ಚಿತ್ರದುರ್ಗ ಜೂ. 29
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಜಿಲ್ಲಾ ಶಾಖೆ ಭಾರತೀಯ ವೈದ್ಯಕೀಯ ಸಂಘ, ಹಾಗೂ ಕೋಟೆ ನಾಡು ಕಲ್ಯಾಣ ಪ್ರತಿಷ್ಠಾನ, ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ-2026 ಅಂಗವಾಗಿ ವಿಶ್ವ ರಕ್ತದಾನಿಗಳ ದಿನ ರಕ್ತದಾನ ಶಿಬಿರವೂ ನಗರದ ಐ.ಎಂ.ಎ. ಸಭಾಂಗಣದಲ್ಲಿ ಜೂ. 30ರ ಮಂಗಳವಾರ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್ ವೀರೇಶ್ ತಿಳಿಸಿದ್ದಾರೆ.
ಈ ವರ್ಷದ ವಿಷಯ “ಮಾನವೀಯತೆಯ ಒಂದು ಹನಿ. ರಕ್ತ ನೀಡಿ, ಜೀವಗಳನ್ನು ಉಳಿಸಿ” ಎಂದಾದರೆ ಈ ವರ್ಷದ ಘೋಷಣೆ : ‘ಮಾನವೀಯತರು ಒಂದು ಹನಿ, ರಕ್ತದಾನ ಮಾಡಿ ಜೀವಗಳನ್ನು ಉಳಿಸಿ ಎಂದಾಗಿದೆ. ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿಗಳಾದ ಬಾಬು ಎಂ. ಉದ್ಘಾಟನೆ ಮಾಡಲಿ ದ್ದಾರೆ. ಅಧ್ಯಕ್ಷತೆಯನ್ನು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ : ಡಾ. ಪಾಲಾಕ್ಷಯ್ಯ .ಎಲ್ ವಹಿಸಲಿದ್ದಾರೆ. ಮೇರಾ ಯುವ ಭಾರತ್‍ನ ಜಿಲ್ಲಾ ಯುವ ಜನ ಅಧಿಕಾರಿ ಧನಂಜಯ್ ಜಗತಾಪ್, ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷೆ, ಶ್ರೀಮತಿ. ಗಾಯತ್ರಿ ಶಿವರಾಮ್, ರಾಜ್ಯ ಆಡಳಿತ ಮಂಡಳಿ ಸದಸ್ಯರಾದ ಅನಂತ ರೆಡ್ಡಿ ಎಂ.ಕೆ. ಉಪಾಧ್ಯಕ್ಷರಾದ ಇ. ಅರುಣ್ ಕುಮಾರ್ ಕೋಟೆನಾಡು ವೆಲ್ಫೇರ್ ಫೌಂಡೇಶನ್‍ನ ಅಧ್ಯಕ್ಷರಾದ ಮುಸ್ತಾಕ್ ಅಹ್ಮದ್ (ಮಾನ್) ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಮಜಹರ್ ಉಲ್ಲಾ ಎನ್ ಭಾಗವಹಿಸ ಲಿದ್ದಾರೆ.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: