ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಆ. 30 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಗೋವಿಂದ ಕಾರಜೋಳ ರವರು ಈಗ ಪ್ರಾರಂಭ ಮಾಡಿರುವ ಕಾರ್ಯಾಲಯ ನೊಂದ ಜನರ ಸಮಸ್ಯೆಗಳನ್ನು ಪರಿಹಾರ ಮಾಡುವ ಕೇಂದ್ರವಾಗಲಿ ಎಂದು ಚಿತ್ರದುರ್ಗ ಜಿಲ್ಲೆಯ ವಿವಿಧ ಮಠಾಧೀಶರು ಹಾರೈಸಿದ್ದಾರೆ.

ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯಲ್ಲಿ ಶುಕ್ರವಾರ ನೂತನವಾಗಿ ಪ್ರಾರಂಭವಾದ ಸಂಸದರ ಕಾರ್ಯಾಲಯಕ್ಕೆ ಭೇಟಿ ನೀಡಿ ಸಂಸದರಿಂದ ಸನ್ಮಾನಗೊಂಡು ಮಾತನಾಡಿದ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು, ಸಂಸರು ಚಿತ್ರದುರ್ಗ ಜಿಲ್ಲೆಯ ಎಲ್ಲಾ ಮಠಾಧೀಶರನ್ನು ತಮ್ಮ ಕಛೇರಿ ಉದ್ಘಾಟನೆಗೆ ಕರೆಯಿಸಿರುವುದು ಬಸವಣ್ಣರವರ ಅನುಭವ ಮಂಟಪವನ್ನು ಹೋಲುತ್ತಿದೆ.

ಸಂಸದರು ಮಹಾತ್ಮರ ನಾಡಿನಿಂದ ಬಂದವರಾಗಿದ್ದಾರೆ, ಅವರಿಗೆ ಶರಣರ, ದಾರ್ಶನಿಕರ ಮಹತ್ವ ಗೊತ್ತು ಇದರಿಂದ ಅವರು ಕಚೇರಿ ಪ್ರಾರಂಭಕ್ಕೆ ಹರಗುರು ಚರಮೂರ್ತಿಗಳನ್ನು ಕರೆಸಿದ್ದಾರೆ. ರಾಜ್ಯದ ಚುನಾಯಿತ ಪ್ರತಿನಿಧಿಯಾಗಿ ಹಾಗೂ ಉಪ ಮುಖ್ಯಮಂತ್ರಿಗಳಾಗಿ ಅನೇಕ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅನುಭವ ಇದೆ ಇವರು ಐದು ವರ್ಷದ ಕಾರ್ಯಾವಾಧಿಯಲ್ಲಿ ಉತ್ತಮ ಕೆಲಸಗಳನ್ನು ಜಿಲ್ಲೆಗೆ ಆಗತ್ಯವಾಗಿ ಬೇಕಾದವುಗಳನ್ನು ಮಾಡಲಿ ನೀರು ಬೆಳಕು, ರಸ್ತೆ, ಇತರೆ ಕಾಮಗಾರಿಗಳನ್ನು ತುರ್ತಾಗಿ ಮಾಡಲಿ ಈಗ ಪ್ರಧಾನ ಮಂತ್ರಿಗಳು ದೇಶದ ನೆಚ್ಚಿನ ಮಗ ಎಂದು ಹೆಸರನ್ನು ಪಡೆದಿದ್ಧಾರೋ ಅದೇ ರೀತಿ ಗೋವಿಂದ ಕಾರಜೋಳ ರವರು ಸಹಾ ಕರ್ನಾಟಕ ಲೋಕಸಬಾ ಕ್ಷೇತ್ರದ ನೆಚ್ಚಿನ ಸಂಸದರು ಎಂಬ ಹೆಸರನ್ನು ಪಡೆಯಲಿ ಎಂದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಮಾತನಾಡಿ, ಕಾರ್ಯಾಲಯ ಒಂದು ರೀತಿ ವೈದ್ಯಾಲಯ ಇದ್ದಂತೆ, ಜನ ಪ್ರತಿನಿಧಿಗಳು ಜನರ ವೈದ್ಯರಿದ್ದ ಹಾಗೇ, ಕಷ್ಟಗಳನ್ನು ಹೊತ್ತು ಬರುವಂತರಿಗೆ ಪರಿಹಾರವನ್ನು ನೀಡುವ ಕೇಂದ್ರವಾಗಬೇಕಿದೆ. ನೊಂದವರ ಬಂಧುಗಳಾಗಿ, ಸಂಕಷ್ಠಗಳನ್ನು ಸಂತೈಸುವ ಮಹಾಂತರಾಗಿ ಜನರ ಭವಣೆಗಳನ್ನು ಬಗೆಹರಿಸುವ ದೇವಾಲಯವಾಗಲಿ, ಸಂಸದರು ಈ ಹಿಂದೆ ಗೆದ್ದ ಕ್ಷೇತ್ರಗಳೆಲ್ಲಾ ಅಭೀವೃದ್ದಿಯಾಗಿದೆ. ಚಿತ್ರದುರ್ಗ ಅಭೀವೃಧ್ದಿಯಾಗುತ್ತದೆ ಎಂಬ ಭರವಸೆ ಇದೆ. ಕ್ಷೇತ್ರಕ್ಕೆ ಆಗಬೇಕಾದ ಕಾರ್ಯಗಳನ್ನು ಪತ್ತೆ ಆದಕ್ಕೆ ಸಂಬಂಧಿಸಿದಂತೆ ಅಗತ್ಯವಾಗಿರುವವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದ್ದಾರೆ. ಬಯಲು ಸೀಮೆಯಾದ ಚಿತ್ರದುರ್ಗವನ್ನು ಸಂಸದರು ನೀರಾವರಿಯ್ನನಾಗಿ ಮಾಡಿ ಕ್ಷೇತ್ರವನ್ನು ಹಸಿರಾಗಿಸಲಿ, ಜನತೆ ಆರ್ಥಿಕವಾಗಿ ಚೇತರಿಕೆಯನ್ನು ಕಂಡುಕೊಳ್ಳಲಿ ಎಂದು ಶುಭ ಹಾರೈಸಿದರು.
ಮುರುಘಾಮಠದ ಉಸ್ತುವಾರಿಗಳಾದ ಬಸವಪ್ರಭು ಶ್ರೀಗಳು ಮಾತನಾಡಿ, ಕಾರಜೋಳ ರವರ ಕ್ಷೇತ್ರ ಬಾಗಲಕೋಟೆಯಾಗಿದೆ, ಮುಧೋಳಾಗಿದೆ. ಅವರು ಚಿತ್ರದುರ್ಗದ ಸಂಸದರಾಗಿದ್ದಾರೆ. ಇದು ನಿಜವಾದ ಯೋಗಾ ಯೋಗವಾಗಿದೆ. ಈ ಹಿಂದೆ ಕಾರಜೋಳರವರು ವಿವಿಧ ರೀತಿಯ ಸಚಿವರಾಗಿ ಕೆಲಸವನ್ನು ಮಾಡಿದ್ದಾರೆ ಇದಕ್ಕಿಂತ ಮುಖ್ಯವಾಗಿ ಅವರಲ್ಲಿ ಬಸವಣ್ಣರವರ ಹೃದಯವಿದೆ. ಎಲ್ಲರನ್ನು ಪ್ರೀತಿಸುವ ಎಲ್ಲರನ್ನು ಅಪ್ಪಿಕೊಳ್ಳುವ ಮಹಾನ್ ನಾಯಕರಾಗಿದ್ದಾರೆ. ಇಂತಹ ವ್ಯಕ್ತಿ ಸಂಸದರಾಗಿ ಆಯ್ಕೆಯಾಗಿರುವುದು ಸಂತೋಷವಾಗಿದೆ. ಸಮ ಸಮಾಜದ ನಿರ್ಮಾಣಮಾಡಿದ ಬಸವಣ್ಣರವರಂತೆ ಕಾರಜೋಳರವರು ಸಹಾ ನ್ಯಾಯವನ್ನು ನೀಡುವಂತ ಜನನಾಯಕರಾಗಿದ್ದಾರೆ. ಇವರಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಭದ್ರೆ ಹರಿದು ಹಸಿರಿಕರಣವಾಗಲಿ ಅವರ ಒಳ್ಳೆಯ ಕಾರ್ಯಗಳಿಗೆ ನಮ್ಮ ಬೆಂಬಲ ಇದೆ ಎಂದರು.
ಹಿರಿಯೂರಿನ ಆದಿಜಾಂಬವ ಮಠದ ಷಡಾಕ್ಷರಮುನಿ ಶ್ರೀಗಳು ಮಾತನಾಡಿ, ಸಂಸದರು ಎಲ್ಲಾ ಜನತೆಯ ನಾಡಿ ಮಿಡಿತವನ್ನು ತಿಳಿದವರಾಗಿದ್ದಾರೆ. ಇಂತಹ ಒಳ್ಳೇಯ ಸಂಸದರು ಜಿಲ್ಲೆಗೆ ಸಿಕ್ಕಿರುವುದು ಎಲ್ಲರ ಭಾಗ್ಯವಾಗಿದೆ. ಸಂಸದರಾದ ನಂತರ ಜಿಲ್ಲೆಗೆ ಬೇಕಾದ ಕಾರ್ಯ ಚಟುವಟಿಕೆಗಳನ್ನು ಮಾಡುವುದರ ಮೂಲಕ ಜಿಲ್ಲೆಯನ್ನು ಪ್ರಗತಿಯತ್ತ ಕೊಂಡ್ಯೂಯುವ ಕಾರ್ಯವನ್ನು ಮಾಡಿದ್ದಾರೆ. ಈ ಕಚೇರಿಗೆ ನೊಂದವರು ಸಂಕಷ್ಟಕ್ಕೆ ಒಳಗಾದವರು ಬರುತ್ತಾರೆ. ಅವರ ಸಮಸ್ಯೆಯನ್ನು ತಿಳಿಯುವುದು ಮಾತ್ರ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಜನ ಸಂಪರ್ಕ ಕಚೇರಿ ಕೆಲಸ ಮಾಡಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಯಾದವಾನಂದ ಗುರುಪೀಠದ ಶ್ರೀಕೃಷ್ಣಾಯಾದವನಂದ ಶ್ರೀಗಳು, ಬಂಜಾರ ಗುರುಪೀಠದ ಸೇವಾಲಾಲ್ ಶ್ರೀಗಳು, ಮೇದಾರ ಗುರುಪೀಠದ ಬಸವಕೇತೇಶ್ವರ ಶ್ರೀಗಳು,ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಅಕ್ಕನವರು, ಸಿದ್ದಯ್ಯನ ಕೋಟೆಯ ಬಸವಲಿಂಗ ಶ್ರೀಗಳು, ಚಕ್ಕೋತಿಯ ಶಿವಮೂರ್ತಿ ಶ್ರೀಗಳು, ಮಡಿವಾಳ ಗುರುಪೀಠದ ಮಡಿವಾಳ ಮಾಚಿದೇವ ಶ್ರೀಗಳು, ಮಧೋಳ್‌ನಿಂದ ರೆಡ್ಡಿ ಸಮುದಾಯದ ಶ್ರೀಗಳು, ಛಲವಾದಿ ಗುರುಪೀಠದ ಬಸವನಾಗ್ತಿದೇವ ಶ್ರೀಗಳು ಭಾಗವಹಿಸಿದ್ದರು.
ಇದೇ ರೀತಿ ಮಾಜಿ ಶಾಸಕರುಗಳಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಜಿ.ಪಂ. ಮಾಜಿ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷರುಗಳಾದ ಮುರಳಿ, ಹನುಮಂತೇಗೌಡ, ಜಿ.ಪಂ. ಮಾಜಿ ಸದಸ್ಯರಾದ ಅಜ್ಜಪ್ಪ,ನಗರಸಭಾ ಸದಸ್ಯರಾದ ವೆಂಕಟೇಶ್, ಹರೀಶ್, ಶ್ರೀನಿವಾಸ್, ಭಾಸ್ಕರ್ ಸೇರಿದಂತೆ ಬಿಜೆಪಿ ಜೆಡಿಎಸ್ ಪಕ್ಷದ ಪದಾಧಿಕಾರಿಗಳು, ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.