2025-26ನೇ ಶೈಕ್ಷಣಿಕ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಫಲಿತಾಂಶ ಗುರುವಾರ ಮಧ್ಯಾಹ್ನ ಪ್ರಕಟಗೊಂಡಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅಧಿಕೃತವಾಗಿ ಪತ್ರಿಕಾಗೋಷ್ಠಿ ನಡೆಸಿ, ಈ ಬಾರಿಯ ಉತ್ತೀರ್ಣರ ಪ್ರಮಾಣ ಹಾಗೂ ಜಿಲ್ಲಾವಾರು ಸ್ಥಾನಗಳನ್ನು ಘೋಷಣೆ ಮಾಡಿದ್ದಾರೆ. ಈ ವರ್ಷ ರಾಜ್ಯಾದ್ಯಂತ ಶೇ. 94.1 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಅತ್ಯುತ್ತಮ ಸಾಧನೆ ತೋರಿದ್ದಾರೆ.
ಪರೀಕ್ಷೆಯ ಪ್ರಮುಖ ಅಂಶಗಳು
- ಒಟ್ಟು ಪರೀಕ್ಷೆ ಬರೆದವರು: 7,70,209 ವಿದ್ಯಾರ್ಥಿಗಳು
- ಉತ್ತೀರ್ಣರಾದವರು: 7,24,794 ವಿದ್ಯಾರ್ಥಿಗಳು
- ಒಟ್ಟಾರೆ ಉತ್ತೀರ್ಣ ಪ್ರಮಾಣ: ಶೇ. 94.1
- ಪರೀಕ್ಷೆ ನಡೆದ ದಿನಾಂಕ: ಮಾರ್ಚ್ 18 ರಿಂದ ಏಪ್ರಿಲ್ 2, 2026
- ಪರೀಕ್ಷಾ ಕೇಂದ್ರಗಳು: ಒಟ್ಟು 2,870 ಕೇಂದ್ರಗಳು
625ಕ್ಕೆ 625 ಅಂಕ ಪಡೆದ 7 ರತ್ನಗಳು!
ಈ ಬಾರಿಯ ಪರೀಕ್ಷೆಯಲ್ಲಿ ಒಟ್ಟು 7 ಮಂದಿ ವಿದ್ಯಾರ್ಥಿಗಳು ಪೂರ್ಣಕ್ಕೆ ಪೂರ್ಣ ಅಂಕ (625/625) ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅಪೂರ್ವ ಸಾಧನೆ ಮಾಡಿದ ಆ ವಿದ್ಯಾರ್ಥಿಗಳ ವಿವರ ಇಲ್ಲಿದೆ:
- ಭರತ್ (ದಾವಣಗೆರೆ)
- ಬೃಂದಾ (ಚಿಕ್ಕಮಗಳೂರು)
- ಧನುಷ್ (ಬೆಂಗಳೂರು ಉತ್ತರ)
- ಪ್ರೀತಂ (ಉಡುಪಿ)
- ಪ್ರಾರ್ಥನಾ (ಚಿಕ್ಕೋಡಿ)
- ಸೌಜನ್ಯಾ (ವಿಜಯಪುರ)
- ಸುಖದೇವ್ (ರಾಯಚೂರು)
ಜಿಲ್ಲಾವಾರು ಸಾಧನೆ: ಕರಾವಳಿಗೆ ಅಗ್ರಸ್ಥಾನ
ಯಾವ ಜಿಲ್ಲೆ ಪ್ರಥಮ ಹಾಗೂ ಯಾವ ಜಿಲ್ಲೆ ಕೊನೆಯ ಸ್ಥಾನ ಪಡೆಯಲಿದೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ನಿರೀಕ್ಷೆಯಂತೆ ಕರಾವಳಿ ಜಿಲ್ಲೆಗಳು ಮೇಲುಗೈ ಸಾಧಿಸಿವೆ. ಶೇ. 98.40 ರಷ್ಟು ಅತ್ಯಧಿಕ ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ, ಉಡುಪಿ (ಶೇ. 98.18) ಮತ್ತು ಉತ್ತರ ಕನ್ನಡ (ಶೇ. 98.09) ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದುಕೊಂಡಿವೆ. ಶೇ. 85.06 ಫಲಿತಾಂಶದೊಂದಿಗೆ ಕಲಬುರಗಿ ಜಿಲ್ಲೆ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.
ಸಂಪೂರ್ಣ ಜಿಲ್ಲಾವಾರು ಫಲಿತಾಂಶದ ಪಟ್ಟಿ
| ಜಿಲ್ಲೆ | ಉತ್ತೀರ್ಣರ ಪ್ರಮಾಣ (%) | ಜಿಲ್ಲೆ | ಉತ್ತೀರ್ಣರ ಪ್ರಮಾಣ (%) | |
| ದಕ್ಷಿಣ ಕನ್ನಡ | 98.40% | ಬೆಳಗಾವಿ | 94.75% | |
| ಉಡುಪಿ | 98.18% | ದಾವಣಗೆರೆ | 94.64% | |
| ಉತ್ತರ ಕನ್ನಡ | 98.09% | ಮೈಸೂರು | 94.50% | |
| ಹಾಸನ | 97.51% | ರಾಯಚೂರು | 94.41% | |
| ಮಂಡ್ಯ | 97.45% | ವಿಜಯಪುರ | 94.17% | |
| ಶಿರಸಿ | 97.21% | ಚಿಕ್ಕೋಡಿ | 94.09% | |
| ಹಾವೇರಿ | 96.87% | ಬಳ್ಳಾರಿ | 93.36% | |
| ಕೊಡಗು | 96.70% | ಕೊಪ್ಪಳ | 93.10% | |
| ಶಿವಮೊಗ್ಗ | 96.56% | ರಾಮನಗರ | 92.83% | |
| ವಿಜಯನಗರ | 96.39% | ಚಿತ್ರದುರ್ಗ | 92.25% | |
| ಬೆಂಗಳೂರು ಗ್ರಾಮಾಂತರ | 95.84% | ಬೀದರ್ | 92.18% | |
| ಧಾರವಾಡ | 95.59% | ತುಮಕೂರು | 92.04% | |
| ಕೋಲಾರ | 95.50% | ಚಾಮರಾಜನಗರ | 91.89% | |
| ಬಾಗಲಕೋಟೆ | 95.42% | ಯಾದಗಿರಿ | 91.89% | |
| ಬೆಂಗಳೂರು ಉತ್ತರ | 95.34% | ಬೆಂಗಳೂರು ದಕ್ಷಿಣ | 91.65% | |
| ಗದಗ | 95.24% | ಚಿಕ್ಕಬಳ್ಳಾಪುರ | 90.88% | |
| ಚಿಕ್ಕಮಗಳೂರು | 94.99% | ಮಧುಗಿರಿ | 90.26% | |
| ಕಲಬುರಗಿ | 85.06% |
(ಸೂಚನೆ: ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯಗಳು. ಕಡಿಮೆ ಅಂಕ ಪಡೆದವರು ಎದೆಗುಂದದೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಈಗಿನಿಂದಲೇ ಸಿದ್ಧತೆ ನಡೆಸಿ.)

