ಎಲ್ಲರು ಅಚ್ಚರಿಪಡುವಂತೆ ಕ್ಯಾಚ್ ಹಿಡಿದ ರಾಧಾ ಯಾದವ್..!

ಮಹಿಳಾ ಐಪಿಎಲ್ ಮೊದಲ ಬಾರಿಗೆ ಆರಂಭವಾಗಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಚ್ಚರಿ ಎಂಬಂತೆ ನಿನ್ನೆಯ ಮ್ಯಾಚ್ ನಲ್ಲಿ ಬಾಲ್ ಹಿಡಿದು, ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ ರಾಧಾ ಯಾದವ್.

ಮಹಿಳಾ ಐಪಿಎಲ್ ಎಂದಾಗಲೇ ಪುರುಷರ ಐಪಿಎಲ್ ನೋಡಿ ಖುಷಿಪಟ್ಟವರಿಗೆ ಕುತೂಹಲ ಸಹಜವಾಗಿಯೇ ಇತ್ತು. ಮಹಿಳಾ ಆರ್ಸಿಬಿ ಬಗ್ಗೆ ಈಗಾಗಲೇ ಟಾಕ್ ಶುರುವಾಗಿದೆ. ಆದ್ರೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇರುವ ವಿಡಿಯೋ ಅಂದ್ರೆ ಅದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಾಧಾ ಯಾದವ್ ಬಗ್ಗೆ.

ನಿನ್ನೆ ಡೆಲ್ಲಿ ವರ್ಸಸ್ ಯುಪಿ ತಂಡದ ಮ್ಯಾಚ್ ನಡೆದಿದೆ. ಈ ವೇಳೆ ಬ್ಯಾಟ್ಸ್ ಮನ್ ದೀಪ್ತಿ ಶರ್ಮಾ, ಹೊಡೆದ ಬಾಲ್ ಇನ್ನೇನು ನೆಲಕ್ಕೆ ಬೀಳಬೇಕು ಎನ್ನುವಷ್ಟರಲ್ಲಿ ರಾಧಾ ಯಾದವ್ ಕ್ಯಾಚ್ ಹಿಡಿದಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಎಲ್ಲರು ತಿರುಗಿ ನೋಡುವಂತೆ ಮಾಡಿದೆ. ಎಲ್ಲರ ಬಾಯಲ್ಲೂ ಈಗ ರಾಧಾ ಕ್ಯಾಚ್ ಹಿಡಿದಿದ್ದೆ ಚರ್ಚೆಯಾಗುತ್ತಿದೆ. ಪುರುಷರಂತೆಯೇ ಕ್ಯಾಚ್ ಹಿಡಿದು ಬಿಟ್ಟರಲ್ಲ ಎಂಬ ಶಬ್ಬಾಶ್ ಗಿರಿ ಸಿಕ್ತಾ ಇದೆ.

The post ಎಲ್ಲರು ಅಚ್ಚರಿಪಡುವಂತೆ ಕ್ಯಾಚ್ ಹಿಡಿದ ರಾಧಾ ಯಾದವ್..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/WVM9fmn
via IFTTT

Leave a Reply

Your email address will not be published. Required fields are marked *