ಚಿತ್ರದುರ್ಗ: ನಗರದ ಪ್ರತಿಷ್ಠಿತ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ (ರಾಜ್ಯ ಪಠ್ಯಕ್ರಮ ವಿಭಾಗ) ವಿದ್ಯಾರ್ಥಿಗಳು ಇತ್ತೀಚೆಗೆ (ಸೆಪ್ಟೆಂಬರ್ 03 ಮತ್ತು 04, 2026ರಂದು) ನಗರದಲ್ಲಿ ನಡೆದ 17 ವರ್ಷದೊಳಗಿನವರ ಹೋಬಳಿ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ತಾಲೂಕು ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ಶಾಲೆಯ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಮುಡಿಗೇರಿಸಿಕೊಂಡಿದ್ದು, ವಿಜೇತರ ವಿವರ ಈ ಕೆಳಗಿನಂತಿದೆ:
- ಸಮೃತ್ ಪಿ.ಸಿ (10ನೇ ತರಗತಿ): 800ಮೀ, 1500ಮೀ, 3000ಮೀ ಓಟ ಹಾಗೂ 4X400ಮೀ ರಿಲೇಯಲ್ಲಿ ಪ್ರಥಮ ಸ್ಥಾನ; 4X100ಮೀ ರಿಲೇಯಲ್ಲಿ ದ್ವಿತೀಯ ಸ್ಥಾನ.
- ಇಂದುಧರ್ ಆರ್ (10ನೇ ತರಗತಿ): 110ಮೀ ಮತ್ತು 400ಮೀ ಹರ್ಡಲ್ಸ್ ಹಾಗೂ 4X400ಮೀ ರಿಲೇಯಲ್ಲಿ ಪ್ರಥಮ ಸ್ಥಾನ; 4X100ಮೀ ರಿಲೇಯಲ್ಲಿ ದ್ವಿತೀಯ ಸ್ಥಾನ.
- ವಿನಯ್ ಆರ್.ಎಲ್ (10ನೇ ತರಗತಿ): 4X100ಮೀ ರಿಲೇಯಲ್ಲಿ ದ್ವಿತೀಯ ಸ್ಥಾನ; 200ಮೀ ಓಟದಲ್ಲಿ ತೃತೀಯ ಸ್ಥಾನ.
- ಗಗನ್ ಬಾಗೇವಾಡಿ (9ನೇ ತರಗತಿ): ಹ್ಯಾಮರ್ ಥ್ರೋ ವಿಭಾಗದಲ್ಲಿ ಪ್ರಥಮ ಸ್ಥಾನ.
- ಉಮಾಶಂಕರ್ (9ನೇ ತರಗತಿ): 110ಮೀ ಹರ್ಡಲ್ಸ್‌ನಲ್ಲಿ ದ್ವಿತೀಯ ಸ್ಥಾನ; 400ಮೀ ಹರ್ಡಲ್ಸ್‌ನಲ್ಲಿ ತೃತೀಯ ಸ್ಥಾನ.
- ವಿಕಾಸ್ ನಾಯಕ್ ಕೆ.ಎಂ (9ನೇ ತರಗತಿ): 4X400ಮೀ ರಿಲೇಯಲ್ಲಿ ಪ್ರಥಮ ಸ್ಥಾನ; ತ್ರಿವಿಧ ಜಿಗಿತ (ಟ್ರಿಪಲ್ ಜಂಪ್) ದಲ್ಲಿ ದ್ವಿತೀಯ ಸ್ಥಾನ.
- ಸುಹಾಸ್ ಡಿ.ವಿ (10ನೇ ತರಗತಿ): 4X400ಮೀ ರಿಲೇಯಲ್ಲಿ ಪ್ರಥಮ ಸ್ಥಾನ; 4X100ಮೀ ರಿಲೇಯಲ್ಲಿ ದ್ವಿತೀಯ ಸ್ಥಾನ.
ಹೋಬಳಿ ಮಟ್ಟದಲ್ಲಿ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುವ ಈ ಎಲ್ಲಾ ಕ್ರೀಡಾಪಟುಗಳನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಿ. ವಿಜಯ್ ಕುಮಾರ್, ನಿರ್ದೇಶಕರಾದ ಶ್ರೀ ಎಸ್.ಎಂ ಪೃಥ್ವೀಶ್, ಶ್ರೀಮತಿ ಸುನಿತಾ ಪಿ.ಸಿ, ಐಸಿಎಸ್‌ಇ ವಿಭಾಗದ ಪ್ರಾಚಾರ್ಯರಾದ ಬೀನಾ ಎ. ಜಾನ್, ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ಎನ್.ಜಿ ಹಾಗೂ ಶಾಲೆಯ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಶ್ಲಾಘಿಸಿ, ಶುಭಕೋರಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j