ಚಿತ್ರದುರ್ಗ ಜು. 19
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಯಾವುದೇ ವ್ಯಾಪಾರ ಸಂಸ್ಥೆಯ ಯಶಸ್ಸಿನ ಹಿಂದಿರುವ ಮುಖ್ಯ ಅಂಶಗಳು ಪ್ರಾಮಾಣಿಕತೆ, ಗುಣಮಟ್ಟದ ಸೇವೆ ಮತ್ತು ಗ್ರಾಹಕರ ವಿಶ್ವಾಸ. ಈ ಮೂರೂ ಮೌಲ್ಯಗಳನ್ನು ಉಳಿಸಿಕೊಂಡು ಮಣಪ್ಪುರಂ ಜ್ಯುವೆಲ್ಲರ್ಸ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ರೋಟರಿ ಕ್ಲಬ್ ಆಫ್ ಚಿತ್ರದುರ್ಗನ ಅಧ್ಯಕ್ಷರಾದ ರೊ. ಯೋಗೀಶ್ ಸಹ್ಯಾದ್ರಿ ತಿಳಿಸಿದರು.
ಚಿತ್ರದುರ್ಗ ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲಭವನದಲ್ಲಿ ಮಣಪ್ಪುರಂ ರಿತಿ ಜ್ಯುವೆಲ್ಲರಿ ಚಿತ್ರದುರ್ಗ ಶಾಖೆಯವತಿಯಿಂದ ಏರ್ಪಡಿಸಿದ್ದ ಡೈಮೆಂಡ್ ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು ವಜ್ರವು ಕೇವಲ ಒಂದು ಆಭರಣವಲ್ಲ; ಅದು ನಂಬಿಕೆ, ಗುಣಮಟ್ಟ, ಸೌಂದರ್ಯ ಮತ್ತು ಶಾಶ್ವತ ಮೌಲ್ಯದ ಸಂಕೇತವಾಗಿದೆ. ಇಂತಹ ವಿಶಿಷ್ಟ ಪ್ರದರ್ಶನವನ್ನು ಚಿತ್ರದುರ್ಗದ ಜನತೆಗೆ ಪರಿಚಯಿಸುತ್ತಿರುವ ಮಣಪ್ಪುರಂ ರಿತಿ ಜ್ಯುವೆಲ್ಲರಿ ತಂಡ ಪರಿಚಯಿಸುತ್ತಿದೆ. ಈ ಪ್ರದರ್ಶನದ ಮೂಲಕ ಗ್ರಾಹಕರಿಗೆ ಅತ್ಯುತ್ತಮ ವಿನ್ಯಾಸಗಳು, ವಿಶೇಷ ಕೊಡುಗೆಗಳು ಹಾಗೂ ಉತ್ತಮ ಸೇವೆ ದೊರೆಯಲಿ. ಈ ಕಾರ್ಯಕ್ರಮವು ವ್ಯಾಪಾರಿಕ ಯಶಸ್ಸಿನ ಜೊತೆಗೆ ಚಿತ್ರದುರ್ಗದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೂ ತನ್ನದೇ ಆದ ಕೊಡುಗೆಯನ್ನು ನೀಡಲಿ ಎಂದು ಆಶಿಸುತ್ತೇನೆ.
ಕಾರ್ಯಕ್ರಮದಲ್ಲಿ ಮಣಪ್ಪುರಂ ರಿತಿ ಜ್ಯುವೆಲ್ಲರಿ ಚಿತ್ರದುರ್ಗ ಶಾಖೆಯ ಮ್ಯಾನೇಜರ್ ರೇವಣ್ಣಯ್ಯ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.