ಸವಿತಾ ಸಮಾಜ: ಜಾತಿ ಕಾಲಂನಲ್ಲಿ ಸವಿತಾ, ಧರ್ಮ ಕಾಲಂನಲ್ಲಿ ಹಿಂದೂ ಬರೆಯಲು ಮನವಿ.

ಚಿತ್ರದುರ್ಗ ಸೆ. 23

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್


ರಾಜ್ಯ ಸರ್ಕಾರ ನಿನ್ನೆಯಿಂದ ಪ್ರಾರಂಭ ಮಾಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯಲ್ಲಿ ನಮ್ಮ ಸಮುದಾಯದವರು ಜಾತಿ ಕಾಲಂನಲ್ಲಿ ಸವಿತಾ ಎಂದು ನಮೂದಿಸಿ, ಧರ್ಮ ಕಾಲಂನಲ್ಲಿ ಹಿಂದೂ ಎಂದು ನಮೂದಿಸುವಂತೆ ಸವಿತಾ ಸಮಾಜದ ಮುಖಂಡರಾದ ಎನ್.ಡಿ.ಕುಮಾರ್ ತಿಳಿಸಿದ್ದಾರೆ.


ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದವರು ಕ್ಷೌರಿಕ, ಡೋಲು ಬಾರಿಸುವುದು ನಾಟಿ ವೈದ್ಯರಾಗಿ ಕೆಲಸವನ್ನು ಮಾಡುತ್ತಿದ್ದಾರೆ.

ಇವರೆಲ್ಲರು ಸಹಾ ಗಣತಿಗರ ಬಂದಾಗ ಸವಿತಾ ಎಂದು ಬರೆಸುವಂತೆ ಮನವಿ ಮಾಡಿದ್ದು, ಸರ್ಕಾರ ಗಣತಿ ಮಾಡುತ್ತಿರುವ ಬಗ್ಗೆ ನಮ್ಮ ಸಮುದಾಯಕ್ಕೆ ಮಾಹಿತಿ ಇಲ್ಲ ಇದರ ಬಗ್ಗೆ ತಿಳಿಸುವಂತ ಕಾರ್ಯವನ್ನು ನಮ್ಮ ಸಮಾಜದವತಿಯಿಂದ ಮಾಡಲಾಗುತ್ತದೆ. ನಮ್ಮಲ್ಲಿ ನೆರೆ ರಾಜ್ಯ ಆಂಧ್ರದಿಂದಲೂ ಸಹಾ ಬಹಳಷ್ಟು ಜನ ವಲಸೆ ಬಂದಿದ್ದಾರೆ ಇದ್ದಲ್ಲದೆ ನಮ್ಮಲ್ಲಿಯೇ ಬಹಳಷ್ಟು ಜನ ಇದ್ದಾರೆ ಈ ಹಿನ್ನೆಲೆಯಲ್ಲಿ ಭಾಷೆಯ ಬಗ್ಗೆ ಬರೆಯುವಾಗ ಕನ್ನಡ ಅಥವಾ ತೆಲುಗ ಎಂದು ಬರೆಸುವಂತೆ ತಿಳಿಸಿದ್ದಾರೆ.


ರಾಜ್ಯ ಸರ್ಕಾರ ಕುರುಬರನ್ನು ಹಾಗೂ ಯಾದವರನ್ನು ಎಸ್.ಟಿ.ಗೆ ಸೇರಿಸಲು ಮುಂದಾಗಿದೆ ಇದೇ ರೀತಿ ನಮ್ಮ ಸಮುದಾಯವನ್ನು ಸಹಾ ರಾಜ್ಯ ಸರ್ಕಾರ ಎಸ್.ಸಿ.ಗೆ ಸೇರಿಸುವಂತೆ ಆಗ್ರಹಿಸಿದ್ದು ಇದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸ್ ಮಾಡುವಂತೆ ಸರ್ಕಾರವನ್ನು ಕುಮಾರ್ ಆಗ್ರಹಿಸಿದ್ದಾರೆ.


ಸವಿತಾ ಸಮಾಜದ ರಾಜ್ಯ ಪ್ರತಿನಿಧಿಯಾದ ತಿಪ್ಪೇಸ್ವಾಮಿ ಸಂಪಿಗೆ ಮಾತನಾಡಿ, ನಮ್ಮ ಸಮುದಾಯದಲ್ಲಿ 27 ಉಪ ಪಂಗಡಗಳಿ ಇವೆ. ಇದನ್ನು ಬರೆಸುವ ಬದಲು ಎಲ್ಲರು ಸಹಾ ಸವಿತಾ ಎಂದು ಬರೆಯಿಸುವುದರ ಮೂಲಕ ನಮ್ಮ ಒಗ್ಗಟ್ಟನ್ನು ಪ್ರದರ್ಶನ ಮಾಡಬೇಕಿದೆ. ಇದರಿಂದ ಮುಂದಿನ ದಿನಮಾನದಲ್ಲಿ ಸರ್ಕಾರದ ವಿವಿಧ ರೀತಿಯ ಸೌಲಭ್ಯ ಹಾಗೂ ಮೀಸಲಾತಿಯನ್ನು ಪಡೆಯಲು ಅನುಕೂಲವಾಗುತ್ತದೆ ಎಂದಿದ್ದಾರೆ.


ಗೋಷ್ಟಿಯಲ್ಲಿ ಕಾರ್ಯದರ್ಶಿ ಶ್ರೀನಿವಾಸ್, ಉಪಾಧ್ಯಕ್ಷರಾದ ಹನುಮಂತಪ್ಪ, ಗಾ,ನ ಲಿಂಗರಾಜು, ಹೊಳಲ್ಕೆರೆ ಅಧ್ಯಕ್ಷ ಗೀರೀಶ್, ಹಿರಿಯೂರು ಅಧ್ಯಕ್ಷ ಧನುಂಜಯ, ರಜತ್, ನಾಗರಾಜ್, ಘನಶ್ಯಾಂ, ದ್ಯಾಮಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *