IPL 2026 ವೇಳಾಪಟ್ಟಿ ಪ್ರಕಟ: “ಮಾರ್ಚ್ 28ಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ vs ಎಸ್‌ಆರ್‌ಹೆಚ್ ಹೈವೋಲ್ಟೇಜ್ ಫೈಟ್!”

ಟಿ20 ವಿಶ್ವಕಪ್ ಸಂಭ್ರಮದ ಬೆನ್ನಲ್ಲೇ ಇದೀಗ ಕ್ರಿಕೆಟ್ ಪ್ರೇಮಿಗಳ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಸೀಸನ್-19ಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಮೊದಲ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಅಧಿಕೃತವಾಗಿ ಬಿಡುಗಡೆ ಮಾಡಿದೆ.

ವಿಶೇಷವೆಂದರೆ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ತನ್ನ ತವರು ಮೈದಾನದಲ್ಲೇ ಈ ಬಾರಿಯ ಟೂರ್ನಿಯನ್ನು ಉದ್ಘಾಟಿಸಲಿದೆ.

ಚಿನ್ನಸ್ವಾಮಿಗೆ ಮರಳಿದ ಐಪಿಎಲ್ ಸಂಭ್ರಮ

ಕಳೆದ ಬಾರಿ ಆರ್​​ಸಿಬಿ ಚಾಂಪಿಯನ್ ಆದ ಸಂಭ್ರಮಾಚರಣೆಯ ವೇಳೆ ನಡೆದ ಅಹಿತಕರ ಘಟನೆಗಳಿಂದಾಗಿ ಬೆಂಗಳೂರಿನಲ್ಲಿ ಪಂದ್ಯಗಳನ್ನು ನಡೆಸುವ ಬಗ್ಗೆ ಅನಿವಾರ್ಯ ಗೊಂದಲಗಳು ಉಂಟಾಗಿದ್ದವು. ಆದರೆ, ಕೆಎಸ್​ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ವಿಶೇಷ ಕಾಳಜಿ ಹಾಗೂ ಸಂಧಾನದ ಫಲವಾಗಿ, ಕರ್ನಾಟಕ ಸರ್ಕಾರ ಮತ್ತು ಆರ್​​ಸಿಬಿ ಮ್ಯಾನೇಜ್​ಮೆಂಟ್ ನಡುವಿನ ಮಾತುಕತೆ ಯಶಸ್ವಿಯಾಗಿದೆ. ಹೀಗಾಗಿ, ಮಾರ್ಚ್ 28 ರಂದು ರಾತ್ರಿ 7:30ಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಹಬ್ಬಕ್ಕೆ ಅದ್ಧೂರಿ ಚಾಲನೆ ಸಿಗಲಿದೆ.

ಮೊದಲ ಹಂತದ 20 ಪಂದ್ಯಗಳ ವಿವರ

ದೇಶದ ಮೂರು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ, ಬಿಸಿಸಿಐ ಸದ್ಯಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 12 ರವರೆಗೆ ನಡೆಯಲಿರುವ ಮೊದಲ 20 ಪಂದ್ಯಗಳ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಚುನಾವಣಾ ದಿನಾಂಕಗಳು ಸ್ಪಷ್ಟವಾದ ನಂತರ ಉಳಿದ ಪಂದ್ಯಗಳ ಪೂರ್ಣ ವೇಳಾಪಟ್ಟಿ ಪ್ರಕಟವಾಗಲಿದೆ.

ಪ್ರಮುಖ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ:

ದಿನಾಂಕಪಂದ್ಯ (ಮುಖಾಮುಖಿ)ಸ್ಥಳ
ಮಾ. 28RCB vs SRH (ಉದ್ಘಾಟನಾ ಪಂದ್ಯ)ಬೆಂಗಳೂರು
ಮಾ. 29MI vs KKRಮುಂಬೈ
ಮಾ. 30RR vs CSKಗುವಾಹಟಿ
ಮಾ. 31PBKS vs GTಪಂಜಾಬ್
ಏ. 01LSG vs DCಲಖನೌ
ಏ. 05RCB vs CSKಬೆಂಗಳೂರು
ಏ. 10RR vs RCBಗುವಾಹಟಿ
ಏ. 12MI vs RCBಮುಂಬೈ

ವಾರಾಂತ್ಯದ ಡಬಲ್ ಧಮಾಕಾ (Double Headers)

ಈ ಬಾರಿ ಏಪ್ರಿಲ್ ತಿಂಗಳ ವಾರಾಂತ್ಯಗಳಲ್ಲಿ ಅಭಿಮಾನಿಗಳಿಗೆ ದಿನಕ್ಕೆರಡು ಪಂದ್ಯಗಳ ರಸದೌತಣ ಸಿಗಲಿದೆ:

  • ಏಪ್ರಿಲ್ 4: ಮಧ್ಯಾಹ್ನ ಡೆಲ್ಲಿ vs ಮುಂಬೈ; ಸಂಜೆ ಗುಜರಾತ್ vs ರಾಜಸ್ಥಾನ.
  • ಏಪ್ರಿಲ್ 11: ಮಧ್ಯಾಹ್ನ ಪಂಜಾಬ್ vs ಹೈದರಾಬಾದ್; ಸಂಜೆ ಚೆನ್ನೈ vs ಡೆಲ್ಲಿ.
  • ಏಪ್ರಿಲ್ 12: ಮಧ್ಯಾಹ್ನ ಲಖನೌ vs ಗುಜರಾತ್; ಸಂಜೆ ಮುಂಬೈ vs ಬೆಂಗಳೂರು.

Leave a Reply

Your email address will not be published. Required fields are marked *