ಚಿತ್ರದುರ್ಗ ಜು. 02
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಬಿಎಲ್‍ಓಗಳ ಮೇಲೆ ಅನವಶ್ಯಕ ಒತ್ತಡ ಏರಿ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡದೇ ಮತಪಟ್ಟಿಗೆ ಸೂಚಿಸಿದರೆ ಅಂತಹ ಬಿಎಲ್‍ಓಗಳನ್ನು ಕಾನೂನು ರೀತ್ಯಾ ಶಿಕ್ಷೆಗೆ ಒಳಪಡಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ.ಈಗ ನಡೆಯುತ್ತಿರುವುದು ಆಗಿರುವ ತಪ್ಪನ್ನು ತಿದ್ದಲು.ಮತ್ತೆ ತಪ್ಪು ಆಗಬಾರದು.
ಬಿ ಎಲ್ ಓ ಗಳು ಬೇಗ ಕೆಲಸ ಮುಗಿಯಲೆಂದು ಅನರ್ಹ ಮತದಾರರನ್ನು ಮತಪಟ್ಟಿಗೆ..ಆರ್ಹ ಮತದಾರನ್ನು ಪಟ್ಟಿಯಿಂದ ಕೈ ಬೀಡುವ ಕೆಲಸ ಮಾಡಿದರೆ ಅದನ್ನು ನಾವು ಮುನ್ನಲೆಗೆ ತರಲಿದ್ದೇವೆ ಎಂದು ಚುನಾವಣಾ ಅಧಿಕಾರಿಗಳಾದ ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರ್‍ಗಳಿಗೆ ವಿಧಾನ ಪರಿಷತ್ ಸದಸ್ಯರು, ಬಿಜೆಪಿ ರಾಜ್ಯ ವಕ್ತಾರರಾದ ಕೆ.ಎಸ್.ನವೀನ್ ಆಗ್ರಹಿಸಿದ್ದಾರೆ.
ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಹು ನಿರೀಕ್ಷಿತವಾದ ಬಹಳ ಅವಶ್ಯಕವಾದ ಮತ ಪರಿಷ್ಕರಣೆ ಪ್ರಕ್ರಿಯೆ ಚುನಾವಣಾ ಆಯೋಗದಿಂದ ಚಾಲನೆ ಆಗಿದೆ.ಕಳೆದ 24 ವರ್ಷಗಳ (2002) ಹಿಂದೆ ಆಗಿತ್ತು.. ಈ ದೀರ್ಘಾವಾದ ಕಾಲದ ಅಂತರದಲ್ಲಿ ಪ್ರಾರಂಭವಾಗಿರುವುದಕ್ಕೆ ಚುನಾವಣಾ ಆಯೋಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.ಮತ ಪರಿಷ್ಕರಣೆ ಪ್ರಕ್ರಿಯೆ ಪ್ರತಿ 10 ವರ್ಷಕ್ಕೊಮ್ಮೆ ಆಗಬೇಕೆನ್ನುವುದು ಚುನಾವಣಾ ಆಯೋಗದ ಅಡಿಯಲ್ಲಿ ಬರುವ ವಿಷಯವಾಗಿದೆ. ಮತ ಪಟ್ಟಿಯಲ್ಲಿ ನಕಲಿ ಮತದಾರ/ಒಬ್ಬ ವ್ಯಕ್ತಿ ಹಲವು ಕಡೆ ಮತಪಟ್ಟಿ ಇರುವ/ ಮೃತಪಟ್ಟಿರುವ ಮತದಾರರನ್ನು ಪಟ್ಟಿಯಿಂದ ದೃಷ್ಟಿಯಿಂದ ಚುನಾವಣಾ ಆಯೋಗ ಮೊದಲಿನಿಂದಲೂ ಮತಪಟ್ಟಿ ಪರಿಷ್ಕರಣೆ ಮಾಡುತ್ತಾ ಬಂದಿದೆ.ಕಳೆದ 24 ವರ್ಷದಿಂದ ಈ ಪ್ರಯತ್ನ ನಡೆಯದೇ ಇರುವ ಕಾರಣ ಮತದಾರರು ಹಲವಾರು ಕಾರಣಗಳಿಂದ ಹಲವು ಕಡೆಯಲ್ಲಿ ಮತಪಟ್ಟಿಯಲ್ಲಿ ತೋರಿದ್ದಾರೆ. ಮೃತಪಟ್ಟವರು ಮತ ಪಟ್ಟಿಯಿಂದ ಹೊರಗೆ ಹೋಗಿಲ್ಲ.ನಿಜವಾದ ಭಾರತ ಪ್ರಜೆಯಲ್ಲದ ನುಸುಳುಕೊರರು ಸಹ ಈ ಮತ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ಸಿಕ್ಕಿದೆ ಎಂದರು.
ರಾಜ್ಯದಲ್ಲಿ ಚುನಾವಣಾ ಆಯೋಗದ ಪ್ರಕಾರ ಐದುವರೆ ಕೋಟಿ ಮತದಾರರಿದ್ದಾರೆ.ಈ ಮತ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ 55 ಲಕ್ಷದಿಂದ 60 ಲಕ್ಷ ಮತದಾರರು ಮತ ಪಟ್ಟಿಯಿಂದ ಹೊರಹೋಗಲಿದ್ದಾರೆ.ಯಾವೊಬ್ಬ ಮತದಾರರು ಗಾಬರಿಗೊಳ್ಳಬಾರದು. ಯಾವುದೇ ದುರದೃಷ್ಟಿಯಿಂದ ಇಟ್ಟುಕೊಂಡು ಈ ಪ್ರಕ್ರಿಯೆ ಮಾಡುತ್ತಿಲ್ಲ.ಜಿಲ್ಲೆಯಲ್ಲಿ 15-20 ಸಾವಿರ ಜನ ಉದ್ಯೋಗ ಹರಸಿ ಹೊರಗಡೆ ಹೋಗಿರುತ್ತಾರೆ.. ಅವರ ಮನೆಯಲ್ಲಿ ಇದ್ದವರು ಮನೆಯಲ್ಲಿರುವ ಎಲ್ಲಾ ಮತದಾರರ ಹೆಸರನ್ನು ತುಂಬಿಸುವ ಕೆಲಸ ಮಾಡಬೇಕು.ಚುನಾವಣಾ ಆಯೋಗವಹಿಸಿರುವ ಕೆಲಸವನ್ನು ಬಿ.ಎಲ್.ಓಗಳು ಸರಿಯಾಗಿ ಮಾಡಬೇಕು. ಈ ಪ್ರಕ್ರಿಯೆಯು ಒಂದು ತಿಂಗಳ ಕಾಲ ನಡೆಯಲಿರುತ್ತದೆ. ಈ ಸಂದರ್ಭದಲ್ಲಿ ಬಿಎಲ್‍ಓ ಗಳು ಮೂರು ಬಾರಿ ಮನೆ ಮನೆಗೆ ಭೇಟಿ ನೀಡಲಿದ್ದಾರೆ.ಮತದಾರನಿಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ಮಾಡುವ ಸಂಪೂರ್ಣ ಅಧಿಕಾರ ಬಿಎಲ್‍ಓಗಳಿಗೆ ಇದೆ. ಚುನಾವಣಾ ಆಯೋಗದ ಮೇಲೆ ಸಂಪೂರ್ಣ ನಂಬಿಕೆಯಿದೆ ಮತಪಟ್ಟಿಯಲ್ಲಿ ನೈಜ ಮತದಾರ/ ಮತಪಟ್ಟಿ ಆಗಲಿದೆ ಎಂದು ನವೀನ್ ತಿಳಿಸಿದರು.
‘ರಾಜ್ಯದಲ್ಲಿ ಕೈಗೆ ತ್ತಿಕೊಂಡಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‍ಐಆರ್) ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ’ ‘ಮತಪಟ್ಟಿಯಲ್ಲಿ ಎಲ್ಲಾ ಅರ್ಹ ಮತದಾರರನ್ನು ಉಳಿಸುವ ಜತೆಗೆ ಹೊಸದಾಗಿ ಸೇರ್ಪಡೆ ಮಾಡುವುದು ಪರಿಷ್ಕರಣೆ ಮೂಲ ಉದ್ದೇಶವಾಗಿದೆ. ಸೂಚಿಸಿರುವ ದಾಖಲೆಗಳನ್ನು ನೀಡುವ ಮೂಲಕ ಪ್ರತಿ ಅರ್ಹ ಮತದಾರನು ಮತಪಟ್ಟಿಯಲ್ಲಿ ಉಳಿಯಬಹುದಾಗಿದೆ. ಈ ಬಗ್ಗೆ ಹಬ್ಬಿಸುತ್ತಿರುವ ಅಪಪ್ರಚಾರ ಗಳಿಗೆ ಕಿವಿಗೊಡಬಾರದು’ ಎಂದು ಮನವಿ ಮಾಡಿದ ಅವರು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಪವಿತ್ರವಾದದ್ದು. ಪ್ರತಿಯೊಬ್ಬ ಅರ್ಹ ನಾಗರಿಕನೂ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡು, ಹೊಸ ಮತದಾರರ ಸೇರ್ಪಡೆ ಹಾಗೂ ತಿದ್ದುಪಡಿ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕು ‘ರಾಜ್ಯದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ವಿಶೇಷ ಪರಿಷ್ಕರಣೆ ಆರಂಭವಾಗಿದೆ. ಅರ್ಹ ಮತದಾರರನ್ನು ಗುರುತಿಸಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಲ್ಲಿ ಕಾರ್ಯಕರ್ತರ ಪಾತ್ರ ಹಿರಿದಾಗಿದೆ. ಪ್ರತಿಯೊಂದು ಮತವೂ ‘ದೇಶದ ಭವಿಷ್ಯ ವನ್ನು ನಿರ್ಧರಿಸುವುದರಿಂದ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಅತ್ಯಂತ ಗಂಭೀರವಾಗಿ ತೆಗೆದು ಕೊಳ್ಳಬೇಕು. ಅರ್ಹ ಮತದಾರರು ಮತದ ಹಕ್ಕಿನಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು ಯುವ ಮತದಾರರನ್ನು ಮತ್ತು ಕೈಬಿಟ್ಟು ಹೋಗಿರುವ ಅರ್ಹ ನಾಗರಿಕರನ್ನು ಮತದಾರರ ಪಟ್ಟಿಗೆ ಸೇರಿಸಲು ಬೂತ್ ಮಟ್ಟದ ಏಜೆಂಟರು (ಬಿಎಲ್‍ಎ) ಹಾಗೂ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕು.ಅರ್ಹ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಲು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.
ಗೋಷ್ಟಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಜಿಲ್ಲಾ ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ನಗರಾದ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದರು.