ಚಿತ್ರದುರ್ಗ ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಡಾ. ಕಂಠೀರವ ಬಾಲ ಸರಸ್ವತಿ ಇನ್ನಿಲ್ಲ.

ಚಿತ್ರದುರ್ಗ, ಮೇ09 :

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಹಿರಿಯೂರು ತಾಲ್ಲೂಕಿನ ಬಸಪ್ಪನಮಾಳಿಗೆ ಗ್ರಾಮದ ಡಾ. ಕಂಠೀರವ ಬಾಲ ಸರಸ್ವತಿ (86 ವರ್ಷ) ಅವರು ಹೃದಯಾಘಾತದಿಂದ ಇಂದು ಮಧ್ಯಾನ್ಹ ಮೂರು ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿ ನಿಧನರಾದರು.

ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಚಿತ್ರದುರ್ಗದಲ್ಲಿ ಬಸವೇಶ್ವರ ಆಸ್ಪತ್ರೆ ಸ್ಥಾಪನೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮತ್ತು ಮೆಡಿಕಲ್ ಕಾಲೇಜಿನ ಮೊದಲ ಡೀನ್ ಆಗಿದ್ದರು. ಎಸ್.ಎಸ್. ಆಸ್ಪತ್ರೆ, ದಾವಣಗೆರೆ, ಎಂ.ಎಸ್.ರಾಮಯ್ಯ ಆಸ್ಪತ್ರೆ, ಬೆಂಗಳೂರು ಮತ್ತು ಅಮೇರಿಕಾ ಸೇರಿದಂತೆ ಇತರೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿದ್ದರು.

Leave a Reply

Your email address will not be published. Required fields are marked *