ಜುಲೈ 18: ಚಿತ್ರದುರ್ಗ ಜಿಲ್ಲೆಯ ಪ್ರಸಿದ್ಧ ಯೋಗ ಶಿಕ್ಷಣ ಸಂಸ್ಥೆಯಾದ ಆಯುಷ್ ಯೋಗಾಸನ ಶಿಕ್ಷಣ, ಕ್ರೀಡಾ ಸಾಂಸ್ಕೃತಿಕ ಕಲ್ಯಾಣಾಭಿವೃದ್ಧಿ ಸಂಘ (ರಿ.), ಅನ್ನಪೂರ್ಣ ನಗರ, ಚಿತ್ರದುರ್ಗ ವತಿಯಿಂದ ಶ್ರೀ ಶಿವ ಗ್ರಾಮಾಂತರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಸಿಂಗಾಪುರ (ಹುಲ್ಲೂರು)ದಲ್ಲಿ ಒಂದು ತಿಂಗಳ ಕಾಲ ಉಚಿತ ಯೋಗ ತರಬೇತಿ ಶಿಬಿರ ಆಯೋಜಿಸಲಾಗಿದೆ.

ಈ ಶಿಬಿರವು ಜುಲೈ 20, 2026ರಿಂದ ಆಗಸ್ಟ್ 20, 2026ರವರೆಗೆ ಪ್ರತಿದಿನ ಬೆಳಿಗ್ಗೆ 5.30 ರಿಂದ 6.45 ಗಂಟೆಯವರೆಗೆ ನಡೆಯಲಿದೆ. ಯೋಗ, ಪ್ರಾಣಾಯಾಮ, ಧ್ಯಾನ, ಆಸನಗಳು ಸೇರಿದಂತೆ ಆರೋಗ್ಯಕರ ಜೀವನಶೈಲಿಗೆ ಅಗತ್ಯವಾದ ವಿವಿಧ ಯೋಗಾಭ್ಯಾಸಗಳನ್ನು ತರಬೇತಿಯಲ್ಲಿ ಕಲಿಸಿಕೊಡಲಾಗುತ್ತದೆ.
ಶಿಬಿರದ ಉದ್ಘಾಟನೆಯನ್ನು ಗಣ್ಯರು ನೆರವೇರಿಸಲಿದ್ದು, ಯೋಗ ಶಿಕ್ಷಕರು ಹಾಗೂ ತಜ್ಞರು ತರಬೇತಿ ನೀಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯಕರ ಜೀವನದತ್ತ ಹೆಜ್ಜೆ ಇಡಬೇಕೆಂದು ಸಂಘವು ಮನವಿ ಮಾಡಿದೆ.
ಈ ಕುರಿತು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಎಲ್.ಎಸ್. ಬಸವರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.