ಚಿತ್ರದುರ್ಗ ಮೇ. 22
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಜಿಲ್ಲೆಯಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷ ಚಿತ್ರದುರ್ಗ ಜಿಲ್ಲಾ ಘಟಕದ ವಿವಿಧ ಮೋರ್ಚಾ, ಪ್ರಕೋಷ್ಠಗಳಿಗೆ ಅಧ್ಯಕ್ಷರು, ಸಂಚಾಲಕರನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.
ಹೊಸದಾಗಿ ನೇಮಕವಾಗಿ ಪದಾಧಿಕಾರಿಗಳ ವಿವರ ಈ ರೀತಿ ಇದೆ.
ಯುವ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಅರುಣ್‍ಕುಮಾರ್ ಬಿ.ಎನ್(ಭರಮಸಾಗರ).
ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಬಾಲರಾಜ್ ಯಾದವ್ (ನಾಯಕನಹಟ್ಟಿ),
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ರೂಪ ವಿನಯ್‍ಕುಮಾರ್ (ಮೊಳಕಾ ಲ್ಮೂರು),
ರೈತ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಜಗದೀಶ್ ಗೂಳಿಹಟ್ಟಿ (ಹೊಸದುರ್ಗ),
ಸಾಮಾಜಿಕ ಜಾಲಾತಾಣ ಜಿಲ್ಲಾ ಸಂಚಾಲಕ ಹನುಮಂತಪ್ಪ ಉಪ್ಪಾರ(ಮೊಳಕಾಲ್ಮೂರು)
ಪ್ರಕೋಷ್ಠ ಜಿಲ್ಲಾ ಸಂಯೋಜಕ ರಾಗಿ ಸಂತೋಷ್ ಗುಡಿಮಠ(ಚಿತ್ರದುರ್ಗ)
ಜಿಲ್ಲಾ ಸಹ ಸಂಯೋಜಕರಾಗಿ ನಂದಿ ನಾಗರಾಜ್(ಚಿತ್ರದುರ್ಗ) ನೇಮಕವಾಗಿದ್ದಾರೆ.