ಕಾರ್ಮಿಕ ಕ್ಷೇತ್ರದ ಸೇವೆಗೆ ಚಿತ್ರದುರ್ಗದ ಸೈಯದ್ ಮೋಹಿದ್ದಿನ್‌ಗೆ ‘ಕಾರ್ಮಿಕ ಸೇವಾ ರತ್ನ’ ಪ್ರಶಸ್ತಿ.

ಚಿತ್ರದುರ್ಗ ಮೇ, 21

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕರ್ನಾಟಕ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ವತಿಯಿಂದ ಬೆಂಗಳೂರಿನಲ್ಲಿ ಇತ್ತಿಚೇಗೆ ನಡೆದ ವಿಶ್ವ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷರಾದ ಸೈಯದ್ ಮೋಹಿದ್ದಿನ್ ರವರಿಗೆ ಕಾರ್ಮಿಕ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸೈಯದ್ ಮೋಹಿದ್ದಿನ್‍ರವರು ಕಾರ್ಮಿಕ ಕ್ಷೇತ್ರದಲ್ಲಿ ಧೃಡ ಸಂಕಲ್ಪ,ನಿಷ್ಠೆ, ಮತ್ತು ಅವಿರತ ಸೇವೆ ಸಲ್ಲಿಸಿರುವು ದನ್ನು ಗುರುತಿಸಿ ಕಾರ್ಮಿಕ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಕೆ.ಪಿ.ಸಿ.ಸಿ. ಕಾರ್ಮಿಕ ವಿಭಾಗದ ರಾಜ್ಯಾದ್ಯಕ್ಷರಾದ ಕೆ.ಪುಟ್ಟಸ್ವಾಮಿ ಗೌಡ ಸೇರಿದಂತೆ ಸಚಿವ ಸಂಪುಟದ ವಿವಿಧ ಸಚಿವರು, ಸಂಸÀದರು,ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *