Womens Asia Cup 2026: ಇಂದು ಭಾರತ vs ಬಾಂಗ್ಲಾದೇಶ ಕದನ, ಫೈನಲ್ ಟಿಕೆಟ್‌ಗಾಗಿ ರೋಚಕ ಹಣಾಹಣಿ.

2026 ರ ಮಹಿಳಾ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಅಂತಿಮ ಘಟ್ಟವನ್ನು ತಲುಪಿದ್ದು, ಕ್ರೀಡಾಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸೆಪ್ಟೆಂಬರ್ 10 ರಂದು ದುಬೈನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಬಲಿಷ್ಠ ಭಾರತ ತಂಡವು ನಿಗರ್ ಸುಲ್ತಾನಾ ಮುಂದಾಳತ್ವದ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ನಿಖರತೆಗೆ ಮತ್ತೊಂದು ಹೆಸರಾದ ‘ಸಮಗ್ರ ಸುದ್ದಿ’ ಓದುಗರಿಗಾಗಿ ಈ ಹೈ-ವೋಲ್ಟೇಜ್ ಪಂದ್ಯದ ಸಂಪೂರ್ಣ ವಿವರ ಇಲ್ಲಿದೆ.

ಗುಂಪು ಹಂತದ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿರುವ ಟೀಂ ಇಂಡಿಯಾ, ‘ಎ’ ಗುಂಪಿನಲ್ಲಿ ತಾನಾಡಿದ ಎಲ್ಲಾ 3 ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದು ಅಗ್ರಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಮತ್ತೊಂದೆಡೆ, ‘ಬಿ’ ಗುಂಪಿನಲ್ಲಿ ಸ್ಪರ್ಧಿಸಿದ್ದ ಬಾಂಗ್ಲಾದೇಶ ತಂಡವು 2 ನೇ ಸ್ಥಾನ ಪಡೆದುಕೊಂಡು ಸೆಮಿಫೈನಲ್ ಲಗ್ಗೆ ಇಟ್ಟಿದೆ. ಈ ನಾಕೌಟ್ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯಲಿದೆ. ಇದೇ ವೇಳೆ ‘ಬಿ’ ಗುಂಪಿನ ಟಾಪರ್ ಶ್ರೀಲಂಕಾ ಹಾಗೂ ‘ಎ’ ಗುಂಪಿನ 2 ನೇ ಸ್ಥಾನಿ ಪಾಕಿಸ್ತಾನ ನಡುವೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ.

ಪಂದ್ಯದ ಪ್ರಮುಖ ವಿವರಗಳು:

  • ಪಂದ್ಯ: ಭಾರತ vs ಬಾಂಗ್ಲಾದೇಶ (1 ನೇ ಸೆಮಿಫೈನಲ್)
  • ದಿನಾಂಕ: ಸೆಪ್ಟೆಂಬರ್ 10, 2026
  • ಸ್ಥಳ: ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ದುಬೈ
  • ಸಮಯ: ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭ
  • ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ (ಟಿವಿ) ಮತ್ತು ಸೋನಿಲಿವ್ (SonyLIV) ಆ್ಯಪ್‌ನಲ್ಲಿ (ಮೊಬೈಲ್)

ಉಭಯ ತಂಡಗಳ ಆಟಗಾರ್ತಿಯರ ವಿವರ:

  • ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಜಿ ಕಮಲಿನಿ, ಅರುಂಧತಿ ರೆಡ್ಡಿ, ಪ್ರೇಮಾ ರಾವತ್, ರಾಧಾ ಯಾದವ್, ಶ್ರೀ ಚರಣಿ, ರೇಣುಕಾ ಠಾಕೂರ್, ನಂದನಿ ಶರ್ಮಾ, ಕ್ರಾಂತಿ ಗೌಡ್, ಪ್ರತೀಕಾ ರಾವಲ್.
  • ಬಾಂಗ್ಲಾದೇಶ ತಂಡ: ನಿಗರ್ ಸುಲ್ತಾನಾ (ನಾಯಕಿ), ಸೋಭಾನಾ ಮೊಸ್ತರಿ, ರಬೇಯಾ ಖಾನ್, ದಿಲಾರಾ ಅಕ್ಟರ್, ರಿತು ಮೋನಿ, ನಹಿದಾ ಅಕ್ಟರ್, ಮಾರುಫಾ ಅಕ್ಟರ್, ಫರ್ಜಾನಾ ಈಸ್ಮಿನ್, ಸುಲ್ತಾನಾ ಖಾತುನ್, ಶೋರ್ನಾ ಅಕ್ಟರ್, ಜುವೈರಿಯಾ ಫೆರ್ದೌಸ್, ಸರ್ಮಿನ್ ಸುಲ್ತಾನಾ, ಫಾಹಿಮಾ ಖಾತುನ್, ಶರ್ಮಿನ್ ಅಕ್ತೆರ್ ಸುಪ್ತಾ, ಶಂಜಿದಾ ಅಕ್ಥರ್ ಮಘ್ಲಾ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *