ಜುಲೈ 13ರಂದು ವರುಣನ ಕೃಪೆಗಾಗಿ ಭೀಮಸಮುದ್ರ ಸಮೀಪದ ಹುಲ್ಲೂರಿನಲ್ಲಿ ವಿಶೇಷ ಯಾಗ.

ಭೀಮಸಮುದ್ರ, ಜು. 11:

ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203

ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಸಮೀಪದ ಹುಲ್ಲೂರು ಗ್ರಾಮದ ಶ್ರೀ ಕಾಳಿಕಾಂಬ ದೇವಿ ದೇವಸ್ಥಾನದ ಆವರಣದಲ್ಲಿ ಲೋಕಕಲ್ಯಾಣ, ಉತ್ತಮ ಮಳೆ ಹಾಗೂ ವರುಣ ದೇವರ ಅನುಗ್ರಹಕ್ಕಾಗಿ ವಿಶೇಷ ಯಾಗವನ್ನು ಜುಲೈ 13, 2026ರಂದು (ಸೋಮವಾರ) ಭಕ್ತಿಭಾವದಿಂದ ಆಯೋಜಿಸಲಾಗಿದೆ.

ದೇವಸ್ಥಾನ ಸಮಿತಿಯ ಪ್ರಕಟಣೆ ಪ್ರಕಾರ, ಬೆಳಿಗ್ಗೆ 7.20 ಗಂಟೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬಳಿಕ ಬೆಳಿಗ್ಗೆ 11.00 ಗಂಟೆಗೆ ಅಂಕಲೇರಿ ಬೆಟ್ಟದಲ್ಲಿ ಗಂಗೆ ಪೂಜೆ ನಡೆಯಲಿದ್ದು, 11.30 ಗಂಟೆಗೆ ಹುಲ್ಲೂರು ಕೆರೆಯಲ್ಲಿರುವ ನಾಗರಕಟ್ಟೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ನಂತರ ಶೋಭಾಯಾತ್ರೆ ನಡೆಸಿ ಯಾಗದ ಪ್ರಮುಖ ವಿಧಿವಿಧಾನಗಳನ್ನು ಆರಂಭಿಸಲಾಗುತ್ತದೆ.

ಭಕ್ತರಿಗಾಗಿ ಮಧ್ಯಾಹ್ನ 1.00 ಗಂಟೆಗೆ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನದ ಸಮಿತಿಯವರು ತಿಳಿಸಿದ್ದಾರೆ.

ಈ ಮಹತ್ವದ ಯಾಗವು ಜೋಡಿ ಮುನೇಶ್ವರ ಸ್ವಾಮಿ ಹಾಗೂ ಬೆಂಗಳೂರು ಅಂದ್ರಳ್ಳಿ ಶ್ರೀ ಶ್ರೀ ಶಿವಶಂಕರ ಗುರೂಜಿ ಅವರ ನೇತೃತ್ವದಲ್ಲಿ ನಡೆಯಲಿದ್ದು, ರಾಜ್ಯದ ಸುಭಿಕ್ಷತೆ, ರೈತರ ಒಳಿತಿಗಾಗಿ ಹಾಗೂ ಸಮರ್ಪಕ ಮಳೆಯಾಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಕಮಿಟಿಯವರು ಸಾರ್ವಜನಿಕರಿಗೆ ಆಹ್ವಾನ ನೀಡಿದ್ದಾರೆ.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *