ಸಸಿ ವಿತರಣೆ, ರಕ್ತದಾನ, ಪೌರಕಾರ್ಮಿಕರ ಸನ್ಮಾನ: ಶಾಸಕ ಕೆ.ಸಿ. ವೀರೇಂದ್ರ ಜನ್ಮದಿನ ವಿಶೇಷ.

ಕೆ.ಸಿ.ವಿ ಸಂರಕ್ಷಣಾ ವೇದಿಕೆ ವತಿಯಿಂದ ವಿನೋತನ ಹುಟ್ಟು ಹಬ್ಬ ಆಚರಣೆ.

ನಗರದ ವಿವಿಧ ಭಾಗಗಳಲ್ಲಿ ಅಭಿಮಾನಿಗಳಿಂದ ಹುಟ್ಟು ಹಬ್ಬ ಆಚರಣೆ

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ, ಜೂನ್30: ಬಣ್ಣ ಬಣ್ಣದ ಕೇಕ್ ಗಳನ್ನ ಕತ್ತರಿಸಿ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಬದಲು ಸಮಾಜಮುಖಿ ಕಾರ್ಯಗಳೊಂದಿಗೆ ಜನ್ಮದಿನ ಆಚರಿಸಿಕೊಳ್ಳುವುದು ಅರ್ಥಪೂರ್ಣ ಜನ್ಮದಿನವಾಗುತ್ತದೆ. ಪ್ರತಿಯೊಬ್ಬರು ಒಂದೊAದು ಸಸಿ ನೆಟ್ಟು ದೊಡ್ಡ ಮರವನ್ನಾಗಿ ಬೆಳೆಸಿದರೆ ಸಕಲ ಜೀವರಾಶಿಗಳಿಗೆ ಉಸಿರಾಡಲು ಶುದ್ದವಾದ ಗಾಳಿ ಸಿಗಲಿದೆ ಹಾಗೂ ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಕೊಡುಗೆಯಾಗಿ ನೀಡಬಹುದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ಹೇಳಿದರು
.
ನಗರದಲ್ಲಿನ ಚಳ್ಳಕೆರೆ ಗೇಟ್, ಚಳ್ಳಕೆರೆ ಟೋಲ್‍ ಗೇಟ್ ಬಳಿ ಮಂಗಳವಾರ ಕೆ.ಸಿ.ವಿ. ಪ್ರಕೃತಿ ಸಂರಕ್ಷಣಾ ವೇದಿಕೆ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಆಗಮಿಸಿದಂತ ಎಲ್ಲಾ ಮುಖಂಡರುಗಳಿಗೆ ಸಸಿಗಳನ್ನು ವಿತರಿಸಿ ನಂತರ ನಗರಸಭೆ ಪೌರ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು, ಪ್ರತಿನಿತ್ಯವೂ ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ನಗರ ಸ್ವಚ್ಚತೆಯಲ್ಲಿ ತೊಡಗುವ ಪೌರ ಕಾರ್ಮಿಕರನ್ನು ಗೌರವದಿಂದ ಕಾಣಬೇಕು. ಒಂದು ದಿನ ಅವರುಗಳು ಕೆಲಸ ಸ್ಥಗಿತಗೊಳಿಸಿದರೆ ಸಾರ್ವಜನಿಕರು ಪರದಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರ ಕಾಯಕ ಅತ್ಯಂತ ಮಹತ್ವದ್ದು ಎಂದು ಪ್ರಶಂಶಿಸಿದರು.

ರಕ್ತದಾನ ಮಹಾದಾನ ಎನ್ನುವ ಮಾತಿನಂತೆ ಮನುಷ್ಯನ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವುದು ರಕ್ತ ಅಂತ ಅರ್ಥವನ್ನು ದಾನ ಮಾಡುವುದು ಭಗವಂತನಿಗೆ ಪ್ರಿಯವಾದದ್ದು ರಕ್ತದಾನ ಮಾಡಿ ಜೀವನ ಉಳಿಸಿ, ರಕ್ತದಾನ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳು ಸಿಗಲಿವೆ. ಯುವ ಸಮುದಾಯ ರಕ್ತದಾನ ಮಾಡುವುದರ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಬೇಕು, ಅಪಘಾತಗಳು ಆದಂತ ಸಂದರ್ಭದಲ್ಲಿ ಅನೇಕರ ಜನರ ಸಾವು ನೋವುಗಳು ನಡೆಯುತ್ತವೆ, ಅವಶ್ಯಕತೆ ಆ ಒಂದು ಸಂದರ್ಭದಲ್ಲಿ ರಕ್ತ ಅವಶ್ಯಕವಾಗಿರುತ್ತದೆ ಅಂತಹ ಸಂದರ್ಭಗಳಲ್ಲಿ ರಕ್ತದಾನ ಮಾಡುವುದರ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕಾಗಬಹುದು ಎಂದು ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೇಳಿದರು.

ದಿಲೀಪ್ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದರು ಸುಮಾರು 20ಕ್ಕೂ ಹೆಚ್ಚು ಸ್ವಯಂ ಕಾರ್ಯಕರ್ತರು ಮತದಾನ ಮಾಡಿದರು.

ಕೆ.ಸಿ.ವಿ ಸಂರಕ್ಷಣಾ ವೇದಿಕೆ ವತಿಯಿಂದ ಚಿತ್ರದುರ್ಗದಲ್ಲಿ ಹದಿನೈದು ಸಾವಿರ ಸಸಿಗಳನ್ನು ನೆಟ್ಟಿರುವ ಟಾರ್ಗೆಟ್ ಟೆನ್ ಥೌಸೆಂಡ್‍ನ ಸಿದ್ದರಾಜು ಮತ್ತು ತಂಡದವರನ್ನು ಸನ್ಮಾನಿಸಲಾಯಿತು. ಹುಟ್ಟು ಹಬ್ಬದ ಅಂಗವಾಗಿ ಸರ್ಕಾರಿ ಶಾಲೆಯ ಮಕ್ಕಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ರವರು ನೋಟ್‍ ಬುಕ್‍ಗಳನ್ನು ವಿತರಿಸಿದರು.

ನಗರ ಸಭೆ ಮುಂಭಾಗದಲ್ಲಿ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಹಾಗೂ ಅಂಗವಿಕಲರಿಗೆ ಆರು ಬೈಕ್, ಮಿನಿ ಹಿಟಾಚಿಯನ್ನ ವಿತರಿಸಲಾಯಿತು. ಕಾರ್ಮಿಕರೊಡನೆ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ಊಟ ಸೇವಿಸಿದರು, ಕಾಂಗ್ರೆಸ್ ಕಚೇರಿ, ಗಾಂಧಿ ಸರ್ಕಲ್, ಎಂ ಕೆ ಹಟ್ಟಿ, ದೀಕ್ಷಾ ಅಂದರ ಪುನರ್ಚೇತನ ಸಂಸ್ಥೆ ಮಾಳಪ್ಪನಟ್ಟಿ, ತಮಟಗಲ್ಲು ರೋಡ್ ಈಶ್ವರ ದೇವಸ್ಥಾನ ಸೇರಿದಂತೆ ಮುಂತಾದ ಕಡೆ ಮಂಗಳವಾರ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ನಗರದ ಗಾಂಧಿ ಸರ್ಕಲ್ ಬಳಿ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಅವರ 52ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳಿಂದ 52 ಅಡಿ ಎತ್ತರದ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಅವರ ಬೃಹತ್ ಕಟೌಟ್ ಎಲ್ಲಾರ ಗಮನ ಸೆಳೆಯಿತು.

ನಗರಸಭೆ ಮಾಜಿ ಅಧ್ಯಕ್ಷರುಗಳಾದ ಸಿ.ಟಿ.ಕೃಷ್ಣಮೂರ್ತಿ, ಹೆಚ್.ಸಿ.ನಿರಂಜನಮೂರ್ತಿ, ಮಂಜುನಾಥಗೊಪ್ಪೆ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ
ಆರ್.ಕೆ.ಸರ್ದಾರ್, ಸೂರಪ್ಪ, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರುಗಳಾದ ಹೆಚ್.ಅಂಜಿನಪ್ಪ, ಸುರೇಶ್, ಸೈಟ್ ಬಾಬಣ್ಣ, ಕೆಪಿಸಿಸಿ. ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ಉಪ ವಿಭಾಗಾಧಿಕಾರಿ ಕಾಂತರಾಜು, ಸಮಾಜ ಕಲ್ಯಾಣ ಇಲಾಖೆಯ ಪರಮೇಶ್ವರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ್, ಶಿಕ್ಷಕಿ ಬಿ.ಟಿ.ಲೋಲಾಕ್ಷಮ್ಮ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ,
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಉಪಾಧ್ಯಕ್ಷರುಗಳಾದ ಡಿ.ಟಿ.ವೆಂಕಟೇಶ್, ನಜ್ಮತಾಜ್, ಎಸ್.ಎನ್.ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಆರ್.ಶಿವಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತ ನಂದಿನಿಗೌಡ, ಮೆಹಬೂಬ್‍ಖಾತೂನ್, ಬಸಮ್ಮ, ರೇಣುಕ, ಇಂದಿರಾ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್, ಮುದಸಿರ್ ನವಾಜ್, ಪ್ರಕಾಶ್‍ರಾಮನಾಯ್ಕ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಪರಿಶಿಷ್ಟ ವರ್ಗ ವಿಭಾಗದ ಅಧ್ಯಕ್ಷ, ಮಂಜುನಾಥ್, ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಸೈಯದ್ ಮೊಹಿದ್ದೀನ್(ಚೋಟು) ಸೈಯದ್ ಸೈಫುಲ್ಲಾ, ಅಲ್ಲಾಭಕ್ಷಿ, ಚಾಂದ್‍ಪೀರ್, ಸೈಯದ್ ಅಕ್ಬರ್,ವಸೀಂ, ರೈತ ಘಟಕದ ಅಧ್ಯಕ್ಷ ನಾಗರಾಜ್, ಅಬ್ದುಲ್ಲಾ, ವಕೀಲರುಗಳಾದ ಸುದರ್ಶನ್, ಬೀಸ್ನಳ್ಳಿ ಜಯಣ್ಣ, ರವಿ, ಶರಣಪ್ಪ ಸೇರಿದಂತೆ ನೂರಾರು ಅಭಿಮಾನಿಗಳು ಹುಟ್ಟು ಹಬ್ಬ ಆಚರಣೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *