಿ. ಊಹಾಪೋಹಗಳಿಗಿಂತ ಕಣ್ಣೆದುರಿನ ಸ್ಪಷ್ಟ ಸತ್ಯವನ್ನು ಮಾತ್ರ ನಂಬಿ. ಸಂಗಾತಿಯ ಇಷ್ಟಾರ್ಥಗಳನ್ನು ಪೂರೈಸಿ ಅವರನ್ನು ಸಂತೋಷಪಡಿಸುವಿರಿ. ಹಣಕಾಸಿನ ವ್ಯವಹಾರಗಳು ಅತ್ಯಂತ ಪಾರದರ್ಶಕವಾಗಿರಲಿ.
ತುಲಾ ರಾಶಿ ಸರ್ಕಾರಿ ನೌಕರರು ತಮ್ಮ ಕೆಲಸಗಳಲ್ಲಿ ಯಾವುದೇ ಲೋಪವಾಗದಂತೆ ಜಾಗರೂಕರಾಗಿರಬೇಕು. ಬದಲಾಗುವ ಸನ್ನಿವೇಶಗಳಿಗೆ ಮತ್ತು ವ್ಯಕ್ತಿಗಳಿಗೆ ತಕ್ಕಂತೆ ನಿಮ್ಮನ್ನು ನೀವು ಹೊಂದಿಸಿಕೊಳ್ಳುವಿರಿ. ಕುಟುಂಬದ ಕಡೆಗೆ ಸಂಗಾತಿಯ ತೋರುವ ಕಾಳಜಿಯು ನಿಮ್ಮ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಹೊಸ ಸಿಬ್ಬಂದಿಯನ್ನು ನೇಮಿಸಿಕೊಂಡು ವ್ಯವಹಾರ ವಿಸ್ತರಿಸುವ ಕನಸು ಕಾಣುವಿರಿ. ನೇರವಾಗಿ ಯಾರ ಮೇಲೂ ಗೂಬೆ ಕೂರಿಸದಿರುವುದು ಒಳಿತು. ಎಷ್ಟೇ ಪರಿಣತರಾಗಿದ್ದರೂ ವ್ಯವಹಾರದಲ್ಲಿ ಒಮ್ಮೆ ಎಚ್ಚರ ತಪ್ಪುವ ಸಂಭವವಿದೆ.
ವೃಶ್ಚಿಕ ರಾಶಿ ಜವಳಿ ವ್ಯಾಪಾರಿಗಳು ತಮ್ಮ ಮೃದು ಮಾತಿನಿಂದಲೇ ಉತ್ತಮ ವ್ಯಾಪಾರ ಮಾಡಿ ಲಾಭ ಗಳಿಸುವರು. ಕೌಟುಂಬಿಕ ವಿಚಾರಗಳಲ್ಲಿ ಮೂರನೇ ವ್ಯಕ್ತಿಗಳ ಪ್ರವೇಶಕ್ಕೆ ಅಥವಾ ಹಸ್ತಕ್ಷೇಪಕ್ಕೆ ಅವಕಾಶ ನೀಡದಿರಿ. ಉದ್ಯಮದ ಹಿತದೃಷ್ಟಿಯಿಂದ ಹೊಸ ಸ್ನೇಹ ಬೆಳೆಸುವಿರಿ. ಕಚೇರಿಯಲ್ಲಿ ತಾಳ್ಮೆ ಮತ್ತು ವಿನಯದಿಂದ ವರ್ತಿಸುವುದು ಶ್ರೇಯಸ್ಕರ. ಸಮಸ್ಯೆಗಳನ್ನು ಹೇಳಿಕೊಂಡರೂ ಕಷ್ಟ, ಮೌನವಾಗಿದ್ದರೂ ಕಷ್ಟ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಬಹುದು. ಅಪರಿಚಿತ ಕರೆಗಳು ಹೆಚ್ಚಾಗಲಿವೆ. ನಿಮ್ಮ ಸಾಧನೆಯೇ ನಿಮ್ಮನ್ನು ಗುರುತಿಸುವಂತೆ ಮಾಡುತ್ತದೆ.
ಧನು ರಾಶಿ ವಿದ್ಯಾರ್ಥಿಗಳು ಕಠಿಣ ವಿಷಯಗಳ ಅಧ್ಯಯನದ ಕಡೆಗೆ ಹೆಚ್ಚಿನ ಒಲವು ತೋರಬೇಕು. ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳುವ ಭೀತಿ ಇರುವುದರಿಂದ ಎಚ್ಚರವಿರಲಿ. ಉದ್ಯಮಿಗಳಿಗೆ ಉತ್ತಮ ಧನಲಾಭದ ನಿರೀಕ್ಷೆ ಇದೆ, ಆದರೆ ಉತ್ಪಾದನಾ ವಲಯದಲ್ಲಿ ಸ್ವಲ್ಪ ಹಿನ್ನಡೆಯಾಗಬಹುದು. ನಿಮಗೆ ದೊರೆತ ಬೆಂಬಲವನ್ನು ಇತರರಿಗೂ ನೀಡುವ ಸದ್ಬುದ್ಧಿ ಬೆಳೆಸಿಕೊಳ್ಳಿ. ಮಿತವಾದ ದೈಹಿಕ ವ್ಯಾಯಾಮ ಒಳ್ಳೆಯದು. ಅತಿಯಾದ ಸಲುಗೆ ಕೆಲವು ಬಾರಿ ತೊಂದರೆ ತರಬಹುದು. ಇಂದಿನ ಕಾರ್ಯಗಳು ನೀವು ಅಂದುಕೊಂಡಷ್ಟು ಸುಲಭವಾಗಿ ಮುಗಿಯುವುದಿಲ್ಲ.
ಮಕರ ರಾಶಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ದೂರದೃಷ್ಟಿ ಇರಲಿ. ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿಯೇ ಮುಂದಿನ ಹೆಜ್ಜೆ ಇಡಿ. ಅತಿಯಾದ ದುರಾಸೆಯಿಂದಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಸಂಬಂಧಗಳನ್ನು ಉತ್ತಮವಾಗಿ ನಿರ್ವಹಿಸುವ ಕಲೆ ನಿಮಗೆ ಚೆನ್ನಾಗಿ ತಿಳಿದಿದೆ. ಹಳೆಯ ಸ್ನೇಹಿತರನ್ನು ಭೇಟಿಯಾಗಿ ಮನಬಿಚ್ಚಿ ಮಾತನಾಡುವಿರಿ. ಆಸ್ತಿ ವಿಚಾರದಲ್ಲಿ ಇತರರ ಮೇಲಿನ ಅವಲಂಬನೆ ಹೆಚ್ಚಾಗಬಹುದು. ಮನೆಯ ಜವಾಬ್ದಾರಿಗಳಿಂದಾಗಿ ಒತ್ತಡ ಅಧಿಕವಿರುತ್ತದೆ. ಅಪರಿಚಿತ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಎಚ್ಚರ.
ಕುಂಭ ರಾಶಿ ವಾಹನ ಚಾಲನೆ ಮಾಡುವಾಗ ಅತೀವ ಎಚ್ಚರಿಕೆ ಅಗತ್ಯ. ವ್ಯವಹಾರದಲ್ಲಿ ಕಠಿಣ ಶ್ರಮ ಬೇಡಲಿದ್ದು, ನಿಮ್ಮ ಯೋಜನೆಗಳು ಯಶಸ್ವಿಯಾಗುವ ಸಂಪೂರ್ಣ ಸಾಧ್ಯತೆ ಇದೆ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗಿನ ನಿಮ್ಮ ವರ್ತನೆಯಲ್ಲಿ ಬದಲಾವಣೆ ಕಂಡುಬರಲಿದೆ. ನಿಮ್ಮ ವ್ಯಕ್ತಿತ್ವದಿಂದ ಹಲವರು ಪ್ರಭಾವಿತರಾಗುವರು. ಅನಾರೋಗ್ಯದ ಮುನ್ಸೂಚನೆಗಳನ್ನು ನಿರ್ಲಕ್ಷ್ಯ ಮಾಡಬೇಡಿ. ನಿಶ್ಚಿತ ಗುರಿಯ ಕೊರತೆಯು ವೈಫಲ್ಯಕ್ಕೆ ದಾರಿ ಮಾಡಿಕೊಡಬಹುದು. ಮಾನಸಿಕವಾಗಿ ದೃಢರಾಗಬೇಕಾದ ಅನಿವಾರ್ಯತೆ ಇದೆ.
ಮೀನ ರಾಶಿ ಕೈಗೊಂಡ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ನಿಮ್ಮ ಕರ್ತವ್ಯಗಳನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿ. ಉದ್ಯೋಗದ ಸ್ಥಳದಲ್ಲಿ ಕೆಲಸದ ಕಡೆಗೆ ಹೆಚ್ಚಿನ ಏಕಾಗ್ರತೆ ಅಗತ್ಯ. ಕೆಲವು ನಿರ್ಧಾರಗಳನ್ನು ಕೈಗೊಳ್ಳುವಾಗ ಅಹಂಕಾರದ ಭಾವನೆ ಮೂಡಬಹುದು. ಆದರೂ, ಸಾಮಾನ್ಯರೊಂದಿಗೆ ಬೆರೆಯುವುದು ನಿಮಗೆ ಆನಂದ ನೀಡುತ್ತದೆ. ನಿಮ್ಮ ಪ್ರೀತಿಯ ಮಾತುಗಳಿಂದ ಅಪರಿಚಿತರ ಸ್ನೇಹವನ್ನೂ ಸಂಪಾದಿಸುವಿರಿ. ಆಕಸ್ಮಿಕವಾಗಿ ಧನಲಾಭವಾಗುವ ಯೋಗವಿದೆ.


