ಮೊದಲ ಸ್ಪರ್ಧಿ ನಟನೂ ಅಲ್ಲ, ನಟಿಯೂ ಅಲ್ಲ! ಬಿಗ್ ಬಾಸ್ ಮನೆಗೆ ಆಟವಾಡಲು ಬರ್ತಿದೆ ಮುದ್ದು ‘ಚಾರ್ಲಿ’

Bigg Boss Contestant Charlie: ಬಿಗ್ ಬಾಸ್ ಶುರುವಾಗುತ್ತೆ ಅನ್ನುವಷ್ಟರಲ್ಲಿ ಆ ನಟರು ಎಂಟ್ರಿ ಕೊಡಬಹುದೇ? ಅಥವಾ ಈ ನಟಿಗೆ ಅವಕಾಶ ಸಿಗಬಹುದೇ? ಎಂಬೆಲ್ಲಾ ಲೆಕ್ಕಾಚಾರವನ್ನು ಪ್ರೇಕ್ಷಕರು ಮಾಡಿದ್ದರು. ಆದರೆ ಈ ಎಲ್ಲಾ ಊಹೆಯನ್ನು ಮೀರಿದ ಸ್ಪರ್ಧಿಯೊಬ್ಬರು ಈ ಬಾರಿ ಬಿಗ್ ಬಾಸ್’ಗೆ ಎಂಟ್ರಿ ಕೊಡುತ್ತಿದ್ದಾರೆ.

  • ಅಕ್ಟೋಬರ್ 8ರಿಂದ ಬಿಗ್ ​ಬಾಸ್ ಸೀಸನ್ 10 ಪ್ರಾರಂಭ
  • ಈ ಬಾರಿ ಬಿಗ್ ಬಾಸ್ ಸಾಮಾನ್ಯವಾಗಿರುವುದಿಲ್ಲ, ವಿಶೇಷತೆಗಳ ಆಗರವನ್ನೇ ಹೊತ್ತು ತರಲಿದೆ
  • ಎಲ್ಲಾ ಊಹೆಯನ್ನು ಮೀರಿದ ಸ್ಪರ್ಧಿಯೊಬ್ಬರು ಈ ಬಾರಿ ಬಿಗ್ ಬಾಸ್’ಗೆ ಎಂಟ್ರಿ ಕೊಡುತ್ತಿದ್ದಾರೆ

Bigg Boss Contestant Charlie: ಅಕ್ಟೋಬರ್ 8ರಿಂದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ​ಬಾಸ್ ಸೀಸನ್ 10 ಪ್ರಾರಂಭವಾಗುತ್ತಿದೆ. ಬಿಗ್ ಬಾಸ್ ಯಾವಾಗ ಶುರುವಾಗುತ್ತೋ ಏನೋ.. ಎಂದು ಕಾದು ಕುಳಿತಿದ್ದ ಪ್ರೇಕ್ಷಕರಿಗೆ ಕಡೆಗೂ ಸಿಹಿಸುದ್ದಿ ಸಿಕ್ಕಿದೆ. ಆದ್ರೆ ಈ ಬಾರಿ ಬಿಗ್ ಬಾಸ್ ಸಾಮಾನ್ಯವಾಗಿರುವುದಿಲ್ಲ.. ವಿಶೇಷತೆಗಳ ಆಗರವನ್ನೇ ಹೊತ್ತು ತರಲಿದೆ…

ಬಿಗ್ ​ಬಾಸ್ ಶುರುವಾಗುತ್ತೆ ಅನ್ನುವಷ್ಟರಲ್ಲಿ ಆ ನಟರು ಎಂಟ್ರಿ ಕೊಡಬಹುದೇ? ಅಥವಾ ಈ ನಟಿಗೆ ಅವಕಾಶ ಸಿಗಬಹುದೇ? ಎಂಬೆಲ್ಲಾ ಲೆಕ್ಕಾಚಾರವನ್ನು ಪ್ರೇಕ್ಷಕರು ಮಾಡಿದ್ದರು. ಆದರೆ ಈ ಎಲ್ಲಾ ಊಹೆಯನ್ನು ಮೀರಿದ ಸ್ಪರ್ಧಿಯೊಬ್ಬರು ಈ ಬಾರಿ ಬಿಗ್ ಬಾಸ್’ಗೆ ಎಂಟ್ರಿ ಕೊಡುತ್ತಿದ್ದಾರೆ.

ಈ ಬಾರಿಯ ಬಿಗ್ ​ಬಾಸ್​ ಸೀಸನ್ 10 ಹಲವು ವಿಶೇಷತೆಗಳಿಂದ ಕೂಡಿರಲಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ತನ್ನ ಕಲ್ಮಶ ರಹಿತ ಅಭಿನಯ ಮತ್ತು ಮನಸ್ಸಿನಿಂದ ಎಲ್ಲರ ಮನಗೆದ್ದ 777 ಚಾರ್ಲಿ ಸಿನಿಮಾದ ‘ಚಾರ್ಲಿ’ ಈ ಬಾರಿ ಬಿಗ್’ಬಾಸ್ ಮನೆಗೆ ಎಂಟ್ರಿ ಕೊಡ್ತಿದೆ.

ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯೇ ಸ್ಪಷ್ಟ ಮಾಹತಿ ನೀಡಿದ್ದು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. “ಬೆಸ್ಟ್ ರೇಟೆಡ್ ಚಲನಚಿತ್ರ 777 ಚಾರ್ಲಿ ಸಿನಿಮಾದ ‘ಚಾರ್ಲಿ’ ಈ ಬಾರಿಯ ಬಿಗ್ ಬಾಸ್ ಸೀಸನ್ 10ರ ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿದ್ದಾರೆ. ಅಭಿನಂದನೆಗಳು ಚಾರ್ಲಿ” ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದೆ.

Source: https://zeenews.india.com/kannada/entertainment/777-charlie-movie-fame-dog-charlie-entering-to-the-bigg-boss-season-10-house-160537

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

 WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *