BJP Training Campaign 2026: ಕೇಂದ್ರ ಯೋಜನೆಗಳ ಜಾಗೃತಿ ಅಭಿಯಾನ ಆರಂಭ, ಕಾರ್ಯಕರ್ತರಿಗೆ ಕಾರಜೋಳ ಮಹತ್ವದ ಸೂಚನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 12

ಕಟ್ಟ ಕಡೆಯ ವ್ಯಕ್ತಿಗೂ ಸಹಾ ಸರ್ಕಾರದ ವಿವಿಧ ರೀತಿಯ ಸೌಲಭ್ಯ ಸಿಗಬೇಕೆನ್ನುವುದು ನಮ್ಮ ಪಕ್ಷದ ಆಶಯ ಇದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿ ಮನೆಗೂ ಬೇಟಿಯನ್ನು ನೀಡುವುದರ ಮೂಲಕ ಕೇಂದ್ರ ಸರ್ಕಾರದ ಸೌಲಭ್ಯಗಳು ಸಿಕ್ಕಿದ್ದೇಯೆ ಇಲ್ಲವೆ ಎಂಬುದನ್ನು ಪರೀಶೀಲಿಸಿ ಸಿಗದಿದ್ದರೆ ಅವುಗಳನ್ನು ಸಿಗುವಂತೆ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಸಂಸದರಾದ ಗೋವಿಂದ ಕಾರಜೋಳ ಕರೆ ನೀಡಿದರು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಚಿತ್ರದುರ್ಗ ಗ್ರಾಮಾಂತರ ಮಂಡಲ ದವತಿಯಿಂದ ಭಾನುವಾರ ನಗರದ ಮುರುಘರಾಜೇಂದ್ರ ಮಠದ ಅಲ್ಲಮಪ್ರಭು ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರವರ ಜನ್ಮದಿನದ ಪ್ರಯುಕ್ತ ಪ್ರಶಿಕ್ಷಣ ಮಹಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಆಡಳಿತವನ್ನು ನಡೆಸುತ್ತಿರುವ ನರೇಂದ್ರ ಮೋದಿ ಸರ್ಕಾರ ಇದುವರೆವಿಗೂ ಯಾವುದೇ ಹಗರಣದಲ್ಲಿ, ಭ್ರಷ್ಠಾಚಾರದಲ್ಲಾಗಲಿ ಸಿಲುಕಿಲ್ಲ, 11 ವರ್ಷಗಳ ಕಾಲ ದೇಶದ ಪ್ರಧಾನ ಮಂತ್ರಿಯಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದ ರೀತಿಯಲ್ಲಿ ಆಡಳಿತವನ್ನು ಮಾಡಿದ್ದಾರೆ. ಯಾವುದೇ ಸ್ವಜನ ಪಕ್ಷಪಾತ ಇಲ್ಲದ ರೀತಿಯಲ್ಲಿ ಅಧಿಕಾರವನ್ನು ಮಾಡಿದ್ದಾರೆ. ಇದಕ್ಕೂ ಮುನ್ನಾ ಗುಜರಾತ್ ಮುಖ್ಯಮಂತ್ರಿಯಾಗಿ ಉತ್ತಮವಾದ ಆಡಳಿತವನ್ನು ನೀಡಿದ್ದರು. ಆದರೆ ಇತರೆ ಪಕ್ಷಗಳಲ್ಲಿ ಹಗರಣಗಳ ಸರಮಾಲೆಯನ್ನು ಕೊರಳಿಗೆ ಹಾಕಿಕೊಂಡಿದ್ದಾರೆ. ನಮ್ಮ ಸರ್ಕಾರದಲ್ಲಿ ಯಾವುದೇ ಕಳಂಕ ಇಲ್ಲದಂತೆ ಅಧಿಕಾರವನ್ನು ನಡೆಸಲಾಗುತ್ತಿದೆ ಎಂದರು.

ನಮ್ಮ ಸರ್ಕಾರದ ಆಡಳಿತ ಹಾಗೂ ಸಾಧನೆ ಮತ್ತು ವಿವಿಧ ರೀತಿಯ ಯೋಜನೆಗಳನ್ನು ಮತದಾರರಿಗೆ ತಿಳಿಸುವಂತ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಮಾಡುವುದರ ಮೂಲಕ ನಮ್ಮ ಪಕ್ಷದ ಘನತೆಯನ್ನು ಹೆಚ್ಚಿಸಬೇಕಿದೆ. ಇಲ್ಲಿ ತಿಳಿಸುವಂತ ವಿಷಯಗಳನ್ನು ತಿಳಿದುಕೊಂಡು ನಿಮ್ಮ ಬೂತ್‍ಗಳಲ್ಲಿ ಇತರರಿಗೆ ತಿಳಿಸುವಂತ ಕಾರ್ಯವನ್ನು ಇಲ್ಲಿಂದ ಹೋದ ಮೇಲೆ ಮಾಡಬೇಕಿದೆ, ಸರ್ಕಾರದ ನೀತಿಗಳು ಪ್ರತಿಯೊಬ್ಬರಿಗೆ ತಿಳಿಯಬೇಕಿದೆ. ನಮ್ಮ ಪಕ್ಷದ ಕಾರ್ಯಕರ್ತರು ನಮ್ಮ ಸರ್ಕಾರದ ಸಾಧನೆಯನ್ನು ಮತದಾರರಿಗೆ ತಿಳಿಸದೇ ಇದ್ದದುರಿಂದ ಕಲೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಹಾಗೂ ತಿಪ್ಪಾರೆಡ್ಡಿಯವರು ಸೋಲನ್ನು ಅನುಭವಿಸಬೇಕಾಯಿತು. ಈ ರೀತಿಯ ವಾತಾವರಣ ಮುಂದಿನ ಚುನಾವಣೆಯಲ್ಲಿ ಮುಂದುವರೆಯಬಾರದು ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವುದರ ಮೂಲಕ ಮುಂದಿನ ಚುನಾವಣೆಗೆ ಸಜ್ಜಾಗಬೇಕಿದೆ ಎಂದು ಕಾರಜೋಳ ತಿಳಿಸಿದರು.

ಕೇಂದ್ರ ಸರ್ಕಾರ ಜನತೆಗಾಗಿ ವಿವಿಧ ರೀತಿಯ ಯೋಜನೆಗಳನ್ನು ಜಾರಿ ಮಾಡಿದೆ ಇದರ ಪ್ರಯೋಜನವನ್ನು ದೇಶದ ಕೋಟ್ಯಾಂತರ ಜನತೆ ಪಡೆಯುತ್ತಿದ್ದಾರೆ. ಇದರಲ್ಲಿ ವಿವಿಧ ಯೋಜನೆಗಳು ಬಹು ಉಪಯೋಗಿ ಯಾಗಿದೆ. ಮಹಿಳೆಯರು ಹೊಗೆಯಿಂದ ನರಳಬಾರದೆಂದು ಗ್ಯಾಸ್ ನೀಡುವುದರ ಮೂಲಕ ಹೊಗೆಯಿಂದ ಮುಕ್ತಗೊಳಿಸಲಾಗಿದೆ, ಜನತೆಗೆ ವಿಮಾ ಯೋಜನೆಯನ್ನು ಜಾರಿ ಮಾಡಿ ಆವರ ಆರೋಗ್ಯದ ಬಗ್ಗೆ ಕಾಳಜಿ ಯನ್ನು ವಹಿಸಿದೆ, ಇದ್ದಲ್ಲದೆ ರೈತರಿಗೆ ಆರ್ಥಿಕವಾಗಿ ನೆರವನ್ನು ನೀಡುವುದರ ಮೂಲಕ ಅವರಿಗೂ ಸಹಾ ನೆರವಾಗಿದೆ. 60 ವರ್ಷವಾದವರಿಗೆ ಪಿಂಚಿಣಿಯನ್ನು ಸಹಾ ನೀಡಲಾಗುತ್ತದೆ. ಮುದ್ರಾ ಯೋಜನೆಯಡಿ ಲಕ್ಷಾಂತರ ಜನರಿಗೆ ಅರ್ಥಿಕವಾಗಿ ಯಾವುದೇ ಗ್ಯಾರೆಂಟಿ ಇಲ್ಲದೆ ಸಾಲವನ್ನು ನೀಡಲಾಗಿದೆ. ಈ ಎಲ್ಲಾ ಯೋಜನೆಗಳ ಬಗ್ಗೆ ಬೂತ್ ಮಟ್ಟದಲ್ಲಿ ಮತದಾರರಿಗೆ ತಿಳಿಸುವಂತ ಕಾರ್ಯವನ್ನು ಮುಂದಿನ ದಿನದಲ್ಲಿ ಮಾಡುವುದರ ಮೂಲಕ ಮುಂಬರುವ ಚುನಾವಣೆಗಳಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸುವಂತ ಮಾಡುವ ಹೊಣೆಗಾರಿಗೆ ಕಾರ್ಯಕರ್ತರಾದ ನಿಮ್ಮ ಮೇಲಿದೆ ಎಂದು ಸಂಸದರಾದ ಗೋವಿಂದ ಕಾರಜೋಳ ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿ ಮಾತನಾಡಿ, ಬಿಜೆಪಿ ಬೇರೆ ಪಕ್ಷದಂತೆ ಅಲ್ಲ, ಇದರಲ್ಲಿ ನಮ್ಮದೇ ಆದ ಸಿದ್ದಾಂತ ತತ್ವಗಳನ್ನು ಆಳವಡಿಕೆ ಮಾಡಲಾಗಿದೆ. ಪಕ್ಷಕ್ಕೆ ಅಧಿಕಾರ ಕ್ಕಿಂತ ದೇಶ ಮೊದಲು ಎಂಬ ಸಿದ್ದಾಂತವನ್ನು ಹೊಂದಿದ ಪಕ್ಷವಾಗಿದೆ. 1980 ರಿಂದ ಜನ ಸಂಘವಾಗಿದ್ದ ಪಕ್ಷ ಬಿಜೆಪಿಯಾಗಿ ಮಾರ್ಪಾಡಾಗಿ ವಾಜಿಪೇಯಿ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಿ ಮುಂಚೆ 2 ಸ್ಥಾನವನ್ನುಗಳಿಸಿದ್ದ ಪಕ್ಷ ಈಗ ಮೂರು ಭಾರಿ ಅಧಿಕಾರವನ್ನು ನಡೆಸಲಾಗುತ್ತಿದೆ. ಈ ಶಿಬಿರದಲ್ಲಿ 7 ವಿಷಯಗಳ ಬಗ್ಗೆ ತಿಳಿಸಲಾಗುತ್ತದೆ ಇದನ್ನು ನಿಮ್ಮ ಬೂತ್‍ಗಳಲ್ಲಿ ತಿಳಿಸುವಂತ ಕಾರ್ಯವನ್ನು ಮಾಡುವುದರ ಮೂಲಕ ಪಕ್ಷ ಬೆಳವಣಿಗೆ ಕಾರಣರಾಗಬೇಕಿದೆ ಎಂದ ಅವರು ದೇಶದ 80 ಕೋಟಿ ಜನರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಅಕ್ಕಿಯನ್ನು ಹಲವಾರು ವರ್ಷಗಳಿಂದ ನೀಡುತ್ತಿದೆ. ಕೇಂದ್ರ ಸರ್ಕಾರದ ನಮ್ಮ ಪಕ್ಷದ ಕಾರ್ಯಕರ್ತರು ಎದೆಗುಂದದೆ ಬೇರೆಯವರಿಗೆ ತಿಳಿಸುವಂತ ಕಾರ್ಯವನ್ನು ಮಾಡುವಂತೆ ಕರೆ ನೀಡಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್, ಬಿಜೆಪಿಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಶಿಕ್ಷಣ ಮಹಾ ಆಭಿಯಾನ ಮಹತ್ವದ್ಧಾಗಿದೆ, ಇದರಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ದೇಶದ ಪ್ರಧಾನ ಮಂತ್ರಿಯವರು ಸಹಾ ಭಾಗವಹಿಸಲಿದ್ದಾರೆ. ಇದರಲ್ಲಿ ಭಾಗವಹಿಸುವುದರ ಮೂಲಕ ಪಕ್ಷದ ಆಗುಹೋಗುಗಳ ಬಗ್ಗೆ ತಿಳಿಯಲು ಸಹಾಯವಾಗುತ್ತದೆ. ಬಿಜೆಪಿ ಸಾಮಾನ್ಯ ಕಾರ್ಯಕರ್ತನನ್ನು ವ್ಯಕ್ತಿಯನ್ನಾಗಿ ಮಾಡುತ್ತದೆ. ಇದರಲ್ಲಿ 7 ವಿಷಯದ ಬಗ್ಗೆ ತಿಳಿಸಲಾ ಗುತ್ತದೆ. ಇದರ ಬಗ್ಗೆ ತಿಳಿದುಕೊಂಡು ಬೇರೆಯವರಿಗೆ ತಿಳಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಪ್ರಶಿಕ್ಷಣ ಅಭಿಯಾನದ ಜಿಲ್ಲಾ ಸಂಯೋಜಕರಾದ ಜಿ.ಎಚ್ ಮೋಹನ್‍ಕುಮಾರ್, ಮಾಜಿ ಅಧ್ಯಕ್ಷ ಟಿ.ಜಿ.ನರೇಂಧ್ರನಾಥ್, ಜಿಲ್ಲಾ ಉಪಾಧ್ಯಕ್ಷ ಡಾ.ಸಿದ್ಧಾರ್ಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗೀರೀಶ್, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರೇಶ್ ಸಿದ್ದಾಪುರ, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಸಹಾ ವಕ್ತಾರ ನವೀನ್ ಚಾಲುಕ್ಯ, ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮಾಜಿ ಗ್ರಾಮಾಂತರ ಅಧ್ಯಕ್ಷ ನಂದಿನಾಗರಾಜ್, ಗ್ರಾಮಾಂತರ ಮಹಿಳಾ ಮೋರ್ಚಾದ ಅಧ್ಯಕ್ಷ ಕವಿತಾ, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಸೇರಿದಂತೆ ನಗರ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಪ್ರಮುಖರು, ಶಕ್ತಿಕೇಂದ್ರ ಪ್ರಮುಖರು, ಬಿಎಲ್‍ಎ 2 ಬೂತ್ ಅಧ್ಯಕ್ಷರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *