ಚಿತ್ರದುರ್ಗ ಸಾರ್ವಜನಿಕರಿಗೆ ಸುವರ್ಣಾವಕಾಶ: ಉಚಿತ ಕಿವಿ ಪರೀಕ್ಷೆ, ಶ್ರವಣ ಯಂತ್ರ ಸಹಾಯಧನಕ್ಕೆ ನೋಂದಣಿ ಆರಂಭ.

ಚಿತ್ರದುರ್ಗ ಜು. 01

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಗರದ ನಾಗರಿಕ ಹಿತರಕ್ಷಣಾ ವೇದಿಕೆ (ರಿ.), ಚಿತ್ರದುರ್ಗ ವಕೀಲರ ಸಂಘ (ರಿ.) ಹಾಗೂ ‘ದುರ್ಗದ ನಾಗ’ ಕನ್ನಡ ದಿನಪತ್ರಿಕೆಯ ಜಂಟಿ ನೇತೃತ್ವದಲ್ಲಿ, ಪ್ರಸಿದ್ಧ ‘ಟೀಮ್ ಈಶ್ವರ್ ಮಲ್ಪೆ’ ಅವರ ಸಹಯೋಗದೊಂದಿಗೆ ಸಾರ್ವಜನಿಕರಿಗಾಗಿ ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮ ಹಾಗೂ ವಿತರಣಾ ಶಿಬಿರವನ್ನು ಆಯೋಜಿಸಲಾಗಿದೆ.

ದಿನಾಂಕ: 05-07-2026 (ಭಾನುವಾರ) ಮತ್ತು 06-07-2026 (ಸೋಮವಾರ)ಸಮಯ: ಬೆಳಗ್ಗೆ 11:00 ಗಂಟೆಯಿಂದ ಸಂಜೆ 5:00 ರವರೆಗೆ ಚಿತ್ರದುರ್ಗದ ಜಿಲ್ಲಾ ವಕೀಲರ ಸಂಘ, ಕೋರ್ಟ್ ಆವರಣದಲ್ಲಿ ಶಿಬಿರ ನಡೆಯಲಿದೆ.

ಈ ಶಿಬಿರದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ನೋಂದಣಿ ಕಡ್ಡಾಯವಾಗಿದೆ. ಆಸಕ್ತರು ಮೊಬೈಲ್ ಹಾಗೂ ವಾಟ್ಸಾಪ್ ಸಂಖ್ಯೆ 8951804399 ಗೆ ಕರೆ ಮಾಡುವ ಮೂಲಕ ತಮ್ಮ ಹೆಸರನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕಾಗಿ ವಿನಂತಿಸಲಾಗಿದೆ.

ಕಿವಿ ಕೇಳಿಸುವಿಕೆಯಲ್ಲಿ ತೊಂದರೆ ಇರುವವರು ಮತ್ತು ಶ್ರವಣ ಯಂತ್ರದ ಅಗತ್ಯವಿರುವ ಚಿತ್ರದುರ್ಗದ ಸಾರ್ವಜನಿಕರು ಈ ಉಚಿತ ಸೌಲಭ್ಯದ ಸದುಪಯೋಗ ವನ್ನು ಪಡೆದುಕೊಳ್ಳಬೇಕಾಗಿ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *