ಚಿತ್ರದುರ್ಗ ಜೂ. 28
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಜಿಲ್ಲೆಯ ಹೊಳಲ್ಕೆರೆ ತಾಲೂಕು ಉಪ್ಪರಿಗೆನಹಳ್ಳಿಯಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಭಾನುವಾರ ಗ್ರಾಮದಲ್ಲಿ ಕತ್ತೆಗಳ ಮೆರವಣಿಗೆ ಮಾಡಲಾಯಿತು. ಈಗ ಮಳೆ ಬರಬೇಕಾಗಿತ್ತು ಆದರೆ ವರುಣ ನಮ್ಮ ಮೇಲೆ ಕೃಪೆಯನ್ನು ತೋರಲಿಲ್ಲ ಈ ಹಿನ್ನಲೆಯಲ್ಲಿ ನಮ್ಮ ಅಜ್ಜಂದಿರ ಕಾಲದಲ್ಲಿ ಮಳೆ ಬಾರದಿದ್ದಾಗ ಕಪ್ಪೆ, ಹಾಗೂ ಕತ್ತೆಗಳ ಮದುವೆಯನ್ನು ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಈ ಹಿನ್ನಲೆಯಲ್ಲಿ ಇಂದು ಹೊಳಲ್ಕೆರೆ ತಾಲೂಕು ಉಪ್ಪರಿಗೆನಹಳ್ಳಿಯಲ್ಲಿ ಕತ್ತೇಗಳ ಮದುವೆಯನ್ನು ಮಾಡುವುದರ ಮೂಲಕ ವರುಣನ ಕೃಪೆಯನ್ನು ಕೊರಲಾಯಿತು.
ಈ ಸಂದರ್ಭದಲ್ಲಿ ಗುಡಿಗೌಡ್ರು ತಿಪ್ಪೇಸ್ವಾಮಿ ಮಹೇಶ್ ಮನು ಪ್ರದೀಪ್ ರಂಗಸ್ವಾಮಿ ಬಸವರಾಜ್ ಕೆಂಚಪ್ಪ ಶಿವಮೂರ್ತಿ ಸಂತೋಷ್ ರಂಗನಾಥ್ ರವಿಕುಮಾರ್ ಭಾಗವಹಿಸಿದ್ದರು, ಗ್ರಾಮಸ್ಥರ ನೇತೃತ್ವದಲ್ಲಿ ಗ್ರಾಮದಲ್ಲಿ ಕತ್ತೇಗಳ ಮದುವೆಯನ್ನು ಮಾಡಿ ಮೆರವಣಿಗೆ ಮಾಡಲಾಯಿತು
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: