ಚಿತ್ರದುರ್ಗದಲ್ಲಿ ನ. 11ರಂದು ಮುಸ್ಲಿಮರ 2ಬಿ ಮೀಸಲಾತಿ ಕುರಿತು ಸಮಾಲೋಚನಾ ಸಭೆ.

ಚಿತ್ರದುರ್ಗ ನ. 09

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್

ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟ ಸಮಿತಿ-ಕರ್ನಾಟಕ ಇದರ ವತಿಯಿಂದ 2ಬಿ ಮುಸ್ಲಿಮರ ಮೀಸಲಾತಿ ಕುರಿತು ಮುಂದಿನ ಸವಾಲುಗಳ ಕುರಿತ ಸಮಾಲೋಚನಾ ಸಭೆಯು ನ. 11ರ ಬುಧವಾರ 10.30ಕ್ಕೆ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.ಚಿಂತಕರಾದ ಶಿವಸುಂದರ್ ವಿಷಯವನ್ನು ಮಂಡನೆ ಮಾಡಲಿದ್ದಾರೆ.

ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟ ಸಮಿತಿಯ ಮುಖಂಡರಾದ ಟಿ.ಶಫೀವುಲ್ಲಾ, ಟಿಪ್ಪು ಕ್ರಾಂತಿ ಸೇನೆ, ಕರ್ನಾಟಕದ ಸಂಸ್ಥಾಪಕ ಅಧ್ಯಕ್ಷರಾದ ಡಾ.ದಸ್ತಗೀರ ಮುಲ್ಲಾ, ಹಜರತ್ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ(ರಿ.)ಯ ಅಧ್ಯಕ್ಷರಾದ ಖಾಸಿಂ ಅಲಿ, ಚಿತ್ರದುರ್ಗ ಜಿಲ್ಲಾ ಸಭಾಪಾಲಕರ ಕ್ಷೇಮಾಭಿವೃದ್ಧಿ ಸಂಘದ ಸೋಲೋಮನ್ ರಾಜ್‍ಕುಮಾರ್, ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಇಸ್ಮಾಯಿಲ್, ಜಮಾಅತ್ ಎ ಇಸ್ಲಾಮಿ ಹಿಂದ್, ಚಿತ್ರದುರ್ಗ ಹಾಗೂ ಮಾನವ ಬಂಧುತ್ವ ವೇದಿಕೆಯ ಜುಬೇರ್ ಅನಾರಿ ಭಾಗವಹಿಸಲಿದ್ದು, ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟ ಸಮಿತಿಯ ಮುಖಂಡರಾದ : ಎ.ಸಾದಿಕ್‍ವುಲ್ಲಾ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

Leave a Reply

Your email address will not be published. Required fields are marked *