IPL 2023: ಮೊದಲ ಸ್ಥಾನದಲ್ಲಿ ರಹಾನೆ! ಈ ಐಪಿಎಲ್​ನ ಅತಿ ವೇಗದ ಅರ್ಧಶತಕಗಳಿವು

ವೇಗದ ಅರ್ಧಶತಕಗಳ ಪಟ್ಟಿಯಲ್ಲಿ ಮೊದಲ ಹೆಸರು ಅಜಿಂಕ್ಯ ರಹಾನೆ ಅವರದು. ಶನಿವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಹಾನೆ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿ, ತಮ್ಮ ಐಪಿಎಲ್​ ವೃತ್ತಿಬದುಕಿನಲ್ಲಿ ಇತಿಹಾಸ ಸೃಷ್ಟಿಸಿದರು.ರಹಾನೆ ನಂತರ ಈ ಪಟ್ಟಿಯಲ್ಲಿ ಶಾರ್ದೂಲ್ ಠಾಕೂರ್ ಸ್ಥಾನ ಪಡೆದಿದ್ದಾರೆ. ಈ ಆಲ್​ರೌಂಡರ್ ಆರ್​ಸಿಬಿ ವಿರುದ್ಧ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.ಶಾರ್ದೂಲ್ ಠಾಕೂರ್ ಹೊರತುಪಡಿಸಿ, ರಾಜಸ್ಥಾನ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಕೂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 20 ಎಸೆತಗಳಲ್ಲಿ ಸೀಸನ್​ನ ಎರಡನೇ ವೇಗದ ಅರ್ಧಶತಕ ಬಾರಿಸಿದರು.ಇನ್ನು ಲಕ್ನೋ ಪರ ಚೊಚ್ಚಲ ಐಪಿಎಲ್ ಆಡುತ್ತಿರುವ ಕೈಲ್ ಮೇಯರ್ಸ್ ಸಿಎಸ್​ಕೆ ವಿರುದ್ಧ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿದಲ್ಲದೆ, ಸೀಸನ್​ ಮೂರನೇ ವೇಗದ ಅರ್ಧಶತಕ ದಾಖಲಿಸಿದರು.ಸಿಎಸ್​ಕೆ ಆಟಗಾರ ರುತುರಾಜ್ ಗಾಯಕ್ವಾಡ್ ಕೂಡ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಕೇವಲ 23 ಎಸೆತಗಳಲ್ಲಿ ಮತ್ತು ಲಕ್ನೋ ವಿರುದ್ಧ 25 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.ಇವರಲ್ಲದೆ ಸಂಜು ಸ್ಯಾಮ್ಸನ್, ಕೈಲ್ ಮೇಯರ್ಸ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಈ ಸೀಸನ್​ನಲ್ಲಿ ಇದುವರೆಗೆ ತಲಾ 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ.

source https://tv9kannada.com/photo-gallery/cricket-photos/ipl-2023-fastest-50-in-ipl-2023-check-details-in-kannada-psr-au14-553211.html

Leave a Reply

Your email address will not be published. Required fields are marked *