ಹಿರಿಯೂರು/ಯರಬಳ್ಳಿ: ಮಾ.14
ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಧೈರ್ಯ, ಪರಿಶ್ರಮ ಮತ್ತು ಆತ್ಮವಿಶ್ವಾಸ ಅತ್ಯಂತ ಮುಖ್ಯ. ಭಯವನ್ನು ಬಿಟ್ಟು ಧೈರ್ಯದಿಂದ ಪರೀಕ್ಷೆ ಎದುರಿಸಿದರೆ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ರಂಗಸ್ವಾಮಿ ಕೆ. ತಾಲ್ಲೂಕು ಶಿಕ್ಷಣ ಸಂಯೋಜನ ಅಧಕಾರಿ ಇವರು ಹೇಳಿದರು.

ಸರ್ಕಾರಿ ಪಿಎಂಶ್ರೀ ಮಾಧ್ಯಮಿಕ ಶಾಲೆ ಹಿರಿಯೂರು ತಾಲ್ಲೂಕು ಯರಬಳ್ಳಿ ಗ್ರಾಮ ಇಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಶಾರದಾ ಪೂಜೆ ಹಾಗೂ 8ನೇ ತರಗತಿ ವಿಧ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಾ ಪರೀಕ್ಷೆ ಎಂದರೆ ಭಯಪಡುವ ವಿಷಯವಲ್ಲ. ಅದು ವಿದ್ಯಾರ್ಥಿಗಳು ವರ್ಷಪೂರ್ತಿ ಕಲಿತ ಜ್ಞಾನವನ್ನು ಪರೀಕ್ಷಿಸುವ ಒಂದು ಅವಕಾಶ ಮಾತ್ರ. ಮಕ್ಕಳು ಪರೀಕ್ಷೆ ಬಂದಾಗ ಆತಂಕಪಡದೇ ಧೈರ್ಯದಿಂದ ಮತ್ತು ಆತ್ಮವಿಶ್ವಾಸದಿಂದ ಎದುರಿಸಬೇಕು. ನಿಯಮಿತವಾಗಿ ಓದುವುದು, ಸಮಯಕ್ಕೆ ಸರಿಯಾಗಿ ಪುನರವಲೋಕನ ಮಾಡುವುದು ಮತ್ತು ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು ಯಶಸ್ಸಿಗೆ ಸಹಾಯ ಮಾಡುತ್ತದೆ ಎಂದು ಮಕ್ಕಳಿಗೆ ಧೈರ್ಯ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಹಿರಿಯ ಮುಖ್ಯ ಶಿಕ್ಷಕ ನಾಗರಾಜ್ ತೇರ್ಗಡೆಗೊಂಡು ಮುಂದಿನ ವಿಧ್ಯಾಭ್ಯಾಸಕ್ಕೆ ಬೇರೆ ಶಾಲೆಗಳಿಗೆ ತೆರಳುತ್ತಿರುವ 8ನೇ ತರಗತಿ ವಿಧ್ಯಾರ್ಥಿಗಳಿಗೆ ಬೀಳ್ಕೊಡುರ್ತಾ ಶಾಲೆ ಎಂದರೆ ಕೇವಲ ಓದುವ ಸ್ಥಳ ಮಾತ್ರವಲ್ಲ; ಅದು ವ್ಯಕ್ತಿತ್ವ ರೂಪುಗೊಳ್ಳುವ ಪವಿತ್ರ ಸ್ಥಳ. ಅಲ್ಲಿ ಪಡೆದ ಜ್ಞಾನ, ಶಿಕ್ಷಕರ ಮಾರ್ಗದರ್ಶನ, ಸ್ನೇಹಿತರ ಜೊತೆಗಿನ ಅನುಭವಗಳನ್ನು ಜೀವನಪೂರ್ತಿ ಮರೆಯದೆ ನೆನಪಿಟ್ಟುಕೊಂಡು ಓದಿದ ಶಾಲೆಗೆ ಋಣಿಗಳಾಗಿರಬೇಕು ನಿಮ್ಮೆಲ್ಲರ ಮುಂದಿ ಶೈಕ್ಷಣಿಕ ಜೀವನಕ್ಕೆ ಶುಭವಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀಮತಿ ಸವಿತ,ಮಂಜುನಾಥ್, ಶಬಾನ ವಿಜಯಮ್ಮ ಸಂತೋಷ್ ಕುಮಾರ್ ದರ್ಶನ್ ಎಸ್ ಡಿ ಎಂ ಸಿ ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಸುಮಲತಾ ಹಾಗೂ ಸದಸ್ಯರು ಮಾರ್ಗದರ್ಶಿ ಶಿಕ್ಷಕರಾದ ಶ್ರೀಮತಿ ಶಶಿಕಲಾ, ಲಿಂಗರಾಜು ಮಾರುತಿ ಸಿಬಿ ಶಾರದಮ್ಮ ದೈಹಿಕ ಶಿಕ್ಷಕ ಪಿ ರಾಜಪ್ಪ ಗ್ರಾಮದ ಮುಖಂಡರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಭಾಗವಹಿಸಿ ಮಕ್ಕಳಿಗೆ ಶುಭಕೋರಿದರು.
