ಚಿತ್ರದುರ್ಗ ತಾಲ್ಲೂಕಿನ ಹಾಯ್ಕಲ್‌ನಲ್ಲಿ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ.

ಚಿತ್ರದುರ್ಗ ಜೂ. 20

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಚಿತ್ರದುರ್ಗ ತಾಲ್ಲೂಕು ಹಾಗೂ ಪ್ರಾದೇಶಿಕ,ಜಿಲ್ಲಾ, ಹಾಗೂ ಯೋಜನಾ ಕಚೇರಿಯಡಿಯಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ತಪಾ ಸಣಾ ಶಿಬಿರವನ್ನು ಹಾಯ್ಕಲ್‍ನ ಶ್ರೀ ಶಾರದಾ ಜ್ಞಾನ ವಿಕಾಸಕೇಂದ್ರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಶಿಬಿರವನ್ನು ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಕಮಲಾಕ್ಷ ರವರು ಚಾಲನೆಯನ್ನು ನೀಡಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಸದಸ್ಯರು ಉಚಿತ ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಎಲ್ಲರೂ ಪಡೆದುಕೊಳ್ಳಿ ಎಂದರು.

ಡಾಕ್ಟರ್ ರವೀಂದ್ರ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳು ವುದರ ಬಗ್ಗೆ ನಮ್ಮ ಆರೋಗ್ಯವನ್ನು ಶಿಸ್ತುಬದ್ಧವಾಗಿ ಇಟ್ಟುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಸಭಾಧ್ಯಕ್ಷರಾಗಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಗೌರಮ್ಮ ವಹಿಸಿದ್ದರು. ಬಸಾಪಟ್ಟಣ ಯೋಜನಾ ಗ್ರಾಮ ಪಂಚಾಯತಿ ಸದಸ್ಯರು ಮಂಜುನಾಥ್, ಹಿರಿಯ ಆರೋಗ್ಯ ಕಣ್ಣಿನ ವೈದ್ಯರು ದರ್ಶನ್ ಹಾಗೂ ಸಿಬ್ಬಂದಿಗಳು ದೃಷ್ಟಿ ಕಣ್ಣಿನ ಆಸ್ಪತ್ರೆ ಚಿತ್ರದುರ್ಗ ಮತ್ತು ಸಿಬ್ಬಂದಿ ವರ್ಗ ಹಾಗೂ ಅಕ್ಷಯ ಗ್ಲೋಬಲ್ ಆಸ್ಪತ್ರೆ ಮತ್ತು ಸಿಬ್ಬಂದಿ ವರ್ಗ ಮದಕರಿಪುರ ವಲಯದ ಮೇಲ್ವಿಚಾರಕರು ನಿಜಲಿಂಗಪ್ಪ,ಜ್ಞಾನವಿಕಾಸ ಸಮನ್ವಯ ಅಧಿಕಾರಿ ಚಂದ್ರಮ್ಮ, ವಿಮಾ ಸಮನ್ವಧಿಕಾರಿ ರಾಜು ಕೆ ಎಸ್, ಸಮನ್ವಯಧಿಕಾರಿ ಮಂಜುನಾಥ್ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ರೂಪ ಕೇಂದ್ರದ ಸದಸ್ಯರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *