ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 23
ಚಿತ್ರದುರ್ಗ ನಗರದ ಮೂರು ಜನ ಬಾಲಕಿಯರು ಜೈನ ಮುನಿಗಳಾಗಿ ಫೆ. 25 ರಂದು ದೀಕ್ಷೆಯನ್ನು ಪಡೆಯಲು ಮುಂದಾಗಿದ್ದಾರೆ. ಮಾಗಿಲಾಲ್ ಸುಖಿಬಾಯಿಯವರ ಪುತ್ರಿ ಸವಿತಾ ಕುಮಾರಿ, ಹಾಗೂ ಲಲಿತಾ ಕುಮಾರ್ ಜೀ ಮತ್ತು ಸುಶೀಲಾಬೆಹನ್ ರವರು ಪುತ್ರಿಯರಾದ ಛವಿ ಕುಮಾರಿ, ಮತ್ತು ದಿವ್ಯ ಕುಮಾರಿಯವರಾಗಿದ್ದಾರೆ ಇವರು ಚಿತ್ರದುರ್ಗದಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಿ ಈಗ ಜೈನ ಮುನಿಗಳಾಗುತ್ತಿದ್ದಾರೆ. ಇದುವರೆವಿಗೂ ಚಿತ್ರದುರ್ಗದಲ್ಲಿ ಮಹಿಳೆ ಹಾಗೂ ಪುರುಷರು ಸೇರಿದಂತೆ 11 ಜನ ಜೈನ ಮುನಿಗಳಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸವಿತಾ ಕುಮಾರಿ ನನಗೆ ಬಾಹ್ಯ ಪ್ರಪಂಚದಲ್ಲಿ ಇರುವ ಸುಖಕ್ಕಿಂತ ಮುನಿಗಳಾಗಿ ಇರುವ ಸುಖ ಮುಖ್ಯ ಎಂದು ಜೈನ ಮುನಿಗಳಾಗಲು ಮುಂದಾಗಿರುವುದಾಗಿ ತಿಳಿಸಿ ನನಗೆ ಈ ಆಡಂಬರ, ಸುಖ, ಸಂತೋಷಕ್ಕಿಂತ ಭಗವಂತನ ಸೇವೆಯನ್ನು ಮಾಡುವುದು ಇಷ್ಠವಾಗಿದೆ ಈ ಹಿನ್ನಲೆಯಲ್ಲಿ ನಾನು ಜೈನ ಮುನಿಯಾಗಲು ಮುಂದಾಗಿದ್ದೇನೆ ಎಂದರು..
ಈ ಮೂರು ಜನರಿಗೆ ಫೆ. 25ರ ಬೆಳಿಗ್ಗೆ 9 ಗಂಟೆಗೆ ಆಭಯ ಶೇಖರ್ ಸುರೇಶ್ವರಜೀ ತಾರಕೇಶ್ವರ ಗುರುಗಳು ದೀಕ್ಷೆಯನ್ನು ನೀಡಲಿದ್ದಾರೆ. ಫೆ. 24 ರಂದು ಚಿತ್ರದುರ್ಗ ನಗರದಲ್ಲಿ ಜೈನ ಮುನಿಗಳಾಗುತ್ತಿರುವ ಈ ಮೂರು ಜನ ಬಾಲಕಿಯರ ಮೆರವಣಿಗೆಯನ್ನು ಮಾಡಲಾಗುತ್ತದೆ, ಇದಾದ ಮೇಲೆ ವಾಲ್ಮೀಕಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.