ಶಾಲೆ ಮುಚ್ಚಿದರೂ ಮಾಸದ ಗುರು-ಶಿಷ್ಯರ ಬಾಂಧವ್ಯ: 20 ವರ್ಷ ಉಚಿತ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಹಳೆಯ ವಿದ್ಯಾರ್ಥಿಗಳ ಗೌರವ.

ಚಿತ್ರದುರ್ಗ ನ. 3

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಜಿಲ್ಲೆಯ ಹಿರಿಯೂರು ತಾಲೂಕು ದಿಂಡಾವರ ಎಂಬ ಗ್ರಾಮದಲ್ಲಿ 1985ರಲ್ಲಿ ಆರಂಭವಾದ ಶಾಲೆ, ಜ್ಞಾನಜ್ಯೋತಿ ಗ್ರಾಮಾಂತರ ಪ್ರೌಢ ಶಾಲೆ, ಆ ಶಾಲೆಯಲ್ಲಿ 20 ವರ್ಷಗಳ ಕಾಲ ಸಂಬಳವಿಲ್ಲದೆ ದುಡಿದ ಗುರುಗಳಿಗೆ ಅವರಿಂದ ಕಲಿತು ಜೀವನ ರೂಪಿಸಿಕೊಂಡ ಹಳೆಯ ವಿದ್ಯಾರ್ಥಿಗಳು ಅದೇ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಮುಖ್ಯೋಪಾಧ್ಯಾಯರಾಗಿದ್ದ ರಂಗಪ್ಪ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, 25-30 ವರ್ಷ ಕಳೆದರೂ ನಮ್ಮನ್ನು ನೆನಪಿನಲ್ಲಿಟ್ಟುಕೊಂಡಿರುವ ವಿದ್ಯಾರ್ಥಿಗಳನ್ನು ತುಂಬಾ ಸಂತಸ ವ್ಯಕ್ತಪಡಿಸಿದರು.

ಕನ್ನಡ ಶಿಕ್ಷಕರಾಗಿದ್ದ ತಿಪ್ಪೇಸ್ವಾಮಿ ಮಾತನಾಡುತ್ತಾ 1985ರಲ್ಲಿ ಶಾಲೆ ಆರಂಭವಾದಾಗ ನಮ್ಮ ಶಾಲೆ ಒಂದು ದನದ ಕೊಟ್ಟಿಗೆಯಲ್ಲಿ ಪ್ರಾರಂಭವಾಯಿತು. ಬೆಳಿಗ್ಗೆ ದನಗಳು ಮೇಯಲು ಹೋದಾಗ ಅದರ ಸಗಣಿ ಗುಡಿಸಿ, ನಂತರ ತರಗತಿಗಳು ಆರಂಭವಾಗುತ್ತಿತ್ತು. ಅಂದು 40-50 ಕಿಲೋ ಮೀಟರ್ ದೂರದಿಂದ ನಾವು ಕೆಲಸಕ್ಕೆ ಬರಬೇಕಾಗಿತ್ತು. ಯಾವುದೇ ಬಸ್ಸು ಸೌಕರ್ಯಗಳಿರಲಿಲ್ಲ, ಆದರೂ ಸಹ ನಮಗೆ ನಮ್ಮ ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕೆಂಬ ಹಂಬಲವಿತ್ತು ಎಂದರು.

ದೈಹಿಕ ಶಿಕ್ಷಕರಾಗಿದ್ದ ಲೋಕೇಶ್ ಮಾತನಾಡುತ್ತಾ ಇಂತಹ ಒಂದು ಗ್ರಾಮದಲ್ಲಿ ಸೇವೆ ಮಾಡುವುದಕ್ಕೆ ನಮಗೆ ಒಳ್ಳೆಯ ಅವಕಾಶವನ್ನು ಈ ಊರಿನ ಜನರು ಮಾಡಿಕೊಟ್ಟರು. ನಮಗೆ ಸಂಬಳ ಇಲ್ಲ ಎನ್ನುವ ಕೊರಗು ಯಾವತ್ತೂ ಬರಲಿಲ್ಲ ಎಂದು ಹೇಳಿದರು.

ವಿಜ್ಞಾನ ಶಿಕ್ಷಕರಾಗಿದ್ದ ಜನಾರ್ಧನ್ ಮಾತನಾಡುತ್ತಾ ಈ ಗುರುವಂದನಾ ಕಾರ್ಯಕ್ರಮದಲ್ಲಿ ಇಷ್ಟೊಂದು ಅದ್ಧೂರಿಯಾಗಿ ಕಾರ್ಯಕ್ರಮ ಏರ್ಪಡಿಸಿದ್ದೀರಿ. ಇಂದು ಮನೆಯಲ್ಲಿ ಒಂದು ಚಿಕ್ಕ ಕಾರ್ಯಕ್ರಮ ಮಾಡುವುದೇ ಕಷ್ಟಕರ. ಹೀಗಿರುವಾಗ ನೀವು ಇಷ್ಟೊಂದು ದೊಡ್ಡ ಕಾರ್ಯಕ್ರಮ ಮಾಡಿರುವುದು ತುಂಬಾ ಸಂತೋಷ ವಾಯಿತು. ನಾವು ಸಂಬಳವಿಲ್ಲದೇ ದುಡಿದು ನಿವೃತ್ತರಾಗಿ ಹೋಗುವಾಗ ಬರೀ ಕೈಯಲ್ಲಿ ಹೋಗಿಲ್ಲ ನಿಮ್ಮಗಳ ಪ್ರೀತಿ-ವಿಶ್ವಾಸಗಳಿಸಿದ್ದೇವೆ ಎಂದು ಮನತುಂಬಿ ನುಡಿದರು.

ಈ ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕರಾಗಿದ್ದ ಗೋಪಾಲಪ್ಪ ಹಾಗೂ ಹಿಂದಿ ಶಿಕ್ಷಕರಾಗಿದ್ದ ಪ್ರಭುದೇವ್ ಭಾಗವಹಿಸಿ, ಈ ಕಾರ್ಯಕ್ರಮದಲ್ಲಿ ನಮ್ಮ ಎಲ್ಲಾ ವಿದ್ಯಾರ್ಥಿಗಳನ್ನು ನೋಡುವ ಭಾಗ್ಯ ಸಿಕ್ಕಿತು ಎಂದು ಸಂತೋಷ ಎಂದರು.

ಹಳೆಯ ವಿದ್ಯಾರ್ಥಿಗಳಾದ ನರಸಿಂಹಮೂರ್ತಿ, ಧನಂಜಯ್, ಧನು, ಗಿರೀಶ್, ಎಸ್. ವಿನಯ್, ಚಂದನ್ ಕಾರ್ಯಕ್ರಮದ ನೇತೃತ್ವವಹಿಸಿದ್ದರು. ರಘು, ತಿಮ್ಮೇಗೌಡ, ಚಂದ್ರಗಿರಿ, ನವೀನ್, ಸಿದ್ದೇಶ್ ಪಿ. ಗೋವರ್ಧನ್ ಇನ್ನೂ ಹಲವಾರು ವಿದ್ಯಾರ್ಥಿಗಳು- ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಜ್ಞಾನಜ್ಯೋತಿ ಗ್ರಾಮಾಂತರ ಪ್ರೌಢಶಾಲೆ ಈಗ ಮುಚ್ಚಿಹೋಗಿದೆ. ಆದರೆ ಗುರುಶಿಷ್ಯರ ಸಂಬಂಧ ಮಾತ್ರ ಅಚ್ಚ ಹಸಿರಾಗಿದೆ. ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ಹಳೆಯ ವಿದ್ಯಾರ್ಥಿಗಳೆಲ್ಲರೂ ಭಾಗವಹಿಸಿದ್ದರು. ತಮ್ಮ ಏಳಿಗೆಗಾಗಿ ದುಡಿದ ಗುರುಗಳನ್ನು ತೆರೆದ ವಾಹನದಲ್ಲಿ ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೈಕಾರಗಳೊಂದಿಗೆ ಮೆರವಣಿಗೆ ಮಾಡಲಾಯಿತು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *