ಚಿತ್ರದುರ್ಗ ನ. 9:
ಫೋಟೋ ಮತ್ತು ವರದಿ ಕೃಪೆ, ಸುರೇಶ್ ಪಟ್ಟಣ್
ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಚಲವಾದಿ ನಾರಾಯಣಸ್ವಾಮಿ ಅವರ ಮನೆ ಹಾಗೂ ಗೃಹ ಕಚೇರಿಗೆ ಬ್ಲಿಂಕಿಟ್ ಮುಖಾಂತರ ಚಾಕು, ಚೂರಿ ಮತ್ತು ಮಾರಕಾಸ್ತ್ರಗಳನ್ನು ಕಳುಹಿಸುವ ವ್ಯವಸ್ಥಿತ ಪಿತೂರಿಯನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ‘ಗುಂಡಾ ನೀತಿ’ ಜಾರಿಯಲ್ಲಿದ್ದು, ಇದನ್ನು ಖಂಡಿಸಿ ಸೋಮವಾರ ಚಿತ್ರದುರ್ಗ ನಗರದಲ್ಲಿ ಬಿಜೆಪಿ ಎಸ್.ಸಿ.ಮೋರ್ಚಾದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಲಾಯಿತು. ಅಲ್ಲಿಂದ ಒನಕೆ ಓಬವ್ವ ವೃತ್ತಕ್ಕೆ ಜಾಮಾಯಿಸಿದ ಕಾರ್ಯಕರ್ತರು ಮುಖಂಡರು ದಾರಿಯುದ್ದಕ್ಕೂ ಕಾಂಗ್ರೆಸ್ ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ದ ಘೋಷಣೆಗಳನ್ನು ಕೂಗಿದರು, ದಾರಿಯ ಮಧ್ಯದಲ್ಲಿ ಇದ್ದ ಕಾಂಗ್ರೆಸ್ ಕಚೇರಿಗೆ ನುಗ್ಗಲೆತ್ನಿಸಿದಾಗ ಆರಕ್ಷಕರು ಅವರನ್ನು ತಡೆದು ಬೇರೆ ಕಡೆಗೆ ಕರೆದ್ಯೂದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಿ.ಎಚ್.ಮೋಹನ್ ಕುಮಾರ್, ಪ್ರಿಯಾಂಕಾ ಖರ್ಗೆ ಅವರು ರಾಜ್ಯದ ಗೃಹಮಂತ್ರಿಯಾಗಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿತ್ತು. ಆದರೆ, ಅವರು ಕೇವಲ ಆರ್ಎಸ್ಎಸ್ ಸಂಸ್ಥೆಯನ್ನು ಟೀಕಿಸುವುದರಲ್ಲೇ ತಮ್ಮ ಗೃಹ ಸಚಿವರ ಕೆಲಸವನ್ನು ಕಳೆದುಕೊಂಡಿದ್ದಾರೆ ಎಂದು ಟೀಕಿಸಿ, ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ 15 ಮತ್ತು ಮೂರಕ್ಕೆ ಮತ್ತೆ ನ್ಯಾಯಾಂಗ ಹಿನ್ನಡೆಯಾಗಿದೆ. ಕರ್ನಾಟಕ ಸರ್ಕಾರ ಅಡ್ವೋಕೆಟ್ ಜನರಲ್ ಮುಖಾಂತರ ಒಂದು ವ್ಯವಸ್ಥಿತವಾದ ವಾದವನ್ನು ಮಂಡಿಸದೆ, ತನ್ನ ವಿಫಲತೆಯನ್ನು ಮುಚ್ಚಿಹಾಕುವುದಕ್ಕೋಸ್ಕರ ಬೇರೆ ಬೇರೆ ತರಹದ ಪ್ರಕ್ರಿಯೆಗಳನ್ನು ಆರಂಭಿಸಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯಗಳು, ವಿಶೇಷವಾಗಿ ಎಸ್ಸಿಪಿ/ಟಿಎಸ್ಪಿ ನಿಧಿಯನ್ನು ಮೂರು ವರ್ಷಗಳಲ್ಲಿ 56,000 ಕೋಟಿ ರೂ. ಅನುದಾನವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿ ರುವುದರ ಬಗ್ಗೆ ಗೃಹ ಸಚಿವರು ಇದುವರೆಗೆ ಯಾವುದೇ ಉಸಿರುಬಿಡುತ್ತಿಲ್ಲ ಅಲ್ಲದೆ, ರಾಜ್ಯದಲ್ಲಿ ಸುಮಾರು 22 ದಲಿತರ ಹತ್ಯೆಗಳಾಗಿದ್ದರೂ ಆ ಬಗ್ಗೆಯೂ ಪ್ರಿಯಾಂಕಾ ಖರ್ಗೆ ಅವರು ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರಿಯಾಂಕಾ ಖರ್ಗೆ ಅವರು ತಾವೊಂದು ದಲಿತ ಕೋಟಾದಲ್ಲಿ ಗೃಹ ಸಚಿವರಾಗಿದ್ದು, ಆ ಕೋಟಾದಲ್ಲಿ ನ್ಯಾಯ ಒದಗಿಸಬೇಕು ಅಂದರೆ ದಲಿತರಿಗೆ ಜನಪರ ಕಲ್ಯಾಣ ಕೆಲಸಗಳನ್ನು ಮಾಡುವುದರ ಮುಖಾಂತರ ಆ ಸಮಾಜದಿಂದ ಆಯ್ಕೆಯಾಗಿ, ಆ ಸಮಾಜದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಬೇಕು. ಅದನ್ನು ಬಿಟ್ಟು ಆರ್ಎಸ್ಎಸ್ ಅನ್ನು ಟೀಕಿಸುವುದೇ ಕೆಲಸವಾಗಿದೆ ಎಂದು ದೂರಿದರು.
ಬಿಜೆಪಿಯ ಮತ್ತೋರ್ವ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಕುಂಠಿತಗೊಂಡಿವೆ ಸರ್ಕಾರವು ತನ್ನ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತು ರಾಜ್ಯದ ಯುವಜನತೆಯನ್ನು ದಾರಿ ತಪ್ಪಿಸಲು ವಿರೋಧ ಪಕ್ಷದ ನಾಯಕರ ಮನೆಗೆ ಬ್ಲಿಂಕಿಟ್ ಮುಖಾಂತರ ಚಾಕು-ಚೂರಿಗಳನ್ನು ಕಳುಹಿಸುವ ಕೃತ್ಯಗಳಲ್ಲಿ ನಿರತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದಿನ ಗೃಹ ಮಂತ್ರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಮತ್ತು ಅವರ ಗುಪ್ತಚರ ಇಲಾಖೆಯು ಸಂಪೂರ್ಣವಾಗಿ ವಿಫಲವಾಗಿದೆ ಬ್ಲಿಂಕಿಟ್ ಮೂಲಕ ಈ ಕೃತ್ಯ ಎಸಗಿದವರನ್ನು ಇದುವರೆಗೆ ಬಂಧಿಸುವ ಕೆಲಸವನ್ನು ಮಾಡಲಾಗಿಲ್ಲ. ಒಂದು ವೇಳೆ ತಮ್ಮದೇ ಸರ್ಕಾರವಿದ್ದು, ತಮ್ಮ ಗೃಹ ಇಲಾಖೆ ಇದ್ದಿದ್ದರೆ ಇಷ್ಟೊತ್ತಿಗೆ ಅಂತಹವರನ್ನು ಒದ್ದು ಒಳಹಾಕುವ ಕೆಲಸ ಮಾಡಲಾಗುತ್ತಿತ್ತು ತಪ್ಪಿತಸ್ಥರು ತಮ್ಮ ಪಕ್ಷದ ಕಾರ್ಯಕರ್ತರಾಗಿದ್ದರೂ ಸಹ ಅವರನ್ನು ಒಳಹಾಕುವ ಕೆಲಸ ಮಾಡಬೇಕಿತ್ತು ಆದರೆ ಸರ್ಕಾರ ಅವರಿಗೆ ಪುಷ್ಟಿ ನೀಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಡಾ.ಸಿದ್ದಾರ್ಥ ಗುಂಡಾರ್ಪಿ ಮಾತನಾಡಿ, ಮುಂದಿನ ದಿನಗಳಲ್ಲಿ ಈ ರೀತಿಯ ಚಾಕು-ಚೂರಿಯ ಸಂಸ್ಕೃತಿ ಮತ್ತು ‘ಗುಂಡಾ ಸಂಸ್ಕೃತಿ’ಯನ್ನು ನಾಗರಿಕ ಸಮಾಜ ಒಪ್ಪುವುದಿಲ್ಲ. ಬರುವ ದಿನಗಳಲ್ಲಿ ಬಿಜೆಪಿ ಈ ಗುಂಡಾ ನೀತಿಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಿದ್ದು, ಕಾಂಗ್ರೆಸ್ ಪಕ್ಷದ ಆಡಳಿತವನ್ನು ಬುಡಸಮೇತ ಕಿತ್ತಾಕಲು ಪಕ್ಷದ ಎಲ್ಲ ಕಾರ್ಯಕರ್ತರು ಒಗ್ಗೂಡಿ ಹೋರಾಟ ನಡೆಸಲಿದ್ದಾರೆ ಕೊತ್ವಲ್ ತೋಟವನ್ನೇ ಕಾಯಲು ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಕಷ್ಟಪಡುತ್ತಿದ್ದು, ವಿಶೇಷವಾಗಿ ಗೃಹ ಸಚಿವರಾದ ಪ್ರಿಯಾಂಕಾ ಖರ್ಗೆ ಅವರ ಹುದ್ದೆಯಲ್ಲಿದ್ದಾಗ ಇಂತಹ ಪ್ರಕರಣಗಳು ಅತಿ ಹೆಚ್ಚು ಬೆಳಕಿಗೆ ಬರುತ್ತಿವೆ ಅದನ್ನು ಭಾರತೀಯ ಜನತಾ ಪಾರ್ಟಿ ತೀವ್ರವಾಗಿ ವಿರೋಧಿಸುತ್ತದೆ ಎಂದರು.
ಬಿಜೆಪಿ ಎಸ್.ಸಿ. ಮೋರ್ಚಾದ ಜಿಲ್ಲಾಧ್ಯಕ್ಷ ಪರಶುರಾಮ್ ಮಾತನಾಡಿ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಸರ್ಕಾರದ ಬಳಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಹಣವಿಲ್ಲದೆ, ಕೇವಲ ಕಾಲಹರಣ ಮಾಡುತ್ತಿದೆ ಸರ್ಕಾರದ ಬಳಿ ಯಾವುದೇ ಮುಂದಿನ ಮೂಲಭೂತ ಸೌಕರ್ಯಗಳ ಇಲ್ಲದಿರುವ ಕಾರಣ, ರಾಜ್ಯದ ಜನತೆಯನ್ನು ಹಾಗೂ ಯುವಜನತೆಯನ್ನು ದಾರಿ ತಪ್ಪಿಸಲು ಇಂತಹ ಕೃತ್ಯಗಳನ್ನು ಮಾಡಲಾಗುತ್ತಿದೆ ವಿರೋಧ ಪಕ್ಷದ ನಾಯಕರಾದ ಚಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಬ್ಲಿಂಕಿಟ್ ಮೂಲಕ ಚಾಕು-ಚೂರಿಗಳನ್ನು ಕಳುಹಿಸಿ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದರು.
ಈ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಗ್ರಾಮಾಂತರ ಅಧ್ಯಕ್ಷ ನಾಗರಾಜ್,ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಚಳ್ಳಕೆರೆ ಮಂಡಲ ಅಧ್ಯಕ್ಷ ಸುರೇಶ್, ಎಸ್.ಸಿ.ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೇತನ್ ಕುಮಾರ್, ನಾಗರಾಜ್, ನಗರ ಪ್ರಧಾನ ಕಾರ್ಯದರ್ಶಿ ಬಸವೇಶ್, ಲೀಲಾವತಿ, ಜಿಲ್ಲಾ ಕಾರ್ಯದರ್ಶಿ ಚಂದ್ರು, ನಗರ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಸಾಮಾಜಿಕ ಜಾಲ ತಾಣದ ಸಂಚಾಲಕ ಹನುಮಂತಪ್ಪ ಉಪ್ಪಾರ್, ಗ್ರಾಮಾಂತರ ಎಸ್.ಟಿ.ಮೋರ್ಚಾದ ಅಧ್ಯಕ್ಷ ಪ್ರಸಾದ್ ಬಾಬು, ಅರುಣ್, ನಟರಾಜ್, ಪ್ರಶಾಂತ್, ದಯಾನಂದ್, ಅಶೋಕ್, ಯಶವಂತ, ಚಂದ್ರಣ್ಣ, ರೋಹಿತ್, ಭರತ್, ಮಣಿಕಂಠ, ಚಿರಾಗ್, ಸೇತುರಾಮ್, ತಿಪ್ಪೇಶಿ, ಪ್ರಕಾಶ್ ಮೂರ್ತಿ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರ ಹಾಜರಿದ್ದರು.