IPL 2023: ಐಪಿಎಲ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಕೊನೆಯವರೆಗೂ ಬ್ಯಾಟ್ ಬೀಸಿದ್ದು ಇಬ್ಬರೇ ಇಬ್ಬರು..!

IPL 2023: ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಜೇಯ 99 ರನ್​ ಬಾರಿಸುವ ಮೂಲಕ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಹಲವು ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಗಳಲ್ಲಿ ಪ್ಲೇಯಿಂಗ್​ ಇಲೆವೆನ್​ನ ಎಲ್ಲರೊಂದಿಗೆ ಬ್ಯಾಟ್​ ಬೀಸಿದ ವಿಶೇಷ ದಾಖಲೆ ಕೂಡ ಸೇರಿದೆ.ಅಂದರೆ ಆರಂಭಿಕನಾಗಿ ಕಣಕ್ಕಿಳಿದು 11ನೇ ಆಟಗಾರನ ಜೊತೆ ಇನಿಂಗ್ಸ್​ ಕಟ್ಟಿದ ವಿಶೇಷ ದಾಖಲೆಯೊಂದು ಶಿಖರ್ ಧವನ್ ಪಾಲಾಗಿದೆ. ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದ ಧವನ್ 11ನೇ ಬ್ಯಾಟರ್ ಮೋಹಿತ್ ರಥಿ ಜೊತೆಗೂಡಿ 55 ರನ್​ಗಳ ಜೊತೆಯಾಟವಾಡಿದ್ದರು.ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಓಪನರ್ ಆಗಿ ಕಣಕ್ಕಿಳಿದು ಎಲ್ಲಾ ಆಟಗಾರರೊಂದಿಗೆ ಜೊತೆಯಾಟವಾಡಿದ 2ನೇ ಬ್ಯಾಟರ್ ಎಂಬ ದಾಖಲೆಯೊಂದು ಶಿಖರ್ ಧವನ್ ಪಾಲಾಯಿತು. ಇದಕ್ಕೂ ಮುನ್ನ ಇಂತಹದೊಂದು ದಾಖಲೆಯನ್ನು ಪಾರ್ಥಿವ್ ಪಟೇಲ್ ನಿರ್ಮಿಸಿದ್ದರು.2019 ರಲ್ಲಿ ಸಿಎಸ್​ಕೆ ವಿರುದ್ಧ ನಡೆದ ಪಂದ್ಯದಲ್ಲಿ ಆರ್​ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿದ ಪಾರ್ಥಿವ್ ಪಟೇಲ್ ಕ್ರೀಸ್ ಕಚ್ಚಿ ನಿಂತು 11ನೇ ಆಟಗಾರ ಮೊಹಮ್ಮದ್ ಸಿರಾಜ್ ಅವರೊಂದಿಗೆ ಜೊತೆಯಾಟವಾಡಿದ್ದರು.ಇದೀಗ ಎಸ್​ಆರ್​ಹೆಚ್​ ಆರಂಭಿಕನಾಗಿ ಆಡಿದ ಶಿಖರ್ ಧವನ್ 66 ಎಸೆತಗಳಲ್ಲಿ ಅಜೇಯ 99 ರನ್​ ಬಾರಿಸುವ ಮೂಲಕ 11ನೇ ಬ್ಯಾಟರ್​ನೊಂದಿಗೆ ಇನಿಂಗ್ಸ್​ ಅಂತ್ಯಗೊಳಿಸಿದ್ದಾರೆ. ಈ ಮೂಲಕ ಐಪಿಎಲ್​ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

source https://tv9kannada.com/photo-gallery/cricket-photos/ipl-2023-shikhar-dhawan-creates-history-in-ipl-kannada-news-zp-au50-553121.html

Leave a Reply

Your email address will not be published. Required fields are marked *