ಚಿತ್ರದುರ್ಗದಲ್ಲಿ 77 ಪಾಳೆಗಾರರ ನೆನಪಿನೋತ್ಸವ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ.

ಚಿತ್ರದುರ್ಗ ಮೇ. 22

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಾವು ಶಿಕ್ಷಣದಿಂದ ವಂಚಿತರಾಗಿದ್ದೆವು. ಸ್ವಾತಂತ್ರ್ಯ ನಂತರ ಸಂವಿಧಾನದಿಂದ ಅವಕಾಶಗಳು ದೊರೆತಿವೆ. ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಬೇಕು. ಸ್ವಾಮೀಜಿ ನೇತೃತ್ವದಲ್ಲಿ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಮುಂದುವರೆಯುತ್ತಾ ದಾಪುಗಾಲಿಡಬೇಕಿದೆ ಎಂದು ಸಚಿವರಾದ ಸತೀಶ್ ಜಾರಕಿಹೊಳಿ ತಿಳಿಸಿದರು.

ಚಿತ್ರದುರ್ಗ ನಗರದ ವಾಲ್ಮೀಕಿ ಭವನದಲ್ಲಿ ಶುಕ್ರವಾರ ನಡೆದ 16ನೇ ವರ್ಷದ 77 ಪಾಳೆಗಾರರ ನೆನಪಿನೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಭೂಮಿ ಇರುವವರೆಗೂ ಇತಿಹಾಸ ಉಳಿಯಲು ಪೂರ್ವಜರ ಹೋರಾಟ ಅವಿಸ್ಮರಣೀಯ. ಮೀಸಲಾತಿಗಾಗಿ 40 ವರ್ಷದ ಹೋರಾಟ ನಮ್ಮದು. ಇಡ್ಲ್ಯುಎಸ್ ಅವರಿಗೆ ಸಿಕ್ಕಿತು. ನಮಗ್ಯಾಕೆ ಸಿಕ್ಕಿಲ್ಲ. ಅವರಿಗೆ ಯಾವ ಆಯೋಗದ ವರದಿ ಕೇಳಿಲ್ಲ. ಆದರೆ ನಮಗೆ ವರದಿ ಬೇಕು ಎನ್ನಲಾಗುತ್ತಿದೆ. ಕೇಂದ್ರದ 9ನೇ ಶೆಡ್ಯೂಲ್‍ಗೆ ಸೇರಿಸಬೇಕಿದೆ. ನ್ಯಾಯಾಲಯಕ್ಕೆ ಹೋಗುತ್ತೇವೆ. ಎಸ್ಸಿ, ಎಸ್ಟಿಗೆ ಕೊಟ್ಟ ಬಳಿಕ ಉಳಿದವರಿಗೆ ನೀಡಲಿ. ಶೇ. 7ರ ಮೀಸಲಾತಿ ವಿವಿಧೆಡೆ ಇದೆ. ಅದರಂತೆ ಜಾರಿಯಾಗಲಿ. ಕೇಂದ್ರ ಸರ್ಕಾರವಾದರೂ ನ್ಯಾಯ ಒದಗಿಸಲಿ. ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿಲ್ಲ. ಜೊತೆಯಾಗಿ ಹೋರಾಟ ಮಾಡೋಣ. ಒಗ್ಗಟ್ಟಿನ ಮೂಲಕ ಸೌಲಭ್ಯ ಪಡೆಯಲು ಮುಂದಾಗೋಣ. ಎಲ್ಲ ಸರ್ಕಾರಗಳ ಅವಧಿಯಲ್ಲೂ ಸಮುದಾಯದ ಅಭಿವೃದ್ಧಿಗೆ ಸಹಕರಿಸಿವೆ. ಸಮಾಜದ ಸಚಿವರು ಆ ನಿಟ್ಟಿನಲ್ಲಿ ಪ್ರಯತ್ನಿಸಿದ್ದಾರೆ. ಶೋಷಣೆ ವಿರುದ್ಧ ಹೋರಾಟಕ್ಕೆ ಕೈ ಜೋಡಿಸುವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ಪ್ರತಿ ಜಿಲ್ಲೆಯಲ್ಲೂ ಪ್ರತಿಭಾ ಪುರಸ್ಕಾರ ನಡೆಯಬೇಕು. ನಾವು ಶಿಕ್ಷಣದಿಂದ ವಂಚಿತರಾಗಿದ್ದೆವು. ಸ್ವಾತಂತ್ರ್ಯ ನಂತರ ಸಂವಿಧಾನದಿಂದ ಅವಕಾಶಗಳು ದೊರೆತಿವೆ. ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಬೇಕು. ಸ್ವಾಮೀಜಿ ನೇತೃತ್ವದಲ್ಲಿ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಮುಂದುವರೆಯುತ್ತಾ ದಾಪುಗಾಲಿಡಬೇಕಿದೆ. ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಾಸಕ ಟಿ. ರಘುಮೂರ್ತಿ ಮಾತನಾಡಿ ಸಾಧನೆಗೆ ಪರಿಶ್ರಮ ಬಹಳ ಮುಖ್ಯ. ಸಮಾಜದ ಕುರಿತು ಕಾಳಜಿ ಇರಬೇಕು. ಚಿತ್ರದುರ್ಗ ಇತಿಹಾಸ ಪ್ರಸಿದ್ಧ ಜಿಲ್ಲೆ. ಅದನ್ನು ಹೊರ ತೆಗೆಯುವ ಪ್ರಯತ್ನ ಶಿವಣ್ಣ ಮಾಡಿದ್ದಾರೆ. ಕೋಟೆ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕಿದೆ. ಸ್ವಾಮೀಜಿ ಪಾದಯಾತ್ರೆ ಮಾಡಿ ಸರ್ಕಾರದ ಗಮನ ಸೆಳೆದು ಸಮಾಜಕ್ಕೆ ನ್ಯಾಯ ಕೊಡಿಸಲು ಮುಂದಾದರು. ಆದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯಿಂದಾಗಿ ಶೇ. 4ರ ಮೀಸಲಾತಿ ಸೌಲಭ್ಯ ಸಿಗುತ್ತಿಲ್ಲ. ಹೀಗಾಗಿ ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ತಿಳಿಸಿದರು.

ಸೊಂಡೆಕೆರೆ ಶಿವಣ್ಣ ಪ್ರಸ್ತಾವಿಕವಾಗಿ ಮಾತನಾಡಿ ಚಿತ್ರದುರ್ಗ ಪಾಳೆಗಾರರ ಇತಿಹಾಸ ಅಳಿಸಿ ಹಾಕಿದ್ದಾರೆ. ಏಳು ಸುತ್ತಿನ ಪೈಕಿ ಎರಡು ಸುತ್ತನ್ನು ನಶಿಸಿ ಹಾಕಿದ್ದಾರೆ. ಪಾಳೆಗಾರರ ಚರಿತ್ರೆ ಸಾರುವ ಕೆಲಸ ಮಾಡುತ್ತಿ ದ್ದಾರೆ. ಎರಡು ಸುತ್ತು ಬತೇರಿಗಳಲ್ಲಿ ನಾಲ್ಕು ಬತೇರಿಗಳಿದ್ದು, ಅವುಗಳ ರಕ್ಷಣೆಗೆ ಆದ್ಯತೆ ನೀಡಬೇಕಿದೆ ಎಂದ ಅವರು ಈ ಕಾರ್ಯಕ್ರಮವನ್ನು ಕಳೆದ 15 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ, ನಮ್ಮ ಸಮುದಾಯದ ಮಕ್ಕಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಕಾರ್ಯಕ್ರಮ ನಡೆಸಲಾಗುತ್ತಿದೆ. 2025-2026 ನೇ ಸಾಲಿನಲ್ಲಿ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.85 ಕ್ಕಿಂತ ಹೆಚ್ಚಿನ ಅಂಕ ಪಡೆದ ನಾಯಕ ಸಮುದಾಯದ ವಿದ್ಯಾರ್ಥಿ / ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ಅಂಕಪಡೆದ ಒಬ್ಬ ವಿದ್ಯಾರ್ಥಿಗೆ ಲ್ಯಾಪ್ಟಾಪ್, ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ತಲಾ ಒಬ್ಬೊಬ್ಬ ವಿದ್ಯಾರ್ಥಿಗೆ 10.000/- ಪ್ರೋತ್ಸಾಹ ಧನ ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಒಬ್ಬ ವಿದ್ಯಾರ್ಥಿಗೆ ರೂ11,000/-ಪ್ರೋತ್ಸಾಹ ಧನವನ್ನು ನೀಡಲಾಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ವಹಿಸಿದ್ದರು. ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ, ರಾಯಚೂರು ವಿವಿ ಕುಲಪತಿ ಹನುಮಂತಪ್ಪ, ಡಾ.ಗುಡದೇಶ್ವರಪ್ಪ, ಮದಕರಿ ಸಂದೀಪ್ ದ್ರಾಕ್ಷರಸ್ ಮಂಡಳಿ ಅಧ್ಯಕ್ಷ ಯೋಗೇಶ್ ಬಾಬು, ಡಿಸಿಸಿ ಅಧ್ಯಕ್ಷ ಎಂ.ಕೆ. ತಾಜ್‍ಪೀರ್ ಬೂತಯ್ಯ, ಪಾಪಯ್ಯ, ಪಾಲಾಕ್ಷಪ್ಪ ಆಶೋಕ ಬೆಳಗಟ್ಟ ಬೋರಯ್ಯ ಸೇರಿದಂತೆ ಸಮಾಜದವರ ಭಾಗವಹಿಸಿದ್ದರು.

Leave a Reply

Your email address will not be published. Required fields are marked *