ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಆರ್.ಎಚ್. ಶರಣಪ್ಪ ನಿಧನ.

ಸಮಗ್ರ ಸುದ್ದಿ ಚಿತ್ರದುರ್ಗ ಸೆ. 22

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಮಾಡನಾಯಕನಹಳ್ಳಿಯ ಆರ್.ಎಚ್. ಶರಣಪ್ಪ(87) ಬೆಂಗಳೂರಿನಲ್ಲಿ ಮಂಗಳವಾರ ಬೆಳಿಗ್ಗೆ 4-50ಕ್ಕೆ ನಿಧನರಾಗಿದ್ದು ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಬುಧವಾರ ಮಧ್ಯಾಹ್ನ 2-30 ಕ್ಕೆ ಮೃತರ ಅಂತ್ಯಕ್ರಿಯೆಯು ಸ್ವಗ್ರಾಮವಾದ ಮಾಡನಾಯಕನಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಆರ್.ಎಚ್. ಶರಣಪ್ಪರವರು ಸಮಾಜ ಸೇವಕರಾದ ನಾಗರಾಜ ಸಂಗಂರವರ ಮಾವನವರಾಗಿದ್ದಾರೆ.

Leave a Reply

Your email address will not be published. Required fields are marked *