ಬೆಂಗಳೂರು : ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಹಾಗೂ ತಮ್ಮ ತವರೂರಿನಲ್ಲೇ ಕೆಲಸ ಮಾಡಲು ಇಚ್ಛಿಸುವ ಕರ್ನಾಟಕದ ಯುವಜನತೆಗೆ ಇಲ್ಲೊಂದು ಭರ್ಜರಿ ಸಿಹಿ ಸುದ್ದಿ ಇದೆ. ಕೇಂದ್ರ ಸರ್ಕಾರದ CSC e-Governance ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ವಿವಿಧ ಆಧಾರ್ ಸೇವಾ ಕೇಂದ್ರಗಳಲ್ಲಿ (Aadhaar Service Centers) ಖಾಲಿ ಇರುವ ಆಪರೇಟರ್ ಮತ್ತು ಸೂಪರ್ವೈಸರ್ ಹುದ್ದೆಗಳಿಗೆ ಬೃಹತ್ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.
ಕೇವಲ ಪಿಯುಸಿ (PUC) ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ತಮ್ಮದೇ ಜಿಲ್ಲೆಯಲ್ಲಿ ಕೆಲಸ ಮಾಡುವ ಸುವರ್ಣಾವಕಾಶ ಇದಾಗಿದೆ.
ಹುದ್ದೆಯ ವಿವರ ಹಾಗೂ ಕಾರ್ಯವ್ಯಾಪ್ತಿ: UIDAI ಅನುಮೋದಿತ ಆಧಾರ್ ಸೇವಾ ಕೇಂದ್ರಗಳಲ್ಲಿ ಜಿಲ್ಲಾ ಮಟ್ಟದ ಆಧಾರ್ ಸೂಪರ್ವೈಸರ್ ಹಾಗೂ ಆಪರೇಟರ್‌ಗಳಾಗಿ ಆಯ್ಕೆಯಾಗುವ ಅಭ್ಯರ್ಥಿಗಳು, ಹೊಸ ಆಧಾರ್ ನೋಂದಣಿ, ತಿದ್ದುಪಡಿ (Update) ಮತ್ತು ಬಯೋಮೆಟ್ರಿಕ್ ಪರಿಶೀಲನೆಯಂತಹ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:
- ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
- ಕನಿಷ್ಠ ದ್ವಿತೀಯ ಪಿಯುಸಿ (12ನೇ ತರಗತಿ) ಉತ್ತೀರ್ಣರಾಗಿರಬೇಕು.
- ಅಥವಾ ಎಸ್‌ಎಸ್‌ಎಲ್‌ಸಿ (SSLC) ಜೊತೆಗೆ 2 ವರ್ಷದ ITI ಕೋರ್ಸ್ ಮುಗಿಸಿರಬೇಕು.
- ಅಥವಾ ಎಸ್‌ಎಸ್‌ಎಲ್‌ಸಿ ಜೊತೆಗೆ 3 ವರ್ಷದ ಪಾಲಿಟೆಕ್ನಿಕ್ ಡಿಪ್ಲೊಮಾ (Diploma) ಹೊಂದಿರುವವರೂ ಅರ್ಜಿ ಸಲ್ಲಿಸಬಹುದು.
- ಕಡ್ಡಾಯ ಅರ್ಹತೆ: ಅಭ್ಯರ್ಥಿಗಳು UIDAI ಅಧಿಕೃತ ಪರೀಕ್ಷಾ ಸಂಸ್ಥೆಯಿಂದ ನೀಡಲಾದ ‘ಆಧಾರ್ ಆಪರೇಟರ್’ ಅಥವಾ ‘ಸೂಪರ್ವೈಸರ್’ ಪ್ರಮಾಣಪತ್ರವನ್ನು (Certificate) ಕಡ್ಡಾಯವಾಗಿ ಹೊಂದಿರಬೇಕು.
ವೇತನ ಶ್ರೇಣಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ನಿಗದಿಪಡಿಸಿದ ಅರೆ-ಕೌಶಲ್ಯ ಕಾರ್ಮಿಕರ ಕನಿಷ್ಠ ವೇತನದ ಅನ್ವಯ ಮಾಸಿಕ ₹23,376 ಸಂಬಳ ನೀಡಲಾಗುತ್ತದೆ. ಈ ನೇಮಕಾತಿಯು ಒಂದು ವರ್ಷದ ಗುತ್ತಿಗೆ ಆಧಾರದ ಮೇಲಿದ್ದು, ಕಾರ್ಯಕ್ಷಮತೆಯ ಆಧಾರದ ಮೇಲೆ ಅವಧಿಯನ್ನು ವಿಸ್ತರಿಸುವ ಸಾಧ್ಯತೆಯಿದೆ.
ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ: ರಾಜ್ಯದ ಒಟ್ಟು 31 ಜಿಲ್ಲೆಗಳಲ್ಲಿ ಸುಮಾರು 157 ಹುದ್ದೆಗಳು ಖಾಲಿ ಇವೆ.
ಬಳ್ಳಾರಿ: 12, ಮೈಸೂರು: 8, ದಕ್ಷಿಣ ಕನ್ನಡ: 7, ತುಮಕೂರು: 7, ಬಾಗಲಕೋಟೆ: 6, ಬೆಂಗಳೂರು ಗ್ರಾಮಾಂತರ: 6, ಚಿಕ್ಕಬಳ್ಳಾಪುರ: 6, ಚಿಕ್ಕಮಗಳೂರು: 6, ದಾವಣಗೆರೆ: 6, ಕಲಬುರಗಿ: 6, ವಿಜಯನಗರ: 6, ಬೆಂಗಳೂರು ನಗರ: 5, ಬೆಳಗಾವಿ: 5, ಬೀದರ್: 5, ಹಾವೇರಿ: 5, ಕೊಪ್ಪಳ: 5, ಮಂಡ್ಯ: 5, ರಾಯಚೂರು: 5, ವಿಜಯಪುರ: 5, ಹಾಸನ: 4, ಕೋಲಾರ: 4, ಯಾದಗಿರಿ: 4, ಶಿವಮೊಗ್ಗ:4, ಚಿತ್ರದುರ್ಗ: 4, ಚಾಮರಾಜನಗರ: 4, ಧಾರವಾಡ: 3, ರಾಮನಗರ: 3, ಗದಗ: 3, ಕೊಡಗು: 3, ಉಡುಪಿ: 3, ಉತ್ತರ ಕನ್ನಡ: 2 ಹುದ್ದೆಗಳು
ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು CSC ಯ ಅಧಿಕೃತ ಉದ್ಯೋಗ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
- ಅರ್ಜಿ ಸಲ್ಲಿಕೆ ಲಿಂಕ್: [https://uidai.dexitglobalexams.com/UIDAI/LoginAction.action]
- ಲಿಂಕ್ ಕ್ಲಿಕ್ ಮಾಡಿ, ಲಭ್ಯವಿರುವ ‘Aadhaar Supervisor/Operator’ ಹುದ್ದೆಯನ್ನು ಆಯ್ಕೆ ಮಾಡಿ.
- ನಿಮ್ಮ ಶೈಕ್ಷಣಿಕ ದಾಖಲೆಗಳು ಮತ್ತು UIDAI ಪ್ರಮಾಣಪತ್ರದ ವಿವರಗಳನ್ನು ತಪ್ಪಿಲ್ಲದೆ ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಆಗಸ್ಟ್ 2026.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j