“ಅತಿಯಾದ ಉಪ್ಪು ಸೇವನೆಯ ಅಪಾಯಗಳು: ಆರೋಗ್ಯಕ್ಕೆ ಉಂಟಾಗುವ ಗಂಭೀರ ಪರಿಣಾಮಗಳು”

Salt side effects : ಉಪ್ಪಿನ ಅತಿಯಾದ ಸೇವನೆಯು ನಮ್ಮ ಆರೋಗ್ಯಕ್ಕೆ ತುಂಬಾ ಅಪಾಯ ಎಂದು ಹೇಳಲಾಗುತ್ತದೆ. ಉಪ್ಪನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚುತ್ತದೆ, ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದಲ್ಲದೆ, ದೇಹದಲ್ಲಿ ಸೋಡಿಯಂ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ, ದೇಹದಲ್ಲಿ ಊತವೂ ಉಂಟಾಗುತ್ತದೆ.

  1. ಅಧಿಕ ರಕ್ತದೊತ್ತಡಅಧಿಕ ರಕ್ತದೊತ್ತಡ ದೀರ್ಘಕಾಲದ ಕಾಯಿಲೆಯಾಗಿದೆ. ಉಪ್ಪು ಸೋಡಿಯಂ ಅಂಶವನ್ನು ಹೊಂದಿರುತ್ತದೆ. ಇದು ದೇಹದಲ್ಲಿ ರಕ್ತದ ಹರಿವನ್ನು ವೇಗಗೊಳಿಸುತ್ತದೆ. ರಕ್ತದೊತ್ತಡ ಹೆಚ್ಚಾಗುತ್ತದೆ. ಕಡಿಮೆ ಉಪ್ಪು ತಿನ್ನುವುದರಿಂದ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.
  2. ಹೃದಯಾಘಾತಹೃದಯಾಘಾತ ಮತ್ತು ಪಾರ್ಶ್ವವಾಯು ಎರಡಕ್ಕೂ ಹೈ ಬಿಪಿ ಕಾರಣವಾಗಬಹುದು. ಅತಿಯಾದ ಉಪ್ಪು ಸೇವನೆಯಿಂದ ಹೃದಯಕ್ಕೆ ಹಾನಿ ಸಂಭವಿಸುತ್ತದೆ. ಉಪ್ಪನ್ನು ಕಡಿಮೆ ಸೇವಿಸಿದರೆ ಅಪಾಯವನ್ನು ಸುಲಭವಾಗಿ ತಪ್ಪಿಸಬಹುದು.
  3. ಮೂತ್ರಪಿಂಡದ ಆರೋಗ್ಯಮೂತ್ರಪಿಂಡಗಳು ದೇಹದಿಂದ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕುತ್ತವೆ. ವಿವಿಧ ಹಾರ್ಮೋನುಗಳ ಉತ್ಪಾದನೆ ಸೇರಿದಂತೆ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಆಹಾರದಲ್ಲಿ ಉಪ್ಪು ಹೆಚ್ಚಿದ್ದರೆ ಮೂತ್ರಪಿಂಡಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದು ಕಿಡ್ನಿ ಸಮಸ್ಯೆಗೆ ಕಾರಣವಾಗಬಹುದು.
  4. ಹೊಟ್ಟೆಯ ಒಳಪದರಕ್ಕೆ ಹಾನಿಹೆಚ್ಚು ಉಪ್ಪನ್ನು ಸೇವಿಸುವುದರಿಂದ ಹೊಟ್ಟೆಯ ಒಳಪದರಕ್ಕೆ ಹಾನಿಯಾಗುತ್ತದೆ. ಹೊಟ್ಟೆಯಲ್ಲಿ ಹುಣ್ಣುಗಳು ಸಂಭವಿಸಬಹುದು. ಅಲ್ಸರ್‌ ಸಮಸ್ಯೆ ಉದ್ಭವಿಸಬಹುದು. ಹಾಗಾಗಿ ಉಪ್ಪು ತಿನ್ನುವುದನ್ನು ನಿಯಂತ್ರಿಸಬೇಕು.
  5. ಉಸಿರಾಟದ ತೊಂದರೆಸೋಡಿಯಂ ಅತಿಯಾದ ಸೇವನೆಯಿಂದ ಬಾಯಿಯ ಶುಷ್ಕತೆ ಹೆಚ್ಚಾಗುತ್ತದೆ. ಇದರಿಂದ ಅತಿಯಾದ ನೀರು ಕುಡಿಯಬೇಕಾಗುತ್ತದೆ. ಅಲ್ಲದೇ ದೇಹದಲ್ಲಿ ನಿರ್ಜಲೀಕರಣ ಉಂಟಾಗಿ ಉಸಿರಾಟದ ತೊಂದರೆಗೂ ಕಾರಣವಾಗಬಹುದಾಗಿದೆ.
    7)ಮುಖದಲ್ಲಿ ಊತಕ್ಕೆ ಕಾರಣಸೋಡಿಯಂ ಹೆಚ್ಚಾದಾಗ ದೇಹದ ಜೀವಕೋಶಗಳನ್ನು ರಕ್ಷಿಸಲು ಮೂತ್ರಪಿಂಡಗಳು ನೀರನ್ನು ಉಳಿಸಿಕೊಳ್ಳುವುದರಿಂದ ಕಾಲುಗಳಲ್ಲಿ ಊತ ಉಂಟಾಗುತ್ತದೆ. ಇದು ಕೆಲವೊಮ್ಮೆ ಮುಖದಲ್ಲಿನ ಊತಕ್ಕೂ ಕಾರಣವಾಗುತ್ತದೆ.
  6. ತಲೆನೋವುದೇಹದಲ್ಲಿ ಸೋಡಿಯಂ ಅಧಿಕವಾದರೆ ತಲೆನೋವಿಗೆ ಕಾರಣವಾಗುತ್ತದೆ. ದೇಹದಲ್ಲಿ ದ್ರವಾಂಶದ ಅಸಮತೋಲನದಿಂದ ತಲೆನೋವು ಉಂಟಾಗುತ್ತದೆ.
  7. ಪದೇ ಪದೇ ಮೂತ್ರ ವಿಸರ್ಜನೆಉಪ್ಪು ಹೆಚ್ಚಾಗಿ ಸೇವಿಸಿದರೆ ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ. ಅತಿಯಾದ ಸೋಡಿಯಂನ್ನು ದೇಹದಿಂದ ಹೊರಹಾಕಲು ಕಿಡ್ನಿ ಪ್ರಯತ್ನಿಸುವ ಕಾರಣ ಮೂತ್ರವಿಸರ್ಜನೆಗೆ ಹೆಚ್ಚಾಗಿ ಹೋಗಬೇಕಾಗುತ್ತದೆ.
  8. ತೂಕ ಹೆಚ್ಚಳಉಪ್ಪಿನ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿದಾಗ ತೂಕ ಹೆಚ್ಚಾಗುವ ಸಂಭವವಿರುತ್ತದೆ. ಇದು ಬೊಜ್ಜು ಮತ್ತು ಸ್ಥೂಲಕಾಯಕ್ಕೆ ಕಾರಣವಾಗುತ್ತದೆ.

Leave a Reply

Your email address will not be published. Required fields are marked *