ಚಿತ್ರದುರ್ಗ ಜು. 29
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಸೈಯದ್ ಆಫಾಖ್ ಆಹಮ್ಮದ್ ಆದ ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆಯನ್ನು ಡಿಸಿಸಿ ಅಧ್ಯಕ್ಷರಿಗೆ ನೀಡಿರುವುದಾಗಿ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ನಿರ್ವಹಣೆ ಮಾಡಿದ್ದು, ನನನ್ನು ವಿವಿಧ ರೀತಿಯ ನಿಗಮ ಮಂಡಳಿಗಳಿಗೆ ನೇಮಕ ಮಾಡುವಂತೆ ಹಾಗೂ ವಿಧಾನ ಪರಿಷತ್‍ಗೆ ಸ್ಪರ್ದೆ ಮಾಡಲು ಅವಕಾಶವನ್ನು ನೀಡುವಂತೆ ಪಕ್ಷದ ವರಿಷ್ಟರಲ್ಲಿ ಮನವಿ ಮಾಡಲಾಗಿತ್ತು. ಅದರೆ ಪಕ್ಷದ ವರಿಷ್ಠರು ನನ್ನ ಮನವಿಗೆ ಸ್ಫಂದನೆಯನ್ನು ನೀಡಲಿಲ್ಲ, ಇದ್ದಲ್ಲದೆ ಡಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಸಹಾ ನಾನು ಅರ್ಜಿಯನ್ನು ಸಲ್ಲಿಸಿದ್ಧೇ ಆದರೆ ನನ್ನ ಅರ್ಜಿಯನ್ನು ಜಿಲ್ಲಾ ವರಿಷ್ಠರು ಪರಿಗಣಿಸಿಲ್ಲ ಇದರಿಂದ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆಯನ್ನು ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.