ಚಿತ್ರದುರ್ಗ ನ. 09
ವರದಿ ಮತ್ತು ಫೋಟೋ ಕೃಪೆ, ಸುರೇಶ್ ಪಟ್ಟಣ್
ಸಂಸ್ಕಾರ ಭಾರತೀ, ಕರ್ನಾಟಕ ದಕ್ಷಿಣ ಪ್ರಾಂತ ಸಾಹಿತ್ಯ ವಿಭಾಗ ಸಂಸ್ಕಾರ ಭಾರತೀ, ಚಿತ್ರದುರ್ಗ ಜಿಲ್ಲಾ ಸಮಿತಿ ಮತ್ತು ಎಸ್.ಆರ್.ಎಸ್ ಬಿಎಡ್ ಮಹಾವಿದ್ಯಾಲಯ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಆದಿಕವಿ, ರಸಕವಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಶ್ರೀಮದ್ ರಾಮಾಯಣದ ಪ್ರಸ್ತುತತೆ: ಇಂದು – ಇಂದು ವಿಶೇಷ ಭಾಷಣ ಮತ್ತು ಸಂವಾದ ಕಾರ್ಯಕ್ರಮವೂ ನ. 12ರ ಗುರುವಾರ ಬೆಳಗ್ಗೆ 10:30 ಎಸ್ ಆರ್ ಎಸ್ ಬಿಎಡ್ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತ್ಯ ವಿಭಾಗ ಪ್ರಮುಖರು, ದಕ್ಷಿಣ ಪ್ರಾಂತ ಸಂಸ್ಕಾರ ಭಾರತೀ ಕರ್ನಾಟಕಸಂಚಾಲಕರಾದ ಡಾ. ಕೆ ರಾಜೀವಲೋಚನ ತಿಳಿಸಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಮತ್ತು ಉದ್ಘಾಟನೆಯನ್ನು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು ನಡೆಸಲಿದ್ದಾರೆ. ಅಂಗವಾಗಿ ಶ್ರೀಮದ್ ರಾಮಾಯಣದ ಪ್ರಸ್ತುತತೆ: ಇಂದು -ಇಂದು ವಿಶೇಷ ಭಾಷಣವನ್ನು ವಿದ್ವಾಂಸರು ಮತ್ತು ವ್ಯಾಖ್ಯಾನಕಾರರಾದ ಶ್ರೀಮತಿ ಶಾಂತಾ ಗೋಪಾಲ್ ನಡೆಸಿಕೊಡಲಿದ್ದಾರೆ.
ಕಾರ್ಯಕ್ರಮದಲ್ಲಿ ಎಸ್ ಆರ್ ಎಸ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ರವಿ ಟಿ ಎಸ್. ಸಾಹಿತ್ಯ ವಿಭಾಗದ ಸಂಚಾಲಕರು, ಸಂಸ್ಕಾರ ಭಾರತಿ ಚಿತ್ರದುರ್ಗ ಜಿಲ್ಲಾ ಸಮಿತಿಯ ಮುಖ್ಯಸ್ಥೆ ಶ್ರೀಮತಿ. ಚಂದ್ರಿಕಾ ಆರ್. ಸುರೇಶ್, ಸಂಸ್ಕಾರ ಭಾರತೀ ಚಿತ್ರದುರ್ಗ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ ರಾವ್ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಕಾರ ಭಾರತಿ, ಚಿತ್ರದುರ್ಗ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಉಮೇಶ್ ವೀರಣ್ಣ ತುಪ್ಪದ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.