ಸಮಗ್ರ ಸುದ್ದಿ
ಇಂದಿನ ಪಂಚಾಂಗ
- ಶಾಲಿವಾಹನ ಶಕೆ: 1949 ಪರಾಭವ ಸಂವತ್ಸರ
- ಆಯನ ಹಾಗೂ ಋತು: ದಕ್ಷಿಣಾಯನ, ವರ್ಷ ಋತು
- ಮಾಸ ಹಾಗೂ ಪಕ್ಷ: ಭಾದ್ರಪದ ಮಾಸ (ಚಾಂದ್ರಮಾನ), ಸಿಂಹ ಮಾಸ (ಸೌರಮಾನ), ಶುಕ್ಲ ಪಕ್ಷ
- ತಿಥಿ ಹಾಗೂ ವಾರ: ಅಷ್ಟಮಿ, ಶುಕ್ರವಾರ
- ನಕ್ಷತ್ರ: ಉತ್ತರಾಫಲ್ಗುಣಿ (ಮಹಾನಕ್ಷತ್ರ), ಜ್ಯೇಷ್ಠಾ (ನಿತ್ಯನಕ್ಷತ್ರ)
- ಯೋಗ ಮತ್ತು ಕರಣ: ಪ್ರೀತಿ ಯೋಗ, ವಣಿಜ ಕರಣ
- ಸೂರ್ಯೋದಯ ಮತ್ತು ಸೂರ್ಯಾಸ್ತ: 06:09 AM – 06:17 PM
- ಶುಭಾಶುಭ ಕಾಲಗಳು:
- ರಾಹು ಕಾಲ: 10:43 AM – 12:14 PM
- ಯಮಗಂಡ ಕಾಲ: 03:16 PM – 04:47 PM
- ಗುಳಿಕ ಕಾಲ: 07:41 AM – 09:12 AM
ಇಂದಿನ ರಾಶಿ ಭವಿಷ್ಯ
ಮೇಷ ರಾಶಿ ಗೊಂದಲಗಳಿಂದಾಗಿ ನಿಮ್ಮ ಪ್ರಮುಖ ಖರೀದಿ ನಿರ್ಧಾರಗಳು ಬದಲಾಗುವ ಸಾಧ್ಯತೆಯಿದೆ. ಆರ್ಥಿಕ ಮುಗ್ಗಟ್ಟಿನಿಂದ ಹೊರಬಂದು ನೆಮ್ಮದಿ ಕಂಡುಕೊಳ್ಳುವಿರಿ. ಹೆಚ್ಚಿನ ಉತ್ಸಾಹದಿಂದ ಕೆಲಸಗಳಲ್ಲಿ ಯಶಸ್ಸು ಗಳಿಸುತ್ತೀರಿ. ಇತರರನ್ನು ಟೀಕಿಸದೆ ನಿಮ್ಮ ಕರ್ತವ್ಯದತ್ತ ಗಮನಹರಿಸಿ. ಉದ್ಯೋಗದಲ್ಲಿನ ಸೋಮಾರಿತನದಿಂದ ಮೇಲಧಿಕಾರಿಗಳ ಅಸಮಾಧಾನ ಎದುರಿಸಬೇಕಾದೀತು. ವ್ಯವಹಾರದಲ್ಲಿನ ನಷ್ಟವನ್ನು ಪರ್ಯಾಯ ಮಾರ್ಗಗಳ ಮೂಲಕ ಸರಿದೂಗಿಸುವಿರಿ.
ವೃಷಭ ರಾಶಿ ಪಾಲುದಾರರೊಂದಿಗೆ ಸೌಹಾರ್ದತೆಯಿಂದ ವರ್ತಿಸುವುದು ಉತ್ತಮ. ಇಷ್ಟವಿಲ್ಲದಿದ್ದರೂ ಉದ್ಯೋಗ ಬದಲಾವಣೆ ಅನಿವಾರ್ಯವಾಗಬಹುದು. ಎಡವಿ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಿ. ಸಂಬಂಧಿಕರಿಂದ ನಿರೀಕ್ಷಿತ ಬೆಂಬಲ ಸಿಗದಿರಬಹುದು. ಹಿರಿಯರ ಸಲಹೆಗಳು ದಾರಿದೀಪವಾಗಲಿವೆ. ನಿಮ್ಮ ರಹಸ್ಯಗಳನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳುವಿರಿ ಹಾಗೂ ನಿಮ್ಮ ವರ್ತನೆ ಕೆಲವರಿಗೆ ಅಸಹಜವೆನಿಸಬಹುದು.
ಮಿಥುನ ರಾಶಿ ಪುನರಾವರ್ತಿತ ಘಟನೆಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ, ಇದು ಮಾನಸಿಕ ಕಿರಿಕಿರಿ ತರಬಹುದು. ಹೊಸತನ್ನು ಕಲಿಯುವ ಆಸಕ್ತಿ ಕೊಂಚ ಕಡಿಮೆಯಾಗಲಿದೆ. ನಟನಾ ಕ್ಷೇತ್ರದತ್ತ ಒಲವು ಮೂಡುವ ಸಾಧ್ಯತೆ ಇದೆ. ಸಮಾಜಮುಖಿ ಕೆಲಸಗಳಿಂದ ಮೆಚ್ಚುಗೆ ಪ್ರಾಪ್ತಿಯಾಗಲಿದೆ. ಕುಲದೇವತಾ ದರ್ಶನ ಭಾಗ್ಯವಿದೆ. ಪ್ರಯಾಣದಲ್ಲಿ ಅಡೆತಡೆಗಳಾಗಬಹುದು ಹಾಗೂ ಹೂಡಿಕೆಗಳನ್ನು ಹಿಂಪಡೆಯುವ ನಿರ್ಧಾರಕ್ಕೆ ಬರಬೇಕಾಗಬಹುದು.
ಕರ್ಕಾಟಕ ರಾಶಿ ಅಸಮರ್ಪಕ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ಏರುಪೇರಾಗಬಹುದು. ಮಹಿಳೆಯರಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಬೇರೆ ಊರಿನ ಪ್ರಯಾಣವು ಆಯಾಸ ತರಬಹುದು. ದಾಂಪತ್ಯದಲ್ಲಿ ಹೊಂದಾಣಿಕೆ ತರಲು ಹೆಚ್ಚಿನ ಪ್ರಯತ್ನ ಅಗತ್ಯ. ವೃತ್ತಿಜೀವನದಲ್ಲಿ ಸಣ್ಣಪುಟ್ಟ ಗೊಂದಲಗಳು ಉಂಟಾಗಬಹುದು. ತಾಯಿಯ ಇಷ್ಟಾರ್ಥಗಳನ್ನು ಈಡೇರಿಸಲು ಶ್ರಮಿಸುವಿರಿ. ಇಂದು ಹಲವು ಜವಾಬ್ದಾರಿಗಳನ್ನು ಏಕಕಾಲಕ್ಕೆ ನಿಭಾಯಿಸಬೇಕಾಗುತ್ತದೆ.
ಸಿಂಹ ರಾಶಿ ಭಾವನಾತ್ಮಕ ವಿಷಯಗಳಿಗೆ ಸ್ಪಂದಿಸುವುದು ಕೊಂಚ ಕಷ್ಟವಾಗಬಹುದು. ಆಪ್ತರೊಂದಿಗೆ ಮಾತನಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸಾಲಗಾರರ ಕಾಟ ಹೆಚ್ಚಾಗುವ ಸಾಧ್ಯತೆ. ಜನಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ವಿದೇಶ ಪ್ರಯಾಣದ ಅವಕಾಶಗಳು ಒದಗಿಬರಬಹುದು. ತರಾತುರಿಯ ಪ್ರಯಾಣ ಬೇಡ. ಮೇಲಧಿಕಾರಿಗಳೊಂದಿಗಿನ ವರ್ತನೆಯಿಂದ ನಿಮ್ಮ ಗೌರವಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಿ.
ಕನ್ಯಾ ರಾಶಿ ದಂಪತಿಗಳ ನಡುವೆ ಸಾಮರಸ್ಯ ಮೂಡಿಸಲು ಇಬ್ಬರ ಶ್ರಮವೂ ಅಗತ್ಯ. ನಿಮ್ಮ ವ್ಯವಹಾರದಲ್ಲಿ ಪರಿಚಿತರ ಹಸ್ತಕ್ಷೇಪ ನಿಮಗೆ ಇಷ್ಟವಾಗದಿರಬಹುದು. ಹಳೆಯ ನೆನಪುಗಳು ಕಾಡಿ ಮನಸ್ಸಿಗೆ ದುಃಖವಾಗಬಹುದು. ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳದೆ ಕೊಂಚ ಅಹಂಕಾರ ಪ್ರದರ್ಶಿಸುವಿರಿ. ನಿಮ್ಮ ನೇರ ಹಾಗೂ ಕಠಿಣ ಮಾತುಗಳಿಂದ ವಿರೋಧಿಗಳ ಗುಂಪೊಂದು ಸೃಷ್ಟಿಯಾಗುವ ಸಾಧ್ಯತೆ ಇದೆ.
ತುಲಾ ರಾಶಿ ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ದೂರ ಪ್ರಯಾಣ ಮಾಡುವವರು ಹಿರಿಯರ ಆಶೀರ್ವಾದ ಪಡೆಯುವುದು ಒಳಿತು. ಸಂಗಾತಿಯೊಂದಿಗೆ ಹಳೆಯ ವಿಚಾರಗಳಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಹೆಸರನ್ನು ಬಳಸಿ ಇತರರು ಲಾಭ ಪಡೆಯಬಹುದು. ನಿಮ್ಮ ನಿರ್ಧಾರಗಳಿಗೆ ನೀವು ಬದ್ಧರಾಗಿರುವಿರಿ ಮತ್ತು ಯಾರ ಒತ್ತಾಯಕ್ಕೂ ಮಣಿಯುವುದಿಲ್ಲ.
ವೃಶ್ಚಿಕ ರಾಶಿ ಏಕಾಂತವನ್ನು ಬಯಸುವಿರಿ. ನ್ಯಾಯ ಪರ ಹೋರಾಡುವವರಿಗೆ ಸೂಕ್ತ ಸಾಕ್ಷ್ಯಗಳು ದೊರೆಯಲಿವೆ. ಸಮಾಜ ಸೇವಕರಿಗೆ ಜನರ ಬೆಂಬಲ ಸಿಗಲಿದೆ. ಬರುವುದಿಲ್ಲವೆಂದು ಕೈಬಿಟ್ಟಿದ್ದ ಹಣ ಮರಳಿ ಬರುವ ಯೋಗವಿದೆ. ಪ್ರಾಣಿಗಳ ಮೇಲಿನ ಪ್ರೀತಿ ಹೆಚ್ಚಾಗಲಿದೆ. ಅನುಮಾನಗಳನ್ನು ಬದಿಗೊತ್ತಿ ನೇರವಾಗಿ ವ್ಯವಹರಿಸಲು ಪ್ರಯತ್ನಿಸಿ. ಭಾವನಾತ್ಮಕವಾಗಿ ಸ್ಪಂದಿಸಲು ಕೊಂಚ ಕಷ್ಟವಾದರೂ ಇಂದು ಹೆಚ್ಚಿನ ಸಂತೋಷದಿಂದ ಇರುವಿರಿ.
ಧನು ರಾಶಿ ನಿಮ್ಮದೇ ಆದ ನಿಯಮ ಹಾಗೂ ಚೌಕಟ್ಟಿಗೆ ಬದ್ಧರಾಗಿರುವಿರಿ. ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ ಎಂಬ ಸತ್ಯ ಅರಿವಿಗೆ ಬರಲಿದೆ. ಸರ್ಕಾರಿ ಸೌಲಭ್ಯಗಳಿಗಾಗಿ ಓಡಾಟ ಅನಿವಾರ್ಯ. ಮಾತಿನ ಚಾತುರ್ಯದಿಂದ ಜಯ ಸಾಧಿಸುವಿರಿ. ಆರ್ಥಿಕ ಭದ್ರತೆಗಾಗಿ ನಿರಂತರ ಶ್ರಮ ಅಗತ್ಯ. ಧಾರ್ಮಿಕ ಆಚರಣೆಗಳ ಬಗ್ಗೆ ನಿರಾಸಕ್ತಿ ಮೂಡಬಹುದು. ಯಾವುದೇ ಟೀಕೆಗಳಿಗೂ ಜಗ್ಗದೆ ನಿಮ್ಮ ಕರ್ತವ್ಯವನ್ನು ನೀವು ನಿರ್ವಹಿಸಿ.
ಮಕರ ರಾಶಿ ನೀವು ತೆಗೆದುಕೊಳ್ಳುವ ನಿರ್ಧಾರಗಳಿಗೆ ಕುಟುಂಬದಿಂದ ಪೂರ್ಣ ಬೆಂಬಲ ಸಿಗಲಿದೆ. ಮನೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುವಿರಿ. ವಾತ ಸಂಬಂಧಿ ಸಮಸ್ಯೆಗಳಿಗೆ ಮುಂಜಾಗ್ರತಾ ಚಿಕಿತ್ಸೆ ಪಡೆಯುವುದು ಒಳಿತು. ಆಯ್ಕೆಗಳ ವಿಚಾರ ಬಂದಾಗ ತಾಳ್ಮೆಯಿಂದ ಯೋಚಿಸಿ ನಿರ್ಧರಿಸಿ. ಕೃಷಿಕರಿಗೆ ನಿರೀಕ್ಷಿತ ಆದಾಯದಲ್ಲಿ ಕೊಂಚ ಇಳಿಕೆ ಕಂಡುಬರಬಹುದು.
ಕುಂಭ ರಾಶಿ ನಿಮ್ಮ ನಡವಳಿಕೆ ಕೆಲವರಿಗೆ ವಿಚಿತ್ರವಾಗಿ ಕಾಣಬಹುದು. ಅನಿರೀಕ್ಷಿತ ಬದಲಾವಣೆಗಳಿಗೆ ಒಗ್ಗಿಕೊಳ್ಳಬೇಕಾಗುತ್ತದೆ. ಕಳೆದುಹೋಗಿದ್ದ ವಸ್ತು ಮರಳಿ ಸಿಕ್ಕು ಸಂತಸವಾಗಲಿದೆ. ಸಮಾಜ ಸೇವೆಯಿಂದ ಪ್ರಶಂಸೆ ನಿರೀಕ್ಷಿಸುವಿರಿ. ಹಣದ ಮುಗ್ಗಟ್ಟಿನ ನಡುವೆಯೂ ಅನಿವಾರ್ಯ ಖರ್ಚುಗಳು ಎದುರಾಗಲಿವೆ. ಮನೆಯಿಂದ ದೂರವಿರುವುದು ಬೇಸರ ತರಿಸಬಹುದು. ವ್ಯಾಪಾರ ಸಾಧಾರಣವಾಗಿರಲಿದೆ.
ಮೀನ ರಾಶಿ ನಿಮ್ಮ ಜವಾಬ್ದಾರಿಗಳನ್ನು ಶ್ರದ್ಧೆಯಿಂದ ನಿರ್ವಹಿಸುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಆಸಕ್ತಿ ಮೂಡಲಿದೆ. ನಿಮ್ಮ ಪ್ರಾಮಾಣಿಕತೆಯನ್ನು ಕೆಲವರು ಪ್ರಶ್ನಿಸಬಹುದು. ವ್ಯಾಪಾರವನ್ನು ಅತ್ಯುತ್ಸಾಹದಿಂದ ಮುನ್ನಡೆಸುವಿರಿ. ಸಂಗಾತಿಯ ಭೇಟಿಗೆ ಹೊಸ ಅವಕಾಶಗಳನ್ನು ಹುಡುಕುವಿರಿ. ಆರ್ಥಿಕ ಒತ್ತಡದಿಂದ ಪಾರಾಗಲು ದಾರಿ ಕಂಡುಕೊಳ್ಳುವಿರಿ. ಯಾವುದೇ ಪರಿಸ್ಥಿತಿಯಲ್ಲೂ ಸಮಯಪ್ರಜ್ಞೆಯಿಂದ ವರ್ತಿಸುವುದು ಉತ್ತಮ
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j