ಮಧ್ಯಾಹ್ನದ ಊಟದ ನಂತರ ಕಣ್ಣುಗಳು ಭಾರವಾಗುವುದು, ದೇಹದಲ್ಲಿ ಆಲಸ್ಯ ಮೂಡುವುದು ಹಾಗೂ ತಕ್ಷಣ ಮಲಗಬೇಕು ಎನಿಸುವುದು ಸಾಮಾನ್ಯ. ಆದರೆ, ಪ್ರತಿದಿನ ಊಟದ ನಂತರ ವಿಪರೀತ ನಿದ್ದೆ ಬರುತ್ತಿದ್ದರೆ, ದಿನವಿಡೀ ಆಯಾಸ ಕಾಡುತ್ತಿದ್ದರೆ ಅದನ್ನು ಕೇವಲ “ಹೊಟ್ಟೆ ತುಂಬಿದ ಪರಿಣಾಮ” ಎಂದು ನಿರ್ಲಕ್ಷಿಸುವಂತಿಲ್ಲ.
ಊಟದ ನಂತರ ನಿದ್ದೆ ಬರಲು ಪ್ರಮುಖ ಕಾರಣಗಳೇನು?
- ಕಾರ್ಬೋಹೈಡ್ರೇಟ್‌ಗಳ ಪ್ರಭಾವ: ಕ್ಲೀವ್‌ಲ್ಯಾಂಡ್ ಕ್ಲಿನಿಕ್ (Cleveland Clinic) ವರದಿ ಪ್ರಕಾರ, ಅನ್ನ, ಬ್ರೆಡ್, ಆಲೂಗಡ್ಡೆಯಂತಹ ಕಾರ್ಬೋಹೈಡ್ರೇಟ್-ಭರಿತ ಆಹಾರಗಳನ್ನು ಅತಿಯಾಗಿ ಸೇವಿಸಿದಾಗ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟದಲ್ಲಿ ಏರುಪೇರಾಗುತ್ತದೆ. ಇದು ತಕ್ಷಣದ ಆಯಾಸ ಮತ್ತು ನಿದ್ದೆಗೆ ಕಾರಣವಾಗುತ್ತದೆ.
- ಪ್ರೋಟೀನ್ ಅಂಶದ ಪಾತ್ರ: ಮೊಟ್ಟೆ, ಮಾಂಸ ಮತ್ತು ಬೇಳೆಕಾಳುಗಳಲ್ಲಿ ‘ಟ್ರಿಪ್ಟೋಫಾನ್’ (Tryptophan) ಎಂಬ ಅಮೈನೋ ಆಮ್ಲವಿರುತ್ತದೆ. ಇದು ನಿದ್ದೆ ಮತ್ತು ವಿಶ್ರಾಂತಿಗೆ ಪ್ರೇರೇಪಿಸುವ ರಾಸಾಯನಿಕಗಳನ್ನು ದೇಹದಲ್ಲಿ ಬಿಡುಗಡೆ ಮಾಡುತ್ತದೆ.
- ಅತಿಯಾದ ಆಹಾರ ಸೇವನೆ: ಜೀರ್ಣಕ್ರಿಯೆ ಪ್ರಕ್ರಿಯೆಗೆ ದೇಹದ ಹೆಚ್ಚಿನ ಶಕ್ತಿ ಬಳಕೆಯಾಗುತ್ತದೆ. ಹೊಟ್ಟೆ ಬಿರಿಯುವಂತೆ ತಿಂದಾಗ, ಅದರಲ್ಲೂ ಎಣ್ಣೆಯುಕ್ತ, ಸಂಸ್ಕರಿಸಿದ ಮತ್ತು ಸಿಹಿ ಪದಾರ್ಥಗಳನ್ನು ಹೆಚ್ಚು ತಿಂದಾಗ ಆಲಸ್ಯ ಸಹಜವಾಗಿಯೇ ಹೆಚ್ಚಾಗುತ್ತದೆ.
- ರಾತ್ರಿಯ ನಿದ್ದೆಯ ಕೊರತೆ: ಹಿಂದಿನ ರಾತ್ರಿ ಸರಿಯಾಗಿ ನಿದ್ದೆ ಮಾಡದಿದ್ದರೆ, ಮರುದಿನ ಹಗಲಿನಲ್ಲಿ ಆಯಾಸ ಹೆಚ್ಚಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಊಟದ ಬಳಿಕ ದೇಹವು ವಿಪರೀತ ಸುಸ್ತನ್ನು ಅನುಭವಿಸುತ್ತದೆ.
ಈ ಸಮಸ್ಯೆಯನ್ನು ತಡೆಯಲು ಸರಳ ಪರಿಹಾರಗಳು
- ಮಿತವಾದ ಆಹಾರ ಸೇವನೆ: ಒಂದೇ ಬಾರಿಗೆ ಅತಿಯಾಗಿ ತಿನ್ನುವ ಬದಲು, ಹಿತಮಿತವಾಗಿ ಊಟ ಮಾಡಿ. ಹೊಟ್ಟೆ ತುಂಬಿದರೂ ಇನ್ನಷ್ಟು ತಿನ್ನುವ ಅಭ್ಯಾಸವನ್ನು ಬಿಡಿ.
- ಸಮತೋಲಿತ ಡಯಟ್: ನಿಮ್ಮ ಊಟದಲ್ಲಿ ಹೆಚ್ಚು ತರಕಾರಿಗಳು, ಸಿರಿಧಾನ್ಯಗಳು ಹಾಗೂ ಸೂಕ್ತ ಪ್ರಮಾಣದ ಪ್ರೋಟೀನ್ ಇರಲಿ. ಅತಿಯಾದ ಸಕ್ಕರೆ ಮತ್ತು ಜಂಕ್ ಫುಡ್‌ಗಳಿಗೆ ಕಡಿವಾಣ ಹಾಕಿ.
- ಲಘು ನಡಿಗೆ: ಊಟ ಮಾಡಿದ ತಕ್ಷಣ ಕುಳಿತುಕೊಳ್ಳುವ ಅಥವಾ ಮಲಗುವ ಬದಲು, ಸ್ವಲ್ಪ ಸಮಯದ ಕಾಲ ನಿಧಾನವಾಗಿ ವಾಕ್ ಮಾಡಿ. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಸುಸ್ತನ್ನು ಕಡಿಮೆ ಮಾಡುತ್ತದೆ.
- ಸಾಕಷ್ಟು ನೀರು ಕುಡಿಯಿರಿ: ದಿನವಿಡೀ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಿ ಮತ್ತು ಪ್ರತಿದಿನ ರಾತ್ರಿ ಅಗತ್ಯವಿರುವಷ್ಟು (ಕನಿಷ್ಠ 7-8 ಗಂಟೆ) ನಿದ್ದೆ ಮಾಡುವುದನ್ನು ರೂಢಿಸಿಕೊಳ್ಳಿ.
ವೈದ್ಯರ ಸಲಹೆ ಯಾವಾಗ ಅಗತ್ಯ? ನೀವು ಸರಿಯಾದ ಆಹಾರ ಕ್ರಮ ಮತ್ತು ನಿದ್ದೆಯ ನಿಯಮ ಪಾಲಿಸಿದರೂ, ಊಟದ ನಂತರದ ತೀವ್ರ ಆಯಾಸ ನಿಮ್ಮ ದೈನಂದಿನ ಕೆಲಸಗಳಿಗೆ ಅಡ್ಡಿಯಾಗುತ್ತಿದ್ದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j