ಕೃಷಿ ಸಚಿವ ಚಲುವ ನಾರಾಯಣ ಸ್ವಾಮಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಆಗ್ರಹಿಸಿ

ಚಿತ್ರದುರ್ಗ ಆ, 01

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು ರೈತರು ತಮ್ಮ ಹೊಲಗಳಲ್ಲಿ ಬಿತ್ತನೆಯನ್ನು ಮಾಡಲು ಪ್ರಾರಂಭ ಮಾಡಿದ್ದಾರೆ. ಬೆಳೆಗಳಿಗೆ ಯೂರಿಯ ಗೊಬ್ಬರ ನೀಡುವುದು ಅನಿವಾರ್ಯವಾಗಿದೆ ಆದರೆ ಸರ್ಕಾರ ಯೂರಿಯ ಗೊಬ್ಬರವನ್ನು ನೀಡದೆ ಸತಾಯಿಸುತ್ತಿದೆ ಈ ಹಿನ್ನಲೆಯಲ್ಲಿ ರೈತರಿಗೆ ಸಕಾಲಕ್ಕೆ ಸರಿಯಾಗಿ ಯೊರಿಯ ಗೊಬ್ಬರವನ್ನು ನೀಡದ ಕೃಷಿ ಸಚಿವ ಚಲುವ ನಾರಾಯಣ ಸ್ವಾಮಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಆಗ್ರಹಿಸಿ ವಾಸುದೇವ ಮೇಣಬಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆಯನ್ನು ನಡೆಸಿ ಜಿಲ್ಲಾಡಳಿತದ ಮೂಲಕ ರಾಜೀಪಾಲರಿಗೆ ಮನವಿ ಮಾಡಿತು.

ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನೆಯನ್ನು ನಡೆಸಿದ ರೈತರು  ಚಿತ್ರದುರ್ಗ ಜಿಲ್ಲೆಯಲ್ಲಿ ರೈತರು ಸಾಲಸೂಲ ಮಾಡಿ ಬಂಗಾರವನ್ನು ಗಿರವಿ ಇಟ್ಟು ಬಿತ್ತನೆ ಮಾಡಿ ಮುಗಿಲು ನೋಡುವಂತ ಸಂದರ್ಭದಲ್ಲಿ ತುಂತುರ ಮಳೆ ಬಂದು ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ಯಾರಿಯಾ ಗೊಬ್ಬರ ಬೇಕಾಗಿದ್ದು, ರೈತ ಗೊಬ್ಬರದ ಅಂಗಡಿಗಳಿಗೆ ಹೋಗಿ ಯೂರಿಯಾ ಕೊಡಿಯೆಂದು ಕೇಳಿದರೆ ಒಂದು ಯೂರಿಯ ಪಾಕೇಟ್‍ಗೆ ಒಂದು ಲಿಂಕನ್ನು ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಅದಕ್ಕೆ ರೂ.750/-ಗಳನ್ನು ಕೇಳುತ್ತಾರೆ. ನಮಗೆ ಲಿಂಕ್ ಬೇಡ ಎಂದು ಹೇಳಿದರೆ ನಿಮಗೆ ಗೊಬ್ಬರ ಕೊಡುವುದಿಲ್ಲ ಅಂತಹ ವಾಪಾಸ್ಸು ಕಳುಹಿಸುತ್ತಾರೆ. ಇದಕ್ಕೆ ಕೃಷಿಮಂತ್ರಿಗಳು ಶಾಮೀಲು ಆಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ದೂರಿದರು. 

ಸೊಸೈಟಿಗಳಿಗೆ ಒಬ್ಬ ರೈತನಿಗೆ 1 ಅಥವಾ 2 ಪಾಕೇಟ್ ಯೂರಿಯಾ ಗೊಬ್ಬರ ನೀಡುತ್ತಿದ್ದು, ಸುಮಾರು 300 ಮೀಟರ್‍ಗಳಿಂದ 400 ಮೀಟರ್‍ಗಳವರೆಗೂ ರೈತರು ಸರತಿ ಸಾಲಿನಲ್ಲಿ ನಿಂತು 1 ರಿಂದ 2 ಪಾಕೇಟ್ ಯೂರಿಯ ಗೊಬ್ಬರವನ್ನು ಪಡೆಯಬೇಕಾಗಿದೆ. 2 ಪಾಕೇಟ್ ತೆಗೆದುಕೊಂಡು ಹೋಗಿ ರೈತ ಎಷ್ಟು ಎಕರೆಗೆ ಬೆಳೆಗೆ ಹಾಕಬೇಕು ಉಳಿದ ಬೆಳೆಗಳಿಗೆ ಏನು ಹಾಕಬೇಕು ಇದಕ್ಕೆ ಜಂಟಿ ಕೃಷಿ ನಿರ್ದೇಶಕರು ಉತ್ತರವನ್ನು ನೀಡಬೇಕು ಮಳೆ ಬಂದು ಹದವಾಗಿ ಸಮಯಕ್ಕೆ ಸರಿಯಾಗಿ ಬೆಳೆಗಳಿಗೆ ಯಾರಿಯಾ ಗೊಬ್ಬರವನ್ನು ಹಾಕಿದರೆ, ಬೆಳೆ ಸಮೃದ್ಧವಾಗಿ ಬೆಳೆಯುತ್ತದೆ. ರೈತರಿಗೆ ಬೇಕಾಗಿರುವ ಗೊಬ್ಬರ ಸಮಯಕ್ಕೆ ಸರಿಯಾಗಿ ಪೊರೈಕೆ ಮಾಡಲು ಆಗುತ್ತಿಲ್ಲ. ರೈತರ ಜೀವನದಲ್ಲಿ ಚಲ್ಲಾಟವಾಡಬೇಡಿ ಕೃಷಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣದಿಂದ ಒತ್ತಾಯಿಸಲಾಯಿತು. 

ಮೇಣಬಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಲಿಂಗಾವರ ಹಟ್ಟಿ,  ಮಹಿಳಾ ಘಟಕದ ಅಧ್ಯಕ್ಷೆ ಲೋಲಾಕ್ಷಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್, ಮಾರುತಿ ಸಿರಿಗೆರೆ, ಉಪಾಧ್ಯಕ್ಷ ನಿಜಲಿಂಗಪ್ಪ, ಸಂಚಾಲಕ ತಿಪ್ಪೇಸ್ವಾಮಿ, ಚಿತ್ರದುರ್ಗ ತಾ.ಅಧ್ಯಕ್ಷ ಶಿವಮೂರ್ತಿ, ಹಿರಿಯೂರು ಅಧ್ಯಕ್ಷ ರಂಗಸ್ವಾಮಿ, ಹೊಳಲ್ಕೆರೆ ಅಧ್ಯಕ್ಷ ನಾಗರಾಜ್, ಚಿತ್ರದುರ್ಗ ನಗರ ಘಟಕದ ಅಧ್ಯಕ್ಷ ಸೈಯ್ಯದ್ ಮಮಾರ್ತಾಜ್, ಉಪಾಧ್ಯಕ್ಷ ವೆಂಕಟೇಶ್, ತಾಳ್ಯ ಹೋಬಳಿ ಅಧ್ಯಕ್ಷ ರಾಜಕುಮಾರ್, ಮಂಜುನಾಥ್,ಯವ ಘಟಕದ ಉಪಾಧ್ಯಕ್ಷ  ಹನುಮಂತಪ್ಪ, ಅಂಜನಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು. 

Leave a Reply

Your email address will not be published. Required fields are marked *